ಎದೆಹಾಲುಣಿಸುತ್ತಿದ್ದಾಗ ಪತ್ನಿಯ ಹೊಡೆದು ಕೊಂದ ಪಾಪಿ ಪತಿ, ಉಸಿರುಗಟ್ಟಿ 6 ತಿಂಗಳ ಮಗು ಕೂಡ ಸಾವು!

ಮಗುವಿಗೆ ಎದೆಹಾಲುಣಿಸುತ್ತಿದ್ದ ಪತ್ನಿ ಮೇಲೆ ಪತಿ ಹಲ್ಲೆ ನಡೆಸಿದ ಪರಿಣಾಮ ಆಕೆ ಎಲ್ಲಿಯೇ ಸಾವನ್ನಪ್ಪಿದ್ದಾಳೆ.
Man Beats Wife To Death Over Suspicion
ಸಾಂದರ್ಭಿಕ ಚಿತ್ರ
Updated on

ಭೋಪಾಲ್: ಕ್ಷುಲ್ಲಕ ವಿಚಾರಕ್ಕೆ ಪಾಪಿ ಪತಿಯೋರ್ವ ಮಗುವಿಗೆ ಎದೆಹಾಲುಣಿಸುತ್ತಿದ್ದ ಪತ್ನಿ ಮೇಲೆ ಹಲ್ಲೆ ಮಾಡಿ ಕೊಂದು ಹಾಕಿದ್ದು, ಈ ವೇಳೆ ಉಸಿರುಗಟ್ಟಿ 6 ತಿಂಗಳ ಮಗು ಕೂಡ ಧಾರುಣ ಸಾವನ್ನಪ್ಪಿರುವ ಘಟನೆ ಮಧ್ಯ ಪ್ರದೇಶದಲ್ಲಿ ವರದಿಯಾಗಿದೆ.

ಮಧ್ಯಪ್ರದೇಶದ ಖಾರ್ಗೋನೆಯ ಬೇಡ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ಕೊಲೆ ಪ್ರಕರಣ ನಡೆದಿದ್ದು, ಮಗುವಿಗೆ ಎದೆಹಾಲುಣಿಸುತ್ತಿದ್ದ ಪತ್ನಿ ಮೇಲೆ ಪತಿ ಹಲ್ಲೆ ನಡೆಸಿದ ಪರಿಣಾಮ ಆಕೆ ಎಲ್ಲಿಯೇ ಸಾವನ್ನಪ್ಪಿದ್ದಾಳೆ.

ಬಳಿಕ ಹಲ್ಲೆಯ ಸಮಯದಲ್ಲಿ ದಂಪತಿಯ ಆರು ತಿಂಗಳ ಮಗು ಕೂಡ ಉಸಿರುಗಟ್ಟಿ ಮೃತಪಟ್ಟಿದೆ ಎಂದು ಹೇಳಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಗುರುವಾರ ಬೆಳಗ್ಗೆ ಚಂಪಾಬಾಯಿ ಮಾನ್ಕರ್ ಮತ್ತು ಅವರ ಶಿಶು ಶವಗಳು ಮನೆಯಲ್ಲಿ ಪತ್ತೆಯಾಗಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ತಲುಪಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ವರ್ಮಾ ತಿಳಿಸಿದ್ದಾರೆ.

ಮಹಿಳೆಯ ಪತಿ ಸುನಿಲ್ ಶವಗಳ ಬಳಿ ಕುಳಿತಿರುವುದು ಕಂಡುಬಂದಿದ್ದು, ಅನುಮಾನದ ಮೇಲೆ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಚಂಪಾಬಾಯಿಯ ದೇಹದ ಮೇಲೆ ಹಲವು ಗಾಯದ ಗುರುತುಗಳು ಕಂಡುಬಂದಿವೆ.

Man Beats Wife To Death Over Suspicion
ಪುರುಷರ ವೇಷಧರಿಸಿ ಕಳ್ಳತನ; ಖತರ್ನಾಕ್ ಕಳ್ಳಿಯರು ಸಿಕ್ಕಿಬಿದ್ದಿದ್ದೇ ರೋಚಕ! Video

ಪತ್ನಿ ಶೀಲದ ಮೇಲೆ ಶಂಕೆ, ತಪ್ಪೊಪ್ಪಿಕೊಂಡ ಪಾಪಿ ಪತಿ

ವಿಚಾರಣೆಯ ಸಮಯದಲ್ಲಿ, ಸುನಿಲ್ ತನ್ನ ಹೆಂಡತಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಪತ್ನಿ ಶೀಲದ ಮೇಲೆ ಪತಿ ಸುನಿಲ್ ಗೆ ಶಂಕೆ ಇತ್ತು. ಆಕೆ ಪರಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದ. ಇದೇ ವಿಚಾರವಾಗಿ ಪದೇ ಪದೇ ಜಗಳ ಮಾಡುತ್ತಿದ್ದ. ಬುಧವಾರ ರಾತ್ರಿ ಜಗಳ ತಾರಕಕ್ಕೇರಿದ್ದು, ಪತ್ನಿ ಮೇಲೆ ತೀವ್ರ ಹಲ್ಲೆ ಮಾಡಿ ಕೊಂದು ಹಾಕಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

ಬುಧವಾರ ರಾತ್ರಿ ದಂಪತಿ ನಡುವೆ ಜಗಳವಾಗಿತ್ತು. ಈ ಜಗಳದಲ್ಲಿ, ಚಂಪಾಬಾಯಿ ತಮ್ಮ ಮಗುವಿಗೆ ಹಾಲುಣಿಸುತ್ತಿದ್ದಾಗ ಸುನಿಲ್ ಆಕೆಯ ಮೇಲೆ ಹಲ್ಲೆ ನಡೆಸಿ, ಬಾಗಿಲಿಗೆ ತಳ್ಳಿ, ಕೈ, ಕಾಲಿನ ಮೇಲೆ ಕೋಲಿನಿಂದ ಹೊಡೆದಿದ್ದಾನೆ. ಆಕೆ ಮೂರ್ಛೆ ಹೋಗಿದ್ದಾಳೆಂದು ನಂಬಿ ಆರೋಪಿ ನಿದ್ರೆಗೆ ಜಾರಿದ್ದ. ಅವರ ಇಬ್ಬರು ಮಕ್ಕಳು ಈ ಘಟನೆಯನ್ನು ಕಣ್ಣಾರೆ ಕಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂತೆಯೇ ಮಗು ಕೂಡ ಅಲ್ಲಿಯೇ ಇತ್ತು. ಹಾಲು ಕುಡಿಯುತ್ತಿದ್ದ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಎರಡೂ ಶವಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Man Beats Wife To Death Over Suspicion
The UP Story: 'ಚೆನ್ನಾಗಿ ಕಾಣ್ತೀಯಾ..' ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿದ ಮುಸ್ಲಿಂ ಸ್ನೇಹಿತೆಯರು!, Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com