ಕೇಂದ್ರ ಬಜೆಟ್ 2026: ಸತತ 9ನೇ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಬಜೆಟ್ ಮಂಡನೆ, ಅಪಾರ ನಿರೀಕ್ಷೆ

ಈ ಬಾರಿಯ ಬಜೆಟ್ ಕುರಿತು ವಿವಿಧ ವಲಯಗಳು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿವೆ. 140 ಕೋಟಿ ಭಾರತೀಯರ ಕನಸುಗಳು ಈಡೇರಿಸುವ ಹಂಬಲ ಹೊತ್ತಿರುವ ಕೇಂದ್ರ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಇದೆ.
Nirmala sitharaman
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ಕೇಂದ್ರ ಸರ್ಕಾರದ 2026-2027ನೇ ಸಾಲಿನ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಇದರೊಂದಿಗೆ ಸತತ 9ನೇ ಬಜೆಟ್ ಮಂಡಿಸಿದ ಮೊದಲ ಸಚಿವೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಭಾನುವಾರ ಮಂಡಿಸಲಾಗುತ್ತಿರುವ ಈವರೆಗಿನ 2ನೇ ಬಜೆಟ್ ಇದಾಗಿದೆ. ಈ ಹಿಂದೆ 1999ರಲ್ಲಿ ಭಾನುವಾರ ಬಜೆಟ್ ಮಂಡನೆ ಆಗಿತ್ತು. ಆಗ ದಿನಾಂಕಫೆ.28 ಆಗಿತ್ತು ಹಾಗೂ ಯಶವಂತ ಸಿನ್ಹಾ ಹಣಕಾಸು ಸಚಿವರಾಗಿದ್ದರು. ಆದರೆ ನಂತರ ಫೆ.1ಕ್ಕೆ ಬಜೆಟ್ ದಿನಾಂಕ ಬದಲಾಗಿತ್ತು. ಫೆ.1ಕ್ಕೆ ಬಜೆಟ್ ದಿನಾಂಕ ಬದಲಾದ ನಂತರ ಭಾನುವಾರ ಬಜೆಟ್ ಮಂಡನೆ ಇದೇ ಮೊದಲು ಹಾಗೂ ಒಟ್ಟಾರೆ 2ನೇ ಬಜೆಟ್.

ಈ ಬಾರಿಯ ಬಜೆಟ್ ಕುರಿತು ವಿವಿಧ ವಲಯಗಳು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿವೆ. 140 ಕೋಟಿ ಭಾರತೀಯರ ಕನಸುಗಳು ಈಡೇರಿಸುವ ಹಂಬಲ ಹೊತ್ತಿರುವ ಕೇಂದ್ರ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಇದೆ. ದೇಶಧ ಆರ್ಥಿಕ ಚಟುವಟಿಕೆಗೂ ಉತ್ತೇಜನ ನೀಡಬೇಕು, ಹಣದುಬ್ಬರದ ಸುಳಿಗೆ ಸಿಲುಕಿರುವ ಬಡವರು, ಮಧ್ಯಮ ವರ್ಗದ ಜನರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳಿಗೆ ಪೂರಕವಾದ ಬಜೆಟ್ ಮಂಡಿಸುವ ಸವಾಲು ಕೇಂದ್ರದ ಮುಂದಿದೆ. ಹೀಗಾಗಿ ನಿರೀಕ್ಷೆಗಳು ಸಾಕಷ್ಟಿದ್ದು, ಸರ್ಕಾರ ಹೇಗೆ ಸಮತೋಲನ ಸಾಧಿಸಲಿದೆ ಎಂಬ ಕುತೂಹಲವು ಇದೆ.

ಕಳೆದ ವರ್ಷ, ಸೀತಾರಾಮನ್ ಅವರು GST 2.0 ಎಂದು ಕರೆಯಲ್ಪಡುವ ಸರಕು ಮತ್ತು ಸೇವಾ ತೆರಿಗೆ (GST) ಮತ್ತು ವ್ಯಾಪಕ ಆದಾಯ ತೆರಿಗೆಯಲ್ಲಿ ಸುಧಾರಣೆಗಳನ್ನು ಘೋಷಿಸಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಡ್ಡಿ ಕಡಿತದ ಜೊತೆಗೆ, ಇದು ಯುನೈಟೆಡ್ ಸ್ಟೇಟ್ಸ್ (US) ವಿಧಿಸಿದ ಶೇಕಡಾ 50 ರಷ್ಟು ಸುಂಕಗಳ ಹೊರತಾಗಿಯೂ ಭಾರತೀಯ ಆರ್ಥಿಕತೆಯು ಹಾದಿಯಲ್ಲಿ ಉಳಿಯಲು ಸಹಾಯ ಮಾಡಿತು. ಆದಾಗ್ಯೂ, ಸರ್ಕಾರವು ಮತ್ತೊಮ್ಮೆ ಬಳಕೆಯನ್ನು ಹೆಚ್ಚಿಸುವ ಮತ್ತು ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುವ ಒತ್ತಡವನ್ನು ಎದುರಿಸುತ್ತಿದೆ.

ಅರ್ಥಶಾಸ್ತ್ರಜ್ಞರ ಪ್ರಕಾರ, ಭಾರತ ಮತ್ತು ಯುಎಸ್ ನಡುವಿನ ವ್ಯಾಪಾರ ಒಪ್ಪಂದದ ಮೇಲಿನ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರ ನಂಬಿಕೆಯನ್ನು ಪುನಃಸ್ಥಾಪಿಸುವುದು ಸರ್ಕಾರದ ಮುಂದಿರುವ ಸವಾಲಾಗಿದೆ. ಸರ್ಕಾರದ ಆದಾಯವನ್ನು ಹೆಚ್ಚಿಸಲು ಸೀತಾರಾಮನ್ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್‌ ಕಡೆ ಮುಖ ಮಾಡಬಹುದು ಎಂದು ಅವರು ನಂಬುತ್ತಾರೆ.

Nirmala sitharaman
Union Budget 2026 Live updates | ಆಯವ್ಯಯ ಮಂಡನೆ ಆರಂಭ; 'ಯುವಶಕ್ತಿ ಚಾಲಿತ ಬಜೆಟ್ ಮೂರು ಕರ್ತವ್ಯಗಳಿಂದ ಚಾಲನೆ'

ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ಕೇಂದ್ರಾಡಳಿತ ಪ್ರದೇಶ (ಯುಟಿ) ಗಳಿಗೆ ಅವರು ಪ್ಯಾಕೇಜ್‌ಗಳನ್ನು ಘೋಷಿಸುವ ಸಾಧ್ಯತೆ ಇದೆ.

ಇನ್ನು 9ನೇ ಬಾರಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಅವರು, ಈ ಮೂಲಕ ದಾಖಲೆ ಬರೆಯಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 2024ರ ಮಧ್ಯಂತರ ಬಜೆಟ್ ಸೇರಿದಂತೆ ಒಟ್ಟು 8 ಬಜೆಟ್​ಗಳನ್ನು ಮಂಡಿಸಿದ್ದಾರೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಸತತ 9 ವರ್ಷಗಳ ಕಾಲ ಕೇಂದ್ರ ಬಜೆಟ್ ಅನ್ನು ಮಂಡಿಸುವುದರ ಮೂಲಕ ದಾಖಲೆ ಬರೆಯಲು ಅವರು ಸಜ್ಜಾಗಿದ್ದಾರೆ.

ಮೋದಿಯವರ ಎರಡನೇ ಅವಧಿ ಸರ್ಕಾರ ಅಂದರೆ 2019 ರಲ್ಲಿ ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆಯಾದರು. 2024ರಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಮೋದಿ ಸರ್ಕಾರದಲ್ಲಿ ಅವರು ಹಣಕಾಸು ಖಾತೆಯನ್ನು ಉಳಿಸಿಕೊಂಡರು. ಸತತ 9ನೇ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ವಿವಿಧ ಅವಧಿಗಳಲ್ಲಿ ಮಂಡಿಸಿದ 10 ಬಜೆಟ್​ಗಳ ದಾಖಲೆಗಳನ್ನು ಸರಿಗಟ್ಟಲು ಹತ್ತಿರದಲ್ಲಿದ್ದಾರೆ.

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು ಒಟ್ಟು 10 ಬಾರಿ ಬಜೆಟ್ ಮಂಡಿಸಿದ್ದರು. ಮೊರಾರ್ಜಿ ದೇಸಾಯಿ ಹಣಕಾಸು ಸಚಿವರಾಗಿದ್ದಾಗ, 1959ರಿಂದ 1964ರವರೆಗೆ ಸತತ ಆರು ಬಾರಿ ಮತ್ತು 1967ರಿಂದ 1969ರ ಅವಧಿಯಲ್ಲಿ ನಾಲ್ಕು ಬಾರಿ ಬಜೆಟ್ ಮಂಡಿಸಿದ್ದರು.

ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ 9 ಬಾರಿ ಬಜೆಟ್ ಮಂಡಿಸಿದ್ದರು. ಹಾಗೆಯೇ ಪ್ರಣಬ್ ಮುಖರ್ಜಿ ಭಾರತದ ಹಣಕಾಸು ಸಚಿವರಾಗಿದ್ದಾಗ ಎಂಟು ಬಾರಿ ಬಜೆಟ್ ಮಂಡಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com