ಮೆಟ್ರೋದಲ್ಲಿ Girlfriend ಜೊತೆ ಸಿಕ್ಕಿಬಿದ್ದ ಮಗ: ನಿಲ್ದಾಣದಲ್ಲೇ ನಿಶ್ಚಿತಾರ್ಥ ಮಾಡಿದ ತಾಯಿ, Video ವೈರಲ್..!

ವೈರಲ್ ಆಗಿರುವ ವೀಡಿಯೋದಲ್ಲಿ ಮೆಟ್ರೊ ನಿಲ್ದಾಣವೊಂದರಲ್ಲಿ ಗೆಳತಿ ಜೊತೆಗೆ ಪುತ್ರ ಕುಳಿತಿರುವುದನ್ನು ನೋಡಿದ ಯುವಕನ ತಾಯಿ, ಕೆಲ ಕ್ಷಣ ಆತನೊಂದಿಗೆ ದಬಾಯಿಸಿರುವುದು ಕಂಡು ಬಂದಿದೆ.
Metro station
ಮೆಟ್ರೋ ನಿಲ್ದಾಣದಲ್ಲೇ ನಿಶ್ಚಿತಾರ್ಥ ಮಾಡಿಸಿದ ತಾಯಿ
Updated on

ನವದೆಹಲಿ: ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ಗೆಳತಿ ಜೊತೆಗೆ ಸಿಕ್ಕಿಬಿದ್ದ ಪುತ್ರನಿಗೆ ಆತನ ತಾಯಿ ನಿಲ್ದಾಣದಲ್ಲಿಯೇ ನಿಶ್ಚಿತಾರ್ಥ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ ಮೆಟ್ರೊ ನಿಲ್ದಾಣವೊಂದರಲ್ಲಿ ಗೆಳತಿ ಜೊತೆಗೆ ಪುತ್ರ ಕುಳಿತಿರುವುದನ್ನು ನೋಡಿದ ಯುವಕನ ತಾಯಿ, ಕೆಲ ಕ್ಷಣ ಆತನೊಂದಿಗೆ ದಬಾಯಿಸಿರುವುದು ಕಂಡು ಬಂದಿದೆ.

ಬಳಿಕ ಕೂಡಲೇ ತಾವು ತಂದಿದ್ದ ಹೂ–ಹಣ್ಣು, ಸಿಹಿ ಮುಂತಾದವುಗಳನ್ನು ಯುವತಿಗೆ ಕೊಟ್ಟು ನಿಶ್ಚಿತಾರ್ಥ ಮಾಡಿಸಿದ್ದಾರೆ.

ಈ ವೇಳೆ ಯುವಕ ಗೊಣಗುತ್ತಾ ಅಮ್ಮಾ ಏನಮ್ಮಾ ಇದು ಎಂದು ಕೇಳಿದ್ದು, ನೀನು ಸುಮ್ಮನೀರು, ನೀವು ಫೋಟೊ ವಿಡಿಯೊ ತೆಗೆಯಿರಿ ಸರಿಯಾಗಿ ಎಂದು ಮತ್ತೊಬ್ಬ ವ್ಯಕ್ತಿಗೆ ಹೇಳಿದ್ದಾರೆ. ಬಳಿಕ ಯುವಕ–ಯುವತಿ ಮಹಿಳೆಯ ಕಾಲಿಗೆ ನಮಸ್ಕಾರ ಮಾಡಿ ಕೈ ಮುಗಿದು, ಆಶೀರ್ವಾದ ಪಡೆದಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.

ಈ ಘಟನೆ ದೆಹಲಿ ಮೆಟ್ರೊ ನಿಲ್ದಾಣದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದದು, ಯಾವಾಗ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ವೀಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ದೆಹಲಿ ಮೆಟ್ರೋ ಅಧಿಕಾರಿಗಳು ಪ್ರತಿಕ್ರಿಯಿಸಿ, ಮೆಟ್ರೋದಲ್ಲಿ ಪ್ರಯಾಣಿಕರಿಗೆ ಅಸೌಕರ್ಯ ಉಂಟುಮಾಡುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಕಾಪಾಡುವುದು ಅಗತ್ಯ ಎಂದು ಹೇಳಿದ್ದಾರೆ.

Metro station
ಬೆಂಗಳೂರು: ಕದ್ದ ಗಡಿಯಾರವನ್ನು ವಾಟ್ಸಾಪ್ ಸ್ಟೇಟಸ್​ಗೆ ಹಾಕಿ ಸಿಕ್ಕಿಬಿದ್ದ ಮನೆಗೆಲಸದಾಕೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com