ರೋಗಿಗೆ 30 ನಿಮಿಷ ಸಿಪಿಆರ್‌ (CPR) ನೀಡಿ ಜೀವ ಉಳಿಸಿದ ಲೇಡಿ ಡಾಕ್ಟರ್: Viral Video

ವೈದ್ಯಕೀಯ ತಜ್ಞರ ಪ್ರಕಾರ, ಇಂತಹ ದೀರ್ಘಕಾಲದ ಒಂಟಿ ಸಿಪಿಆರ್‌ (CPR) ಅಪರೂಪವಾಗಿದ್ದು ಅತ್ಯಂತ ಕಠಿಣವಾದದ್ದು. ಆಸ್ಪತ್ರೆಗಳಲ್ಲಿ ಹೃದಯಾಘಾತದ ನಂತರ ಬದುಕುಳಿಯುವ ಪ್ರಮಾಣ ಕೇವಲ 15–25% ಮಾತ್ರವಾಗಿರುತ್ತದೆ.
Doctor conducted CPR
CPR ನಡೆಸುತ್ತಿರುವ ವೈದ್ಯೆ
Updated on

ಮಹಿಳಾ ವೈದ್ಯರೊಬ್ಬರು ಐಸಿಯುವಿನಲ್ಲಿ ರೋಗಿಯ ಹೃದಯಬಡಿತವನ್ನು ಫ್ಲಾಟ್‌ಲೈನ್‌ನಿಂದ ಹಾಗೂ ನಿಮಿಷಕ್ಕೆ 22 ಬಡಿತಗಳಷ್ಟು ಕಡಿಮೆ ಮಟ್ಟದಿಂದ ಸ್ಥಿರವಾದ 86 ಬಡಿತಗಳವರೆಗೆ ಹೆಚ್ಚಿಸಿ ಬದುಕುಳಿಸಿದ ಘಟನೆ ನಡೆದಿದ್ದು ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈದ್ಯಕೀಯ ತಜ್ಞರ ಪ್ರಕಾರ, ಇಂತಹ ದೀರ್ಘಕಾಲದ ಒಂಟಿ ಸಿಪಿಆರ್‌ (CPR) ಅಪರೂಪವಾಗಿದ್ದು ಅತ್ಯಂತ ಕಠಿಣವಾದದ್ದು. ಆಸ್ಪತ್ರೆಗಳಲ್ಲಿ ಹೃದಯಾಘಾತದ ನಂತರ ಬದುಕುಳಿಯುವ ಪ್ರಮಾಣ ಕೇವಲ 15–25% ಮಾತ್ರವಾಗಿದ್ದು, ತಕ್ಷಣದ ಚಿಕಿತ್ಸೆ ಇಲ್ಲದೆ ಪ್ರತಿ ನಿಮಿಷವೂ ಬದುಕುಳಿಯುವ ಸಾಧ್ಯತೆ ತೀವ್ರವಾಗಿ ಕಡಿಮೆಯಾಗುತ್ತದೆ.

ಕೆಲವರು ವೈದ್ಯೆಯ ದೃಢನಿಶ್ಚಯವನ್ನು ಅದ್ಭುತವೆಂದು ಕೊಂಡಾಡಿ, ಅವರು ಕೇವಲ ಒಬ್ಬ ರೋಗಿಯನ್ನೇ ಅಲ್ಲ, ಒಂದು ಕುಟುಂಬವನ್ನೂ ಉಳಿಸಿದ್ದಾರೆ ಎಂದು ಪ್ರಶಂಸಿಸಿದರೆ, ಇನ್ನೂ ಕೆಲವರು ಇಂತಹ ಖಾಸಗಿ ಕ್ಷಣವನ್ನು ಚಿತ್ರೀಕರಿಸಿದ ಬಗ್ಗೆ ಪ್ರಶ್ನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಎತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com