ತಮಿಳುನಾಡು: ವಿಧಾನಸಭಾ ಚುನಾವಣೆ ಸಿದ್ಧತೆಯಲ್ಲಿರುವ ವಿಜಯ್ ಗೆ ಸಂಕಷ್ಟ, ಡಿವೋರ್ಸ್ ಗಾಗಿ ಕೋರ್ಟ್ ಮೆಟ್ಟಿಲೇರಿದ ಪತ್ನಿ ಸಂಗೀತಾ!

ತಾನು ಮದುವೆಯಾದ ನಿವಾಸದಲ್ಲಿ ವಾಸಿಸುವ ಹಕ್ಕು ನೀಡಬೇಕು. ವಿಜಯ್ ಶಾಶ್ವತ ಜೀವನಾಂಶ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿಯಾಗಿರುವ ಸಂಗೀತಾ ಅವರು ತಮ್ಮ ವಿಚ್ಛೇದನಾ ಅರ್ಜಿಯಲ್ಲಿ ಕೋರಿದ್ದಾರೆ.
Vijay and his wife  Sangeetha
ದಳಪತಿ ವಿಜಯ್, ಸಂಗೀತಾ ಸಾಂದರ್ಭಿಕ ಚಿತ್ರ
Updated on

ಚೆನ್ನೈ: ಇದೇ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿರುವ TVK ಪಕ್ಷದ ಸಂಸ್ಥಾಪಕ, ನಟ ದಳಪತಿ ವಿಜಯ್ ಗೆ ಸಂಕಷ್ಟ ಎದುರಾಗಿದೆ.

ಡಿವೋರ್ಸ್ ಗಾಗಿ ಅವರ ಪತ್ನಿ ಸಂಗೀತಾ ಸೋರ್ನಲಿಂಗಂ ತಮಿಳುನಾಡಿನ ಚೆಂಗಲ್ಪಟ್ಟು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ವಿಜಯ್ ಜೊತೆಗೆ ಸಂಬಂಧ ಮುರಿದುಕೊಳ್ಳುವುದಕ್ಕಾಗಿ ಡಿವೋರ್ಸ್ ಅರ್ಜಿ ಸಲ್ಲಿಸಿದ್ದಾರೆ.

ತಾನು ಮದುವೆಯಾದ ನಿವಾಸದಲ್ಲಿ ವಾಸಿಸುವ ಹಕ್ಕು ನೀಡಬೇಕು. ವಿಜಯ್ ಶಾಶ್ವತ ಜೀವನಾಂಶ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿಯಾಗಿರುವ ಸಂಗೀತಾ ಅವರು ತಮ್ಮ ವಿಚ್ಛೇದನ ಅರ್ಜಿಯಲ್ಲಿ ಕೋರಿದ್ದಾರೆ.

ವಿಜಯ್ ಮತ್ತು ಸಂಗೀತಾ ಮದುವೆಯಾಗಿ 27 ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ, ಮಗ ಜೇಸನ್ ಸಂಜಯ್ ಗೆ 25 ವರ್ಷ ಮತ್ತು ಮಗಳು ದಿವ್ಯಾ ಸಾಶಾಗೆ 20 ವರ್ಷ. ವಿಚ್ಛೇದನ ಅರ್ಜಿ ಕುರಿತು ವಿಜಯ್ ಇನ್ನೂ ಪ್ರತಿಕ್ರಿಯಿಸಿಲ್ಲ.

ಅಂದಹಾಗೆ, ಆರಂಭದಲ್ಲಿ ವಿಜಯ್ ಅವರ ಅಭಿಮಾನಿಯಾಗಿದ್ದ ಸಂಗೀತಾ, 1990 ರ ದಶಕದ ಉತ್ತರಾರ್ಧದಲ್ಲಿ ತನ್ನ ನೆಚ್ಚಿನ ನಟನನ್ನು ಭೇಟಿಯಾಗಲು ಯುಕೆಯಿಂದ ಚೆನ್ನೈಗೆ ಬಂದಿದ್ದರು. ವಿಜಯ್ ಜೊತೆಗೆ ಭೇಟಿಯಾದ ನಂತರ ಇಬ್ಬರ ಅದೃಷ್ಟ ಬದಲಾಯಿತು. ಧರ್ಮ ಬೇರೆ ಆಗಿದ್ದರೂ ಎಲ್ಲವನ್ನೂ ಮೀರಿ ಅವರಿಬ್ಬರೂ ಮದುವೆಯಾದರು ಎಂದು ವರದಿಗಳು ಹೇಳುತ್ತವೆ.

Vijay and his wife  Sangeetha
'ನಟ ವಿಜಯ್ ಮೊದಲು ತ್ರಿಶಾ ಮನೆಯಿಂದ ಹೊರಬರಬೇಕು': BJP ರಾಜ್ಯಾಧ್ಯಕ್ಷನ ವಿರುದ್ಧ ನಟಿ ಕೆಂಡಾಮಂಡಲ; ವಾರ್ನಿಂಗ್!

ಮುಂಬರುವ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ನೊಂದಿಗೆ ಕಣಕ್ಕಿಳಿಯುವ ಮುನ್ನ ಬಹು ನಿರೀಕ್ಷಿತ 'ಜನ ನಾಯಗನ್' ಬಿಡುಗಡೆಗಾಗಿ ವಿಜಯ್ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com