

ನವದೆಹಲಿ: 2020ರ ದೆಹಲಿ ಗಲಭೆ ಸಂಚಿನ ಆರೋಪದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಮೇಲ್ನೋಟಕ್ಕೆ ಅವರ ವಿರುದ್ಧ ಆರೋಪ ನಿಜ ಎಂದು ತೋರುತ್ತದೆ ಎಂದಿರುವ ನ್ಯಾಯಾಲಯ, ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣವಿದೆ ಎಂದು ಹೇಳಿದೆ. 2020ರ ಸೆಪ್ಟೆಂಬರ್ 13 ರಿಂದಲೂ ಖಾಲಿದ್ ಜೈಲಿನಲ್ಲಿದ್ದಾರೆ.
ಇನ್ನೂ ಸುಪ್ರೀಂಕೋರ್ಟ್ ತೀರ್ಪು ಕುರಿತು ಪ್ರತಿಕ್ರಿಯಿಸಿರುವ ಖಾಲಿದ್, ಇತರರಿಗೆ ಜಾಮೀನು ದೊರಕಿರುವುದರಿಂದ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಭೇಟಿಗಾಗಿ ನಾಳೆ ಬರುತ್ತೇನೆ ಎಂದು ಲಹಿರಿ ಪ್ರತಿಕ್ರಿಸಿದ್ದು, Good good aa jana, Ab yahi zindagi hai ಎಂದು ಖಾಲಿದ್ ಹೇಳಿದ್ದಾರೆ.
ಉಮರ್ ಜೊತೆಗಿನ ಮಾತುಕತೆಯ ವಿವರಗಳನ್ನು ಅವರ ಸಹಚರ ಬನೊಜೋತ್ಸಾ ಲಹಿರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಇದೇ ಪ್ರಕರಣದಲ್ಲಿ ಇತರ ಐವರು ಸಹ ಆರೋಪಿಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್ ವಿ ಅಂಜಾರಿಯಾ ಅವರ ಪೀಠವು ಈ ಪ್ರಕರಣದಲ್ಲಿ ಇತರ ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಜಾಮೀನು ನೀಡಿದೆ.
Advertisement