

ನವದೆಹಲಿ: ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಹೆಚ್ಚಿಸುವ ಗುರಿಯೊಂದಿಗೆ ಭಾರತ ಮತ್ತು ಜರ್ಮನಿ ಸೋಮವಾರ ತಂತ್ರಜ್ಞಾನ ಪಾಲುದಾರಿಕೆ, ಸಹ-ಅಭಿವೃದ್ಧಿ ಮತ್ತು ರಕ್ಷಣಾ ವೇದಿಕೆಗಳು ಮತ್ತು ಸಲಕರಣೆಗಳ ಸಹ-ಉತ್ಪಾದನೆಗಾಗಿ ರಕ್ಷಣಾ ಕೈಗಾರಿಕಾ ಸಹಕಾರ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವ ಉದ್ದೇಶದ ಘೋಷಣೆ ಸೇರಿದಂತೆ ಹಲವಾರು ಕ್ರಮಗಳನ್ನು ಘೋಷಿಸಿವೆ.
ನಿರ್ಧಾರಗಳನ್ನು ದೃಢೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿಯ ಚಾನ್ಸೆಲರ್ ಫ್ರೆಡರಿಕ್ ಮೆರ್ಜ್, ಸೇವಾ ಮುಖ್ಯಸ್ಥರ ಭೇಟಿಗಳು ಸೇರಿದಂತೆ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ನವೆಂಬರ್ 2025 ರಲ್ಲಿ ನವದೆಹಲಿಯಲ್ಲಿ ನಡೆದ ಉನ್ನತ ರಕ್ಷಣಾ ಸಮಿತಿಯ ಸಭೆಯ ಫಲಿತಾಂಶಗಳನ್ನು ಸ್ವಾಗತಿಸಿದರು.
ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ರಕ್ಷಣಾ ಸಮಿತಿ ಸಭೆಯು ಭಾರತ ಮತ್ತು ಜರ್ಮನಿ ನಡುವಿನ ರಕ್ಷಣಾ ಬಾಂಧವ್ಯವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುವುದರೊಂದಿಗೆ ಮಿಲಿಟರಿ ಸಹಕಾರವನ್ನು ಹೆಚ್ಚಿಸುವ ಬದ್ಧತೆಯನ್ನು ಪುನರುಚ್ಚರಿಸಿತ್ತು.
ಕಾರ್ಯಾಚರಣೆಗಳು, ತರಬೇತಿ ಮತ್ತು ಹಿರಿಯ ಅಧಿಕಾರಿಗಳ ಮಾತುಕತೆ ಮೂಲಕ ಮಿಲಿಟರಿ ಸಹಕಾರವನ್ನು ಗಾಢಗೊಳಿಸುವ ಎರಡೂ ಕಡೆಯ ಬದ್ಧತೆಯನ್ನು ಉಭಯ ನಾಯಕರು ಒಪಿದ್ದಾರೆ. ಎರಡು ದೇಶಗಳ ನಡುವೆ ಹೊಸ ಟ್ರ್ಯಾಕ್ 1.5 ವಿದೇಶಿ ನೀತಿ ಮತ್ತು ಭದ್ರತಾ ಮಾತುಕತೆಯನ್ನು ಸ್ವಾಗತಿಸಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ನೌಕ ಕಾರ್ಯಾಚರಣೆ MILAN ಮತ್ತು ಫೆಬ್ರವರಿ 2026 ರಲ್ಲಿ 9 ನೇ ಹಿಂದೂ ಮಹಾಸಾಗರ ನೇವಲ್ ಸಿಂಪೋಸಿಯಂ (IONS)ಮುಖ್ಯಸ್ಥರ ಸಮಾವೇಶ, ಸೆಪ್ಟೆಂಬರ್ 2026 ರಲ್ಲಿ ತರಂಗ ಶಕ್ತಿ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಜರ್ಮನಿಯ ಉದ್ದೇಶ, ಜೊತೆಗೆ Fusion Centre-Indian Ocean Region (IFC-IOR)ಗೆ ಸಂಪರ್ಕ ಅಧಿಕಾರಿಯನ್ನು ನಿಯೋಜಿಸುವ ಜರ್ಮನಿಯ ನಿರ್ಧಾರವನ್ನು ಮೋದಿ ಸ್ವಾಗತಿಸಿದ್ದಾರೆ.
ಉಭಯ ದೇಶಗಳ ನಡುವಿನ ಮಿಲಿಟರಿ ಬಾಂಧವ್ಯದಲ್ಲಿ ಇತ್ತೀಚಿಗೆ ಹೆಚ್ಚಾಗುತ್ತಿದೆ. ಆಗಸ್ಟ್ 2024 ರಲ್ಲಿ ಮೊದಲ ಬಾರಿಗೆ, ಜರ್ಮನಿಯು ಭಾರತದ ನೆಲದಲ್ಲಿ ವೈಮಾನಿಕ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಅದರಲ್ಲಿ ಯುರೋ ಫೈಟರ್ Typhoon ವಿಮಾನ ಅದ್ಬುತ ಪ್ರದರ್ಶನ ನೀಡಿತ್ತು. 'ತರಂಗ ಶಕ್ತಿ 2024' ಭಾರತೀಯ ವಾಯುಪಡೆಯ ಮೊದಲ ಬಹುರಾಷ್ಟ್ರೀಯ ಕಾರ್ಯಾಚರಣೆಯಾಗಿತ್ತು.
Advertisement