ಲಿವ್-ಇನ್ ಪಾರ್ಟ್ನರ್ ಕೊಲೆ ಮಾಡಿ ಸುಟ್ಟು ಹಾಕಿದ ಇಬ್ಬರ ಪತ್ನಿಯರ ಗಂಡ!

ನಿವೃತ್ತ ರೈಲ್ವೆ ಉದ್ಯೋಗಿ ರಾಮ್ ಸಿಂಗ್ ತನ್ನ 35 ವರ್ಷದ ಲಿವ್-ಇನ್ ಪಾರ್ಟ್ನರ್ ಅನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಇಬ್ಬರನ್ನು ವಿವಾಹವಾಗಿದ್ದು ಮೂರನೇ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದನು ಎಂದು ಪೊಲೀಸ್ ತನಿಖೆಗಳು ಬಹಿರಂಗಪಡಿಸಿವೆ.
ಲಿವ್-ಇನ್ ಪಾರ್ಟ್ನರ್ ಕೊಲೆ ಮಾಡಿ ಸುಟ್ಟು ಹಾಕಿದ ಇಬ್ಬರ ಪತ್ನಿಯರ ಗಂಡ!
Updated on

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ನಿವೃತ್ತ ರೈಲ್ವೆ ಉದ್ಯೋಗಿ ರಾಮ್ ಸಿಂಗ್ ತನ್ನ 35 ವರ್ಷದ ಲಿವ್-ಇನ್ ಪಾರ್ಟ್ನರ್ ಅನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಇಬ್ಬರನ್ನು ವಿವಾಹವಾಗಿದ್ದು ಮೂರನೇ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದನು ಎಂದು ಪೊಲೀಸ್ ತನಿಖೆಗಳು ಬಹಿರಂಗಪಡಿಸಿವೆ. ಪ್ರೇಯಸಿಯನ್ನು ಕೊಂದ ನಂತರ, ಆರೋಪಿಯು ಆಕೆಯ ದೇಹವನ್ನು ಪೆಟ್ಟಿಗೆಯಲ್ಲಿ ಲಾಕ್ ಮಾಡಿ ನಂತರ ಅದನ್ನು ಸುಟ್ಟುಹಾಕಿದನು. ಸಾಕ್ಷ್ಯವನ್ನು ನಾಶಮಾಡಲು ದೇಹದ ಭಾಗಗಳನ್ನು ಲೋಡರ್‌ಗೆ ತುಂಬಿಸಿ ಅದನ್ನು ಎರಡನೇ ಪತ್ನಿಯ ಮನೆಗೆ ಕಳುಹಿಸಿದ್ದು ಈ ಬಗ್ಗೆ ಚಾಲಕನಿಗೆ ಅನುಮಾನ ಬಂದಿದ್ದು ನಂತರ ಪ್ರಕರಣ ಬಹಿರಂಗವಾಯಿತು.

ರಾಮ್ ಸಿಂಗ್ ವಾಹನವೊಂದನ್ನು ಬುಕ್ ಮಾಡಿ ತನ್ನ ಮಗ ಮತ್ತು ಇತರರ ಸಹಾಯದಿಂದ ಶವದ ಪೆಟ್ಟಿಗೆಯನ್ನು ಲೋಡರ್‌ಗೆ ತುಂಬಿಸಿ ತನ್ನ ಎರಡನೇ ಪತ್ನಿ ಗೀತಾಳ ಮನೆಗೆ ಕಳುಹಿಸಿದನು. ಲೋಡರ್ ಚಾಲಕ ಜೈಪಾಲ್‌ಗೆ ಪೆಟ್ಟಿಗೆಯಲ್ಲಿ ಏನೋ ಅನುಮಾನಾಸ್ಪದ ವಸ್ತು ಇದೆ ಎಂದು ಅನುಮಾನ ಬಂದು UP-112ಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದನು. ಪೊಲೀಸರು ನಗರದ ಕೊಟ್ವಾಲಿ ಪ್ರದೇಶದ ಫುಟಾ ಚೋಪ್ರಾ ನೆರೆಹೊರೆಗೆ ಆಗಮಿಸಿ ಪೆಟ್ಟಿಗೆಯನ್ನು ವಶಪಡಿಸಿಕೊಂಡರು. ಪೆಟ್ಟಿಗೆಯನ್ನು ತೆರೆದಾಗ, ಸುಟ್ಟ ಮೂಳೆಗಳು ಮತ್ತು ಕಲ್ಲಿದ್ದಲಿನಂತಹ ಅವಶೇಷಗಳು ಕಂಡುಬಂದವು. ನಂತರ ವಿಧಿವಿಜ್ಞಾನ ತಂಡವನ್ನು ಕರೆಸಿ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲಾಯಿತು. ನೆರೆಹೊರೆಯ ಹುಡುಗನೊಬ್ಬ 400 ರೂಪಾಯಿಗೆ ವಾಹನವನ್ನು ಬುಕ್ ಮಾಡಿದ್ದಾಗಿ ಜೈಪಾಲ್ ಹೇಳಿದರು. ಅವನು ಒಂದು ಪೆಟ್ಟಿಗೆಯನ್ನು ತಂದಿದ್ದು ಅದನ್ನು ನೋಡಿದಾಗ ಅನುಮಾನ ಬಂತು. ನಂತರ ಜೈಪಾಲ್ ಪೆಟ್ಟಿಗೆಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದನು

ಪೊಲೀಸ್ ವಿಚಾರಣೆಯ ಸಮಯದಲ್ಲಿ, ಗೀತಾ ತಾನು ರಾಮ್ ಸಿಂಗ್‌ನ ಎರಡನೇ ಹೆಂಡತಿ ಎಂದು ಬಹಿರಂಗಪಡಿಸಿದಳು. ಮೃತ ಮಹಿಳೆ ನಿರಂತರವಾಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ತನಗೆ ಬೇಸರವಾಗಿತ್ತು ಎಂದು ರಾಮ್ ಸಿಂಗ್ ಹೇಳಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ರಾಮ್ ಸಿಂಗ್ ಅವರ ಮೊದಲ ಪತ್ನಿ ಸಿಪ್ರಿ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಅವರು ಸುಮಾರು 30 ವರ್ಷಗಳ ಹಿಂದೆ ಅವರನ್ನು ತೊರೆದಿದ್ದಾರೆ. ಅವರ ಎರಡನೇ ಪತ್ನಿಯಿಂದ ನಿತಿನ್ ಎಂಬ ಮಗ ಮತ್ತು ಕುಟುಂಬದಲ್ಲಿ ಮತ್ತೊಬ್ಬ ಮಲಮಗ ಇದ್ದಾರೆ.

ಲಿವ್-ಇನ್ ಪಾರ್ಟ್ನರ್ ಕೊಲೆ ಮಾಡಿ ಸುಟ್ಟು ಹಾಕಿದ ಇಬ್ಬರ ಪತ್ನಿಯರ ಗಂಡ!
ಉತ್ತರ ಪ್ರದೇಶ: ಮದುವೆಯಾಗಿ ಬಿಟ್ಟು ಹೋಗಿದ್ದಕ್ಕೆ ಸೇಡು; 'ಮಹಿಳಾ ಆಟೋ ರಿಕ್ಷಾ' ಚಾಲಕಿ ಕೊಲೆ!

ನಗರ ಪೊಲೀಸ್ ವರಿಷ್ಠಾಧಿಕಾರಿ ಪ್ರೀತಿ ಸಿಂಗ್ ಅವರು, ಪ್ರಕರಣವನ್ನು ಬಗೆಹರಿಸುವಲ್ಲಿ ಲೋಡರ್ ಚಾಲಕನ ಅನುಮಾನ ನಿರ್ಣಾಯಕವಾಗಿತ್ತು ಎಂದು ಹೇಳಿದ್ದಾರೆ. ತನಿಖೆಯ ಸಮಯದಲ್ಲಿ, ಗೀತಾ ಅವರ ಮನೆಯಲ್ಲಿ ಮತ್ತು ಸುತ್ತಮುತ್ತ ಕೊಲೆ ಮತ್ತು ದಹನಕ್ಕೆ ಬೆಂಬಲ ನೀಡುವ ಹಲವಾರು ಸಂದರ್ಭಗಳು ಕಂಡುಬಂದಿವೆ ಎಂದು ಅವರು ವಿವರಿಸಿದರು. ಮೃತರ ಮಾಜಿ ಪತಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದೆ. ಮಗ ನಿತಿನ್ ಸೇರಿದಂತೆ ಇಬ್ಬರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಪ್ರಮುಖ ಆರೋಪಿ ರಾಮ್ ಸಿಂಗ್ ತಲೆಮರೆಸಿಕೊಂಡಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com