Mother of all deals: 99% ರಫ್ತಿಗೆ ರಿಯಾಯಿತಿ ದರದಲ್ಲಿ EU ಮಾರುಕಟ್ಟೆಗೆ ಭಾರತಕ್ಕೆ ಪ್ರವೇಶ!

ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಹೊಂದಿರುವ ನಾಲ್ಕನೇ ಮತ್ತು ಎರಡನೇ ಅತಿದೊಡ್ಡ ಆರ್ಥಿಕತೆಗಳ ನಡುವೆ ಈ ಪಾಲುದಾರಿಕೆಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
Narendra Modi
ನರೇಂದ್ರ ಮೋದಿonline desk
Updated on

ನವದೆಹಲಿ: ಯುರೋಪಿಯನ್ ಯೂನಿಯನ್ (EU) ಮಾರುಕಟ್ಟೆಯಲ್ಲಿ ಭಾರತ ತನ್ನ ರಫ್ತಿನ 99 ಪ್ರತಿಶತಕ್ಕೂ ಹೆಚ್ಚಿನ ಮೌಲ್ಯಕ್ಕೆ ರಿಯಾಯಿತಿ ಸುಂಕದಲ್ಲಿ "ಅಭೂತಪೂರ್ವ" ಮಾರುಕಟ್ಟೆ ಪ್ರವೇಶವನ್ನು ಪಡೆಯಲಿದೆ.

ಭಾರತ-ಯುರೋಪಿಯನ್ ಯೂನಿಯನ್ ಒಕ್ಕೂಟ ಐತಿಹಾಸಿಕ ವಾಣಿಜ್ಯ- ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ದೇಶೀಯ ಕಾರ್ಮಿಕ-ತೀವ್ರ ವಲಯಗಳಿಗೆ ಉತ್ತೇಜನ ನೀಡುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಂಗಳವಾರ ಹೇಳಿದ್ದಾರೆ.

ಜನವರಿ 27 ರಂದು ಎರಡೂ ಕಡೆಯವರು ಮುಕ್ತ ವ್ಯಾಪಾರ ಒಪ್ಪಂದ (FTA) ಗಾಗಿ ಮಾತುಕತೆಗಳ ಮುಕ್ತಾಯವನ್ನು ಘೋಷಿಸಿದರು. "ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಮತ್ತು EU, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ Mother of all deals' ಗೆ ಸಹಿ ಹಾಕಿದ್ದಾರೆ" ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಒಪ್ಪಂದ ದೇಶದ ಜಾಗತಿಕ ವ್ಯಾಪಾರ ವ್ಯವಹಾರಗಳ ತೊಡಗಿಸಿಕೊಳ್ಳುವಿಕೆಯಲ್ಲಿ ಒಂದು ಕಾರ್ಯತಂತ್ರದ ಪ್ರಗತಿಯಾಗಿದ್ದು, 1.4 ಶತಕೋಟಿ ಜನರಿಗೆ USD 20 ಟ್ರಿಲಿಯನ್ EU ಮಾರುಕಟ್ಟೆಯಲ್ಲಿ ವಿಶಾಲ ಅವಕಾಶಗಳನ್ನು ತೆರೆಯುತ್ತದೆ ಎಂದು ಗೋಯಲ್ ಹೇಳಿದರು.

"ಇದು ನಮ್ಮ ರಫ್ತಿನ 99 ಪ್ರತಿಶತಕ್ಕೂ ಹೆಚ್ಚು ಮೌಲ್ಯಕ್ಕೆ ಅಭೂತಪೂರ್ವ ಮಾರುಕಟ್ಟೆ ಪ್ರವೇಶವನ್ನು ನೀಡುವ ಒಪ್ಪಂದವಾಗಿದೆ. ನಮ್ಮ ಕಾರ್ಮಿಕ ವಲಯಗಳಿಗೆ ಬೃಹತ್ ಪ್ರಚೋದನೆಯನ್ನು ಒದಗಿಸುತ್ತದೆ ಮತ್ತು ಮೇಕ್ ಇನ್ ಇಂಡಿಯಾವನ್ನು ಬಲಪಡಿಸುತ್ತದೆ" ಎಂದು ಸಚಿವರು ಹೇಳಿದರು.

ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಹೊಂದಿರುವ ನಾಲ್ಕನೇ ಮತ್ತು ಎರಡನೇ ಅತಿದೊಡ್ಡ ಆರ್ಥಿಕತೆಗಳ ನಡುವೆ ಈ ಪಾಲುದಾರಿಕೆಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

ಇದು ಭಾರತೀಯ ವ್ಯವಹಾರಗಳಿಗೆ ಬೃಹತ್ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು MSME ಗಳು, ಮಹಿಳೆಯರು, ಯುವಕರು, ಕುಶಲಕರ್ಮಿಗಳು, ಕಾರ್ಮಿಕರು, ವಿದ್ಯಾರ್ಥಿಗಳು, ನುರಿತ ವೃತ್ತಿಪರರು, ಮೀನುಗಾರರು, ರೈತರು ಮತ್ತು ರಫ್ತುದಾರರಿಗೆ ಪ್ರಯೋಜನವನ್ನು ನೀಡುತ್ತದೆ.

Narendra Modi
ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ ಅಂತಿಮ: ಇದು 'Mother of All Deals'; ಪ್ರಧಾನಿ ಮೋದಿ ಶ್ಲಾಘನೆ; Video

"ಸೂಕ್ಷ್ಮ ವಲಯಗಳನ್ನು ರಕ್ಷಿಸಲು ಕಾಳಜಿ ವಹಿಸುವುದರೊಂದಿಗೆ, ಗ್ರಾಮೀಣ ಜೀವನೋಪಾಯವನ್ನು ಸಹ ಸುರಕ್ಷಿತಗೊಳಿಸಲಾಗಿದೆ ಮತ್ತು ಹೆಚ್ಚಿನ ಮೌಲ್ಯದ EU ಮಾರುಕಟ್ಟೆಯಲ್ಲಿ ವಿಸ್ತರಿಸಲು ಸಾಮರ್ಥ್ಯವನ್ನು ತೆರೆಯಲಾಗಿದೆ" ಎಂದು ಅವರು ಹೇಳಿದರು. "ನಮ್ಮ ನುರಿತ ಭಾರತೀಯ ವೃತ್ತಿಪರರಿಗೆ ಜಾಗತಿಕ ಅವಕಾಶಗಳನ್ನು ವಿಸ್ತರಿಸಲು ಸಹಾಯ ಮಾಡುವ ಭವಿಷ್ಯಕ್ಕೆ ಸಿದ್ಧವಾದ ಚಲನಶೀಲತೆಯ ಚೌಕಟ್ಟಿನೊಂದಿಗೆ ಸೇವಾ ವಲಯದಲ್ಲಿ ದೊಡ್ಡ ಗೆಲುವು ಸಾಧಿಸಲಾಗಿದೆ" ಎಂದು ಅವರು ಹೇಳಿದರು.

ಈ ಒಪ್ಪಂದ "ಭವಿಷ್ಯದ ದ್ವಾರ" ಎಂದು ಅವರು ಹೇಳಿದರು ಏಕೆಂದರೆ ಇದು ಭಾರತ ಹೆಚ್ಚಿನ ಮೌಲ್ಯದ ಉದ್ಯೋಗಗಳನ್ನು ಸೃಷ್ಟಿಸಲು, ನಾವೀನ್ಯತೆಯನ್ನು ಹೆಚ್ಚಿಸಲು ಮತ್ತು ಪ್ರತಿಭೆ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಜಾಗತಿಕವಾಗಿ ಸ್ಪರ್ಧಾತ್ಮಕ ಕೇಂದ್ರವಾಗಿ ತನ್ನ ಸ್ಥಾನವನ್ನು ದೃಢವಾಗಿ ಭದ್ರಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com