ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ (LOC )ಬಳಿ ಭಾನುವಾರ ಸಂಜೆ ಪಾಕಿಸ್ತಾನದ ಡ್ರೋನ್ ಗಳ ಹಾರಾಟ ಪತ್ತೆಯಾಗಿದೆ.
Pakistani drone
ಪಾಕಿಸ್ತಾನದ ಡ್ರೋನ್ ಗಳು
Updated on

ಶ್ರೀನಗರ/ ನವದೆಹಲಿ: ಸಾವಿರಕ್ಕೂ ಹೆಚ್ಚು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ ಮತ್ತು ಭಾರತಕ್ಕೆ ನುಸುಳಲು ಅವಕಾಶ ನೀಡುವಂತೆ ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ಗೆ ಸೇರಿದ ಆಡಿಯೋ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ (LOC )ಬಳಿ ಭಾನುವಾರ ಸಂಜೆ ಪಾಕಿಸ್ತಾನದ ಡ್ರೋನ್ ಗಳ ಹಾರಾಟ ಪತ್ತೆಯಾಗಿದೆ.

ಭಾರತೀಯ ಸೇನಾ ಯೋಧರು ಈ ಡ್ರೋನ್‌ಗಳನ್ನು ಗುಂಡು ಹಾರಿಸಿ ಹೊಡೆದುರುಳಿಸಿದ್ದು, ಇನ್ನೂ ಹಲವಾರು ಡ್ರೋನ್‌ಗಳು ಗಡಿ ದಾಟಿ ಬಂದಿವೆ ಎನ್ನಲಾಗಿದೆ. ಕಳೆದ ವರ್ಷ ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಬರುತ್ತಿದ್ದ ಡ್ರೋನ್ ನಂತೆ ಆಕಾಶದಲ್ಲಿ ಮಿನುಗುತ್ತಾ ಡ್ರೋನ್ ಗಳು ಡ್ರೋನ್‌ಗಳು ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಗಡಿಭಾಗದೊಳಕ್ಕ ನುಗ್ಗಲು ಯತ್ನಿಸಿವೆ.

ಆದರೆ ಭಾರತೀಯ ಸೇನಾ ಯೋಧರು ಎಲ್ಲಾ ಡ್ರೋನ್‌ಗಳನ್ನು ಆಗಸದಲ್ಲೇ ಯಶಸ್ವಿಯಾಗಿ ಹೊಡೆದುರುಳಿಸಿದ್ದು, ಅವು ಹೊತ್ತು ತಂದಿರಬಹುದಾದ ಶಸ್ತ್ರಾಸ್ತ್ರಗಳು ಅಥವಾ ಮಾದಕವಸ್ತುಗಳ ಹುಡುಕಾಟದಲ್ಲಿ ನಿರತವಾಗಿದೆ.

ನಿನ್ನೆ, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಿಕ್ಕಿನಿಂದ ಬಂದ ಡ್ರೋನ್ ಸಾಂಬಾ ಸೆಕ್ಟರ್‌ನಲ್ಲಿ ಶಸ್ತ್ರಾಸ್ತ್ರಗಳ ರವಾನೆಯನ್ನು ಬೀಳಿಸಿತು. ಮೆಷಿನ್ ಗನ್‌ಗಳು ಡ್ರೋನ್‌ಗಳಲ್ಲಿ ಇತ್ತು ಎಂದು ಸೇನೆ ಹೇಳಿದೆ. ರಾಜೌರಿ ಜಿಲ್ಲೆಯಲ್ಲಿ ಸಂಜೆ 6.35ಕ್ಕೆ ಮತ್ತೊಂದು ಡ್ರೋನ್ ಕಾಣಿಸಿಕೊಂಡಿದ್ದು, ಮಿನುಗುವ ಬೆಳಕನ್ನು ಹೊಂದಿರುವ ಹಾರುವ ವಸ್ತು ಕಲಕೋಟ್‌ನ ಧರ್ಮಸಾಲ್ ಗ್ರಾಮದಿಂದ ಬಂದು ಭರಖ್ ಕಡೆಗೆ ಚಲಿಸಿದೆ. ಮತ್ತೊಂದು ಡ್ರೋನ್‌ 7:15ರ ಸುಮಾರಿಗೆ ಸಾಂಬಾದ ರಾಮಗಢ ಸೆಕ್ಟರ್‌ನಲ್ಲಿ ಚಕ್‌ ಬಾಬ್ರಾಲ್‌ ಗ್ರಾಮದ ಮೇಲೆ ಕೆಲವು ನಿಮಿಷಗಳ ಕಾಲ ಹಾರಾಟ ನಡೆಸಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

"ಅಷ್ಟೇ ಅಲ್ಲದೇ ಸಂಜೆ 6.25ಕ್ಕೆ ಪೂಂಚ್ ಜಿಲ್ಲೆಯ ಮಂಕೋಟೆ ಸೆಕ್ಟರ್‌ನ ಟೋಪಾ ಕಡೆಗೆ ಮತ್ತೊಂದು ಪಾಕ್‌ ಡ್ರೋನ್‌ ಚಲನೆ ಕಂಡುಬಂದಿದೆ. ಆದರೆ ಈ ಎಲ್ಲಾ ಡ್ರೋನ್‌ಗಳನ್ನು ಮಷಿನ್‌ ಗನ್‌ಗಳಿಂದ ಹೊಡೆದುರುಳಿಸಲಾಗಿದ್ದು, ಅವು ಹೊತ್ತು ತಂದಿರಬಹುದಾದ ವಸ್ತುಗಳ ಶೋಧ ಕಾರ್ಯ ಮುಂದುವರೆದಿದೆ" ಎಂದು ಸೇನಾ ಮೂಲಗಳು ತಿಳಿಸಿವೆ.

Pakistani drone
'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

ಕಳೆದ ವರ್ಷ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಹಲವಾರು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿತ್ತು. ಅದರ ನಂತರ ಡ್ರೋನ್ ನುಗ್ಗುವಿಕೆ ತೀವ್ರವಾಗಿ ಕಡಿಮೆಯಾಗಿತ್ತು. ಆದಾಗ್ಯೂ ಭಾನುವಾರ ಸಂಜೆ ಒಂದೇ ದಿನದಲ್ಲಿ ಐದು ಪಾಕಿಸ್ತಾನಿ ಡ್ರೋನ್ ಗಡಿಯೊಳಗೆ ನುಗ್ಗಲು ಯತ್ನಿಸಿರುವುದಾಗಿ ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com