ಅಧಿಕಾರಕ್ಕಾಗಿ ಶ್ರಮಿಸುತ್ತಿಲ್ಲ, ಹಿಂದೂ ಸಮಾಜವನ್ನು ಒಗ್ಗೂಡಿಸುವುದಷ್ಟೇ RSS ಉದ್ದೇಶ: ಮೋಹನ್ ಭಾಗವತ್

"ಆರ್‌ಎಸ್‌ಎಸ್ ಯಾವುದೇ ರಾಜಕೀಯ ಅಧಿಕಾರದ ಆಸೆಯಿಂದ ಕಾರ್ಯ ನಿರ್ನಹಿಸುತ್ತಿಲ್ಲ. ಇದರ ಏಕೈಕ ಉದ್ದೇಶ ಇಡೀ ಹಿಂದೂ ಸಮಾಜದ ಸಂಘಟನೆ ಮತ್ತು ವ್ಯಕ್ತಿಗಳ ವ್ಯಕ್ತಿತ್ವ ನಿರ್ಮಾಣ" ಎಂದಿದ್ದಾರೆ.
RSS chief Mohan Bhagwat
ಮೋಹನ್ ಭಾಗವತ್
Updated on

ರಾಷ್ಟ್ರೀಯ ಸ್ವಯಂಸೇವಕ ಸಂಘವು ಯಾವುದೇ ರಾಜಕೀಯ ಅಧಿಕಾರದ ಆಸೆಯಿಂದ ಕೆಲಸ ಮಾಡುತ್ತಿಲ್ಲ, ಇಡೀ ಹಿಂದೂ ಸಮಾಜವನ್ನು ಸಂಘಟಿಸಲು ಮತ್ತು ವ್ಯಕ್ತಿಗಳಲ್ಲಿ ವ್ಯಕ್ತಿತ್ವ ನಿರ್ಮಾಣವನ್ನು ಬೆಳೆಸಲು ಮಾತ್ರ ಬದ್ಧವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಶತಾಬ್ದಿ ನಗರದ ಮಾಧವ್ ಕುಂಜ್‌ನಲ್ಲಿ ಸುಮಾರು 950 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಭಾಗವತ್, ಸಾಮಾಜಿಕ ಏಕತೆಯ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಸಂಸ್ಥೆ ಯಾವುದೇ ನಿರ್ದಿಷ್ಟ ಗುಂಪಿಗೆ ವಿರುದ್ಧವಾಗಿ ಅಥವಾ ಸ್ಪರ್ಧೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ಆರ್‌ಎಸ್‌ಎಸ್ ಸ್ಥಾಪನೆಯಾದಾಗಿನಿಂದ ಸುಮಾರು 100 ವರ್ಷಗಳ ಪ್ರಯಾಣದ ಬಗ್ಗೆ ವಿವರಿಸಿದರು. ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸಲು ಯುವಕರಿಗೆ ಕರೆ ನೀಡಿದರು.

"ಆರ್‌ಎಸ್‌ಎಸ್ ಯಾವುದೇ ರಾಜಕೀಯ ಅಧಿಕಾರದ ಆಸೆಯಿಂದ ಕಾರ್ಯ ನಿರ್ನಹಿಸುತ್ತಿಲ್ಲ. ಇದರ ಏಕೈಕ ಉದ್ದೇಶ ಇಡೀ ಹಿಂದೂ ಸಮಾಜದ ಸಂಘಟನೆ ಮತ್ತು ವ್ಯಕ್ತಿಗಳ ವ್ಯಕ್ತಿತ್ವ ನಿರ್ಮಾಣ" ಎಂದಿದ್ದಾರೆ.

RSS chief Mohan Bhagwat
RSS ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಉತ್ತರ ಪ್ರದೇಶದಲ್ಲಿ ಕಲ್ಲು ತೂರಾಟ

ಭಾರತದ ಕಲ್ಪನೆಯನ್ನು ವಿವರಿಸಿದ ಭಾಗವತ್, ದೇಶವು ಕೇವಲ ಭೌಗೋಳಿಕ ಗಡಿಗಳಿಗೆ ಸೀಮಿತವಾಗಿರಲು ಸಾಧ್ಯವಿಲ್ಲ, ಬದಲಾಗಿ ಭಗವಾನ್ ರಾಮ, ಶ್ರೀಕೃಷ್ಣ, ಭಗವಾನ್ ಬುದ್ಧ, ಭಗವಾನ್ ಮಹಾವೀರ, ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಮತ್ತು ಮಹಾತ್ಮ ಗಾಂಧಿಯವರ ಸಂಪ್ರದಾಯಗಳಿಂದ ಸ್ಫೂರ್ತಿ ಪಡೆಯುತ್ತದೆ ಎಂದು ಹೇಳಿದ್ದಾರೆ.

“ಹಿಂದೂ” ಎಂಬ ಪದವು ಜಾತಿಗಿಂತ ವೈವಿಧ್ಯತೆಯಲ್ಲಿ ಏಕತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು, ಪೂಜಾ ವಿಧಾನಗಳು ಮತ್ತು ದೇವತೆಗಳು ವಿಭಿನ್ನವಾಗಿದ್ದರೂ, ಸಾಂಸ್ಕೃತಿಕ ಅಡಿಪಾಯ ಸಾಮರಸ್ಯ ಮತ್ತು ಏಕತೆಯಾಗಿದೆ ಎಂದು ಅವರು ಹೇಳಿದರು. ಸಾಮಾಜಿಕ ಏಕತೆ ದುರ್ಬಲಗೊಂಡಾಗಲೆಲ್ಲಾ, ರಾಷ್ಟ್ರವು ಬಿಕ್ಕಟ್ಟುಗಳನ್ನು ಎದುರಿಸಿತು ಎಂದು ತಿಳಿಸಿದ್ದಾರೆ.

ಸಮಾಜದ ನಾಲ್ಕು ಸ್ತಂಭಗಳಾದ ಮೌಲ್ಯವರ್ಧನೆ, ಸನಾತನ ಸಂಸ್ಕೃತಿ, ಧರ್ಮದ ಮನೋಭಾವ ಮತ್ತು ಸತ್ಯದ ಸಾಕಾರವನ್ನು ಸಹ ವಿವರಿಸಿದರು. ಸಂಘದ ಧ್ಯೇಯವು ವೈಯಕ್ತಿಕ ಅಭಿವೃದ್ಧಿಯ ಮೂಲಕ ಇಡೀ ಹಿಂದೂ ಸಮಾಜವನ್ನು ಸಂಘಟಿಸುವುದು ಎಂದು ಪುನರುಚ್ಚರಿಸಿದರು. ಸ್ವಯಂಸೇವಕರು ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಇಡುತ್ತಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com