ಮುನಿಸು ಮರೆತು ಒಂದಾದ್ರ ಅಪ್ಪ-ಮಗ ? ತಮಿಳು ನಾಡು CM ಜೋಸೆಫ್ ವಿಜಯ್ ಪುತ್ರ ಜೇಸನ್ ಸಂಜಯ್‌ ಹಂಚಿಕೊಂಡ ಬಾಲ್ಯದ ನೆನಪಿನ Video Viral

ನಟಿ ತ್ರಿಷಾ ಜೊತೆ ಸಂಬಂಧದ ವದಂತಿಗಳ ಜೊತೆಗೆ, ಪತ್ನಿ ಸಂಗೀತಾರಿಂದ ವಿಚ್ಛೇದನ ಹಿನ್ನೆಲೆಯಲ್ಲಿ ಸಿಎಂ ಜೋಸೆಫ್ ವಿಜಯ್ ಪುತ್ರ ಜೇಸನ್ ಸಂಜಯ್ ಹಾಗೂ ಪುತ್ರಿ ದಿವ್ಯ ಸಾಶಾ ಅವರೊಂದಿಗೆ ಸಂಬಂಧ ಹದಗೆಟ್ಟಿದೆ ಎಂಬ ಮಾತುಗಳೂ ಹರಿದಾಡುತ್ತಿವೆ.
Jason Sanjay says he was 'kidnapped' by his dad Vijay's fan in school
CM ಜೋಸೆಫ್ ವಿಜಯ್ ಪುತ್ರ ಜೇಸನ್ ಸಂಜಯ್‌
Updated on

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ರಾಜಕೀಯ ಯಶಸ್ಸಿನ ಜೊತೆಗೆ ಅವರ ವೈಯಕ್ತಿಕ ಜೀವನವೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಳೆದ ಏಪ್ರಿಲ್ ನಲ್ಲಿ ನಡೆದ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ (TVK) ಪಕ್ಷವು ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಅಚ್ಚರಿ ನೀಡುವ ರೀತಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ, ವಿಜಯ್ ಮುಖ್ಯಮಂತ್ರಿಯಾದರು. ಅವರ ವೈಯಕ್ತಿಕ ಜೀವನ ಸುದ್ದಿಯಲ್ಲಿದೆ.

ನಟಿ ತ್ರಿಷಾ ಜೊತೆ ಸಂಬಂಧದ ವದಂತಿಗಳ ಜೊತೆಗೆ, ಪತ್ನಿ ಸಂಗೀತಾರಿಂದ ವಿಚ್ಛೇದನ ಹಿನ್ನೆಲೆಯಲ್ಲಿ ಪುತ್ರ ಜೇಸನ್ ಸಂಜಯ್ ಹಾಗೂ ಪುತ್ರಿ ದಿವ್ಯ ಸಾಶಾ ಅವರೊಂದಿಗೆ ವಿಜಯ್ ಅವರ ಸಂಬಂಧ ಹದಗೆಟ್ಟಿದೆ ಎಂಬ ಮಾತುಗಳೂ ಹರಿದಾಡುತ್ತಿವೆ.

ಈ ವದಂತಿಗಳ ನಡುವೆಯೇ ಜೇಸನ್ ಸಂಜಯ್ ಇತ್ತೀಚೆಗೆ ತಮ್ಮ ಬಾಲ್ಯದ ಒಂದು ಕುತೂಹಲಕಾರಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

Galatta ಹಂಚಿಕೊಂಡಿದ್ದ (ನಂತರ ಅಳಿಸಲಾದ) ವಿಡಿಯೋದಲ್ಲಿ, ಜೇಸನ್ ಒಬ್ಬ ಬಾಲಕನೊಂದಿಗೆ ಮಾತನಾಡುತ್ತಾ ತಮ್ಮ ಬಾಲ್ಯದ ಅನುಭವವನ್ನು ವಿವರಿಸುತ್ತಾರೆ.

ಶಾಲೆಯಲ್ಲಿ ತಂದೆ ವಿಜಯ್ ತಮ್ಮನ್ನು ಪಿಕ್ ಅಪ್ ಮಾಡುತ್ತಿದ್ದರು, ಒಂದು ದಿನ ತಾನು ಕಿಡ್ನಾಪ್ ಆಗಿದ್ದೆ ಎಂದು ಅವರು ಹಾಸ್ಯಮಿಶ್ರಿತವಾಗಿ ನೆನಪಿಸಿಕೊಂಡಿದ್ದಾರೆ. ಆ ಬಾಲಕನ ತಂದೆಯನ್ನು ಸಿನಿಮಾ ಚಿತ್ರೀಕರಣದ ಸ್ಥಳದಲ್ಲಿ ಭೇಟಿಯಾದಾಗ ಈ ಘಟನೆ ನೆನಪಾಯಿತು ಎಂದು ಜೇಸನ್ ಹೇಳಿದ್ದಾರೆ.

ವಿಡಿಯೋ ಚಿತ್ರೀಕರಿಸುತ್ತಿದ್ದ ಅದೇ ವ್ಯಕ್ತಿಯೇ ಅಂದು ತಮ್ಮನ್ನು ಶಾಲೆಯಿಂದ ಎತ್ತಿಕೊಂಡು ಹೋಗಿದ್ದ ಎಂದು ಜೇಸನ್ ಹೇಳಿದ್ದಾರೆ. ಆತ ವಿಜಯ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ವಿಜಯ್ ಅವರನ್ನು ಕಂಡು ಮಾತನಾಡಿಸಬೇಕೆಂಬ ಕಾತರದಿಂದ ಈ ಕೆಲಸ ಮಾಡಿದ್ದನೆಂದು ವಿಡಿಯೋದಲ್ಲಿ ವಿವರಿಸಿದ್ದಾರೆ.

Jason Sanjay says he was 'kidnapped' by his dad Vijay's fan in school
Watch | TN CM ಜೋಸೆಫ್ ವಿಜಯ್ ಜನ್ಮದಿನ: ಮಧುರೈ ದೇವಾಲಯದಲ್ಲಿ ಮುಸ್ಲಿಂ ಬೆಂಬಲಿಗರಿಂದ ಪ್ರಾರ್ಥನೆ!

ವಿಜಯ್ ಅವರು ಕಾರಿನಿಂದ ಹೊರಗೆ ಬರುತ್ತಿರಲಿಲ್ಲ. ಆದ್ದರಿಂದ ನಾನು ಜೇಸನ್‌ರನ್ನು ಶಾಲೆಯಿಂದ ಎತ್ತಿಕೊಂಡು ಹೋಗಿದ್ದೆ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ತಾನು ನಿಜವಾಗಿಯೂ ಕಿಡ್ನಾಪ್ ಆಗಿದ್ದೆ ಎಂದು ಭಾವಿಸಿ ಅಂದು ಜೋರಾಗಿ ಅಳಲು ಆರಂಭಿಸಿದ್ದೆ ಎಂದು ಜೇಸನ್ ನೆನಪಿಸಿಕೊಂಡಿದ್ದಾರೆ.

ನಂತರ ವಿಜಯ್ ಶಾಲೆಗೆ ಬಂದಾಗ, ಆ ವ್ಯಕ್ತಿ ಜೇಸನ್‌ರನ್ನು ಸುರಕ್ಷಿತವಾಗಿ ವಿಜಯ್ ಅವರ ಕಾರಿನ ಹಿಂಬದಿಯ ಸೀಟಿನಲ್ಲಿ ಕೂರಿಸಿ ತೆರಳಿದ್ದರು.

ಹೀಗೆ ಜೇಸನ್ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಂದೆಯ ಬಗ್ಗೆ ಜೇಸನ್ ಪ್ರೀತಿಯಿಂದ ಮಾತನಾಡಿರುವುದು ಅವರಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳಿಗೆ ಪರೋಕ್ಷ ಉತ್ತರವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಜೇಸನ್ ಮತ್ತು ದಿವ್ಯ ಸಾಶಾ ಗೈರಾಗಿದ್ದ ಹಿನ್ನೆಲೆಯಲ್ಲಿ ತಂದೆ-ಮಗನ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿಗಳು ಮತ್ತಷ್ಟು ಬಲಗೊಂಡಿದ್ದವು.

Jason Sanjay says he was 'kidnapped' by his dad Vijay's fan in school
Watch | ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು ಬೆಳ್ಳಿ ಖಡ್ಗ ಅರ್ಪಿಸಿದ ಸಿಎಂ ವಿಜಯ್!

ಜೇಸನ್ ಸಂಜಯ್ ನಿರ್ದೇಶಕರಾಗಿ 'ಸಿಗ್ಮಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಸಂದೀಪ್ ಕಿಶನ್, ಫರಿಯಾ ಅಬ್ದುಲ್ಲಾ, ರಾಜು ಸುಂದರಂ, ಅನ್ಬು ಥಾಸನ್, ಯೋಗ್ ಜಪೀ, ಸಂಪತ್ ರಾಜ್, ಕಿರಣ್ ಕೊಂಡಾ ಹಾಗೂ ಮಾಗಲಕ್ಷ್ಮಿ ಸುಧರ್ಷನನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

'ಸಿಗ್ಮಾ' ಚಿತ್ರವು ಜುಲೈ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com