ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾರೆ: ಅಸ್ಸಾಂ ಸಿಎಂ ಹಿಮಂತ ಶರ್ಮ

ಅವರು ಎರಡು ಭಾರತೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾಗ ಒಂಬತ್ತು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದರು ಎಂದು ಆರೋಪಿಸಿದ್ದಾರೆ.
Himanta Biswa Sharma
ಹಿಮಂತ ಬಿಸ್ವ ಶರ್ಮ
Updated on

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಭಾನುವಾರ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಅಧಿಕಾರಿಗಳಿಗೆ ತಿಳಿಸದೆ 2013 ರಲ್ಲಿ ಪಾಕಿಸ್ತಾನಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೆ ಅವರು ಅಲ್ಲಿ ಒಂದು ರೀತಿಯ ತರಬೇತಿ ಪಡೆದಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಇಂದು ಗುವಾಹಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಹಿಮಂತ ಬಿಸ್ವಾ ಶರ್ಮ, ಕಾಂಗ್ರೆಸ್ ನಾಯಕನ ಬ್ರಿಟಿಷ್ ಪತ್ನಿ ಎಲೆಜಬೆತ್ ಅವರು ಈ ದೇಶದಲ್ಲಿ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಭಾರತದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.

ಅವರು ಎರಡು ಭಾರತೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾಗ ಒಂಬತ್ತು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದರು ಎಂದು ಆರೋಪಿಸಿದ್ದಾರೆ.

Himanta Biswa Sharma
2027 ರ ವೇಳೆಗೆ ಅಸ್ಸಾಂ ನಲ್ಲಿ ಶೇ.40 ರಷ್ಟು ಬಾಂಗ್ಲಾ ಮೂಲದ ಮುಸ್ಲಿಮರು; ಸ್ಥಳೀಯ ಜನಸಂಖ್ಯೆಗೆ ಕಾದಿದೆ ಆಪತ್ತು- ಹಿಮಂತ ಬಿಸ್ವ ಶರ್ಮ

ಪಾಕಿಸ್ತಾನಿ ಪ್ರಜೆ ಅಲಿ ತೌಕೀರ್ ಶೇಖ್ ಅವರು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಗೊಗೊಯ್ ಮತ್ತು ಅವರ ಪತ್ನಿಯೊಂದಿಗೆ ಸಹಕರಿಸಿ ನಡೆಸಿದ್ದ ಭಾರತ ವಿರೋಧಿ ಪಿತೂರಿಯ ಬಗ್ಗೆ ತನಿಖೆ ನಡೆಸಲು ಅಸ್ಸಾಂ ಸರ್ಕಾರ ಎಸ್‌ಐಟಿಯನ್ನು ರಚಿಸಿತ್ತು. ಸೆಪ್ಟೆಂಬರ್ 10 ರಂದು ಎಸ್‌ಐಟಿ ತನ್ನ ವರದಿಯನ್ನು ಸಲ್ಲಿಸಿತು.

ಗೌರವ್ ಗೊಗೊಯ್, ಅವರ ಪತ್ನಿ ಮತ್ತು ಅಲಿ ತೌಕೀರ್ ಶೇಖ್ ನಡುವೆ ಆಳವಾದ ಸಂಬಂಧವಿದೆ, ಕೇಂದ್ರೀಯ ಸಂಸ್ಥೆಯ ತನಿಖೆಗೆ ನಾವು ಶಿಫಾರಸು ಮಾಡುತ್ತೇವೆ ಎಂದು ಹಿಮಂತ ಬಿಸ್ವ ಶರ್ಮಾ ಹೇಳಿದರು.

ಪಾಕಿಸ್ತಾನದ ಕಂಪನಿಯೊಂದು ಎಲಿಜಬೆತ್‌ ಅವರಿಗೆ ಕೆಲಸ ನೀಡಿ, ನಂತರ ಭಾರತಕ್ಕೆ ವರ್ಗಾಯಿಸಿತು. ಆದರೆ ಅವರ ವೇತನವನ್ನು ಶೇಖ್ ಪಾವತಿಸುತ್ತಿದ್ದರು ಎಂದು ಅವರು ಹೇಳಿಕೊಂಡರು.

ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐ ಜೊತೆಗಿನ ಸಂಬಂಧದ ಆರೋಪದ ಮೇಲೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಗೊಗೊಯ್ ಅವರ ಮೇಲೆ ಹಿಮಂತ ಬಿಸ್ವಾ ಶರ್ಮ ನೇತೃತ್ವದ ಸರ್ಕಾರ ದಾಳಿ ಮಾಡುತ್ತಿದೆ.

ಗೊಗೊಯ್ ಅವರ ಪಾಕಿಸ್ತಾನ ಸಂಪರ್ಕಗಳ ಕುರಿತ ಆರೋಪವನ್ನು ಗೃಹ ಸಚಿವಾಲಯಕ್ಕೆ ಉಲ್ಲೇಖಿಸಲು ಅಸ್ಸಾಂ ಸಚಿವ ಸಂಪುಟ ನಿರ್ಧರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com