

ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ಕೋಟ್ದ್ವಾರದಲ್ಲಿ ವೃದ್ಧ ಮುಸ್ಲಿಂ ಅಂಗಡಿ ಮಾಲೀಕನನ್ನು ಬಜರಂಗ ದಳ ಕಾರ್ಯಕರ್ತರ ಕಿರುಕುಳದಿಂದ ರಕ್ಷಿಸಿ, ಕೋಮು ಸೌಹಾರ್ದತೆ ಸಾರಿ ಮೆಚ್ಚುಗೆ ಗಳಿಸಿರುವ ದೀಪಕ್ ಕುಮಾರ್ ಅವರು, ಉತ್ತರಾಖಂಡ ಸರ್ಕಾರ ಘೋಷಿಸಿದ ನಗದು ಬಹುಮಾನ ಸ್ವೀಕರಿಸಲು ನಿರಾಕರಿಸಿದ್ದಾರೆ.
ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅಂಸಾರಿ ಅವರು ದೀಪಕ್ ಕುಮಾರ್ ಅವರಿಗೆ ರೂ.2 ಲಕ್ಷ ನಗದು ಬಹುಮಾನವನ್ನು ಘೋಷಿಸಿದ್ದರು.
ಇದನ್ನು ದೀಪಕ್ ಅವರು ನಿರಾಕರಿಸಿದ್ದು, ಈ ಬಹುಮಾನ ಬಗ್ಗೆ ನನಗೆ ಸೋಶಿಯಲ್ ಮೀಡಿಯಾದ ಮೂಲಕ ತಿಳಿಯಿತು. ರೂ.2 ಲಕ್ಷ ದೊಡ್ಡ ಮೊತ್ತ. ಆದರೆ, ಈ ಹಣವನ್ನು ಅಂಗವಿಕಲರಿಗೆ ಅಥವಾ ಹೆಚ್ಚು ಸಂಕಷ್ಟದಲ್ಲಿರುವವರಿಗೆ ನೀಡಿದರೆ ಅದೇ ನಿಜವಾದ ಪ್ರಶಂಸನೀಯ ಕೆಲಸಕವಾಗುತ್ತದೆ ಎಂದು ಹೇಳಿದ್ದಾರೆ.
ಜನವರಿ 26ರಂದು ಉತ್ತರಾಖಂಡದ ಕೋಟ್ದ್ವಾರದಲ್ಲಿ ಘಟನೆ ನಡೆದಿತ್ತು. ಕೆಲ ಬಜರಂಗ ದಳ ಕಾರ್ಯಕರ್ತರು ಅಂಗಡಿ ಮಾಲೀಕ ವಕೀಲ್ ಅಹ್ಮದ್ (70) ಅವರನ್ನು ಅಂಗಡಿ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು.
“ಬಾಬಾ ಸ್ಕೂಲ್ ಗಾರ್ಮೆಂಟ್ಸ್” ಹೆಸರಿನಲ್ಲಿ ಬಾಬಾ ಎಂಬ ಪದ ಧಾರ್ಮಿಕ ಅರ್ಥ ಹೊಂದಿದ್ದು, ಮುಸ್ಲಿಮರು ಈ ಹೆಸರನ್ನಿಟ್ಟುಕೊಂಡು ಅಂಗಡಿ ನಡೆಸಬಾರದು ಆಕ್ಷೇಪಿಸಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ದೀಪಕ್ ಕುಮಾರ್ ಕಶ್ಯಪ್ ಅವರು ಗುಂಪನ್ನು ಎದುರಿಸಿದ್ದರು.
ಘಟನೆ ವೇಳೆ ದೀಪಕ್ ಅವರು ತಮ್ಮನ್ನು ಮೊಹಮ್ಮದ್ ದೀಪಕ್, ನಾನು ಭಾರತೀಯನೆಂದು ಹೇಳಿದ್ದು, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತಿಳಿಸಿದ್ದರು. ದೀಪಕ್ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಉತ್ತರಾಖಂಡ ಸಚಿವರು ಸುರೇಂದ್ರ ಸಿಂಗ್ ನೇಗಿ ಮತ್ತು ಹರಕ್ ಸಿಂಗ್ ರಾವತ್ ಅವರು ಬೆಂಬಲ ಸೂಚಿಸಿದ್ದರು
Advertisement