'ಅಪ್ಪಾ ನನಗೆ ಸಾಯೋಕೆ ಇಷ್ಟವಿಲ್ಲ'; ನೀರಿನ ಹೊಂಡಕ್ಕೆ ಬಿದ್ದ ಟೆಕ್ಕಿ ಕರೆ, ಡೆಲಿವರಿ ಏಜೆಂಟ್ ಹರಸಾಹಸವೂ ವ್ಯರ್ಥ!

ನೋಯ್ಡಾದ ಸೆಕ್ಟರ್ 150ಯಲ್ಲಿ ಟೆಕ್ಕಿಯೋರ್ವ ಕಾರಿನಲ್ಲಿ ತೆರಳುತ್ತಿದ್ದಾಗ ದಟ್ಟಮಂಜಿನ ಪರಿಣಾಮ ರಸ್ತೆ ಕಾಣದೇ ಕಾರು ಸಮೇತ ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದಿದ್ದಾರೆ.
Techie Who Drowned In Noida
ಹೊಂಡದಲ್ಲಿ ಮುಳುಗಿ ಟೆಕ್ಕಿ ಸಾವು
Updated on

ನೋಯ್ಡಾ: ದಟ್ಟ ಮಂಜಿನಿಂದಾಗಿ, ಟೆಕ್ಕಿಯೊಬ್ಬರು ಕಾರು ಸಮೇತ 70 ಅಡಿ ಆಳದ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಧಾರುಣ ಘಟನೆ ನೋಯ್ಡಾದಲ್ಲಿ ನಡೆದಿದೆ.

ನೋಯ್ಡಾದ ಸೆಕ್ಟರ್ 150ಯಲ್ಲಿ ಟೆಕ್ಕಿಯೋರ್ವ ಕಾರಿನಲ್ಲಿ ತೆರಳುತ್ತಿದ್ದಾಗ ದಟ್ಟಮಂಜಿನ ಪರಿಣಾಮ ರಸ್ತೆ ಕಾಣದೇ ಕಾರು ಸಮೇತ ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದಿದ್ದಾರೆ. ಈ ವೇಳೆ ಸತತ ಹೋರಾಟದ ಹೊರತಾಗಿಯೂ ದುರಂತ ಸಾವನ್ನಪ್ಪಿದ್ದಾರೆ.

ಶುಕ್ರವಾರ ರಾತ್ರಿ ಸೆಕ್ಟರ್ 150 ರ ಬಳಿ ಈ ದುರಂತ ಘಟನೆ ನಡೆದಿದ್ದು, ಟೆಕ್ಕಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ದಟ್ಟವಾದ ಮಂಜು ಮತ್ತು ಕಡಿಮೆ ಗೋಚರತೆಯಿಂದಾಗಿ ಕಾರು ನಿಯಂತ್ರಣ ತಪ್ಪಿ ರಸ್ತೆ ತಿರುವಿನ ಬಳಿ ಇರುವ ನೀರು ತುಂಬಿದ ನಿರ್ಮಾಣ ಗುಂಡಿಗೆ ಡಿಕ್ಕಿ ಹೊಡೆದಿದೆ.

ಕಾರು ಎರಡು ಗಂಟೆಗಳ ಕಾಲ ಕಾರು ನೀರಿನ ಮೇಲೆ ತೇಲುತ್ತಿತ್ತು. ಆದರೆ ಯಾರ ಕಣ್ಣಿಗೂ ಬೀಳಲಿಲ್ಲ, ಇದೇ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಡೆಲಿವರಿ ಏಜೆಂಟ್ ಅದನ್ನು ಗಮನಿಸಿ ಕೂಡಲೇ ಕೆಳಗೆ ದುಮುಕಿದ್ದಾರೆ. ಸತತ ಹರಸಾಹಸದ ಹೊರತಾಗಿಯೂ ಟೆಕ್ಕಿ ಸಾವನ್ನಪ್ಪಿದ್ದಾರೆ.

Techie Who Drowned In Noida
ದಟ್ಟ ಮಂಜಿನಿಂದಾಗಿ ವಿಭಜಕಕ್ಕೆ ಫಾರ್ಚೂನರ್ ಕಾರು ಡಿಕ್ಕಿ: ಮಹಿಳಾ ಪೇದೆ ಸೇರಿ ಐವರ ದುರ್ಮರಣ

ಆಗಿದ್ದೇನು?

ಟೆಕ್ಕಿ ಯುವರಾಜ್ ಮೆಹ್ತಾ ಎಂಬುವವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಆಯತಪ್ಪಿ ನಿರ್ಮಾಣ ಹಂದಲ್ಲಿರುವ ಮಾಲ್​ನ ನೀರು ತುಂಬಿದ ಗುಂಡಿಗೆ ಕಾರು ಸಮೇತ ಬಿದ್ದಿದ್ದರು. ಕೂಡಲೇ ಟೆಕ್ಕಿ ತಮ್ಮ ತಂದೆಗೆ ಕರೆ ಮಾಡಿ, ಅಪ್ಪಾ ನನಗೆ ಸಾಯಲು ಇಷ್ಟವಿಲ್ಲ, ನಾನು ಹೀಗೆ ನೀರಿನಲ್ಲಿ ಬಿದ್ದಿದ್ದೇನೆ ಬಂದು ಕಾಪಾಡಿ ಎಂದು ಬೇಡಿಕೊಂಡಿದ್ದರು.

ಇದೇ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಯಾರೋ ಕಿರುಚುತ್ತಿದ್ದ ಶಬ್ದಕೇಳಿದ ಡೆಲಿವರಿ ಏಜೆಂಟ್ ಬೇರೇನೂ ಯೋಚಿಸದೆ ನೀರಿಗೆ ಇಳಿದಿದ್ದರು, ತಮ್ಮ ಕೈಲಾದ ಪ್ರಯತ್ನ ಮಾಡಿದ್ದರು.

ಟೆಕ್ಕಿ ಮೆಹ್ತಾ ಟಾರ್ಚ್ ಹಿಡಿದು ಕಾರಿನ ಒಳಗಿನಿಂದ ಸಹಾಯಕ್ಕಾಗಿ ಕಿರುಚುತ್ತಿರುವುದನ್ನು ನೋಡಿದ್ದರು. ಮೆಹ್ತಾ ಉಸಿರಾಡಲು ಕಷ್ಟಪಡುತ್ತಿರುವುದನ್ನು ಅರಿತುಕೊಂಡ ಡೆಲಿವರಿ ಏಜೆಂಟ್ ಮೊನಿಂದರ್ ತನ್ನ ಸೊಂಟಕ್ಕೆ ಹಗ್ಗವನ್ನು ಕಟ್ಟಿಕೊಂಡು ಚರಂಡಿಯೊಳಗೆ ಹಾರಿ ಅವನನ್ನು ಉಳಿಸಲು ಪ್ರಯತ್ನಿಸಿದರು. ಆದರೆ ಮೆಹ್ತಾ ಆಗಲೇ ಸಾವನ್ನಪ್ಪಿದ್ದರು.

Techie Who Drowned In Noida
ಪತ್ನಿ ಮೂಲಕ 150 ಯುವಕರ insta ಹನಿ ಟ್ರ್ಯಾಪ್: Blackmail ಮಾಡಿ ಕೋಟ್ಯಂತರ ಹಣ: ಖತರ್ನಾಕ್ ದಂಪತಿ ಕೊನೆಗೂ ಅರೆಸ್ಟ್!

ವಿಚಾರ ತಿಳಿದ ಕೂಡಲೇ ಪೊಲೀಸರು, ಡೈವರ್​ಗಳು ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಎಲ್ಲರೂ ಅಲ್ಲಿ ಸೇರಿದ್ದರು. ಫ್ಲಿಪ್‌ಕಾರ್ಟ್ ವಿತರಣಾ ಏಜೆಂಟ್ ಆಗಿರುವ ಮೊನಿಂದರ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, ಇದು ಅಪಾಯಕಾರಿ ಸ್ಥಳವಾಗಿದ್ದರೂ ಅಧಿಕಾರಿಗಳು ಇಲ್ಲಿ ಯಾವುದೇ ಎಚ್ಚರಿಕಾ ಫಲಕಗಳ ಹಾಕಿಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ.

ಇದೇ ಮೊದಲೇನಲ್ಲ

ಇನ್ನು ಈ ಜಾಗದಲ್ಲಿ ಅಪಘಾತ ಇದೇ ಮೊದಲೇನಲ್ಲ.. ಸುಮಾರು 10 ದಿನಗಳ ಹಿಂದೆ ಟ್ರಕ್ ಹಳ್ಳಕ್ಕೆ ಬಿದ್ದಾಗಲೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಮೊನಿಂದರ್ ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com