UPಯಲ್ಲಿ 'ಬೆಡ್ ರೂಮ್ ಡ್ರಾಮಾ': ಹಾಸಿಗೆಗೆ ಪತಿಯನ್ನು ಕಟ್ಟಿಹಾಕಿದ ಪತ್ನಿ! ಅತ್ತೆ ಮಾಡಿದ್ದೇನು? Video ವೈರಲ್
ಅಲಿಗಢ: ಕುಡಿದ ಮತ್ತಿನಲ್ಲಿದ್ದ ಗಂಡನ ಮೇಲೆ ಕೋಪಗೊಂಡ ಮಹಿಳೆಯೊಬ್ಬರು ಆತನನ್ನು ಹಾಸಿಗೆಗೆ ಕಟ್ಟಿ ಹಾಕಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಈ ಡ್ರಾಮಾ ಇಲ್ಲಿಗೆ ಮುಗಿದಿಲ್ಲ. ಸೊಸೆಯ ಕೈಯಲ್ಲಿ ಗನ್ ಇರುವ ಫೋಟೋವೊಂದನ್ನು ಅತ್ತೆ ಪೊಲೀಸ್ ಠಾಣೆಗೆ ತಲುಪಿಸುವುದರೊಂದಿಗೆ ಮತ್ತಷ್ಟು ಟ್ವಿಸ್ಟ್ ಪಡೆಯಿತು.
ಪತಿಯನ್ನು ಹಾಸಿಗೆಗೆ ಕಟ್ಟಿಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಸೊಸೆಯ ಕೈಯಲ್ಲಿ ಗನ್ ಇರುವ ಫೋಟೋವನ್ನು ಅತ್ತೆ ಠಾಣೆಗೆ ನೀಡುವುದರೊಂದಿಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂದಹಾಗೆ, ಅಲಿಗಢದ ಹಮೀದ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದ್ಯ ಸೇವಿಸಿದ್ದಾರೆ ಎಂದು ಆರೋಪಿಸಿ ಪತಿಯನ್ನು ಹಾಸಿಗೆಗೆ ಕಟ್ಟಿಹಾಕಿದ ಪತ್ನಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ ಪತಿ ಸಂಯಮದಿಂದ ಇರುವುದನ್ನು ಕಾಣಬಹುದು. ಆದರೆ ಆತನ ಹೆಂಡತಿ ಹತ್ತಿರದಲ್ಲಿ ಕೂಗಾಡುತ್ತಿರುವುದನ್ನು ನೋಡಬಹುದು. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕುಟುಂಬ ಸದಸ್ಯರು, ಹಾಸಿಗೆಗೆ ಕಟ್ಟಿಹಾಕಲಾದ ದಾರ ಬಿಚ್ಚಿ ಆತನನ್ನು ಬಂಧನದಿಂದ ಮುಕ್ತಗೊಳಿಸಿದ್ದಾರೆ.
ಮಹಿಳೆ ಗನ್ ಇಟ್ಟುಕೊಂಡು ನನ್ನ ಮಗನನ್ನು ಬೆದರಿಸುತ್ತಿದ್ದಳು ಎಂದು ಪೋಷಕರು ಆರೋಪಿಸಿದ್ದಾರೆ. ಪೊಲೀಸರು ಸಂತ್ರಸ್ತ ಪ್ರದೀಪ್ ಪತ್ನಿಯನ್ನು ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

