ಸಂಭ್ರಮಾಚರಣೆ ವೇಳೆ ಫೈರಿಂಗ್; ಮಹಿಳೆ ಸಾವಿಗೆ ಕಾರಣವಾದ ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್‌ಗೆ 4 ವರ್ಷಗಳ ಜೈಲು ಶಿಕ್ಷೆ!

'ಶಿಕ್ಷೆಗೊಳಗಾದ ವ್ಯಕ್ತಿಗೆ ಐಪಿಸಿಯ (IPC) ಸೆಕ್ಷನ್ 304ರ ಭಾಗ IIರ ಅಡಿಯಲ್ಲಿ 4 ವರ್ಷಗಳ ಸರಳ ಕಾರಾಗೃಹವಾಸ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ 2 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ' ಎಂದು ಅವರು ಹೇಳಿದರು.
Representative Image
ಪ್ರಾತಿನಿಧಿಕ ಚಿತ್ರ
Updated on

ನವದೆಹಲಿ: ಸಂಭ್ರಮಾಚರಣೆ ವೇಳೆ ನಡೆಸಿದ ಫೈರಿಂಗ್‌ನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದ 2018ರ ಪ್ರಕರಣವೊಂದರಲ್ಲಿ ದೋಷಿ ಎಂದು ಸಾಬೀತಾದ ಬಿಹಾರದ ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್ ಅವರಿಗೆ ದೆಹಲಿ ನ್ಯಾಯಾಲಯವೊಂದು ಶನಿವಾರ ನಾಲ್ಕು ವರ್ಷಗಳ ಸರಳ ಕಾರಾಗೃಹವಾಸ ಮತ್ತು ₹25 ಲಕ್ಷ ರೂಪಾಯಿ ದಂಡ ವಿಧಿಸಿದೆ.

ವಿಶೇಷ ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರು ಶಿಕ್ಷೆಯ ಪ್ರಮುಖ ಭಾಗವನ್ನು ಮೌಖಿಕವಾಗಿ ಪ್ರಕಟಿಸಿದರು.

'ಶಿಕ್ಷೆಗೊಳಗಾದ ವ್ಯಕ್ತಿಗೆ ಐಪಿಸಿಯ (IPC) ಸೆಕ್ಷನ್ 304ರ ಭಾಗ IIರ ಅಡಿಯಲ್ಲಿ 4 ವರ್ಷಗಳ ಸರಳ ಕಾರಾಗೃಹವಾಸ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ 2 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ' ಎಂದು ಅವರು ಹೇಳಿದರು.

ಬಿಹಾರದ ಸಾಹೇಬ್‌ಗಂಜ್‌ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರಾಗಿರುವ ಸಿಂಗ್, ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ ₹25 ಲಕ್ಷ ಪರಿಹಾರವನ್ನೂ ಪಾವತಿಸಲಿದ್ದಾರೆ ಎಂದು ನ್ಯಾಯಾಧೀಶ ಗೊಗ್ನೆ ತಿಳಿಸಿದರು.

ಶುಕ್ರವಾರದಂದು, ಸಿಂಗ್ ಅವರು ತಾನು ಯಾರನ್ನೂ ಕೊಲ್ಲುವ ಉದ್ದೇಶವನ್ನು ಹೊಂದಿರಲಿಲ್ಲ. ಆಯ್ಕೆಯಾದ ಸಾರ್ವಜನಿಕ ಪ್ರತಿನಿಧಿಯಾಗಿ ನನ್ನ ಹಿನ್ನೆಲೆ ಉತ್ತಮವಾಗಿದೆ. ಹೀಗಾಗಿ, ಷರತ್ತುಗಳ ಅಡಿಯಲ್ಲಿ ತಮ್ಮನ್ನು ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.

Representative Image
Watch | ಬಳ್ಳಾರಿ ಫೈರಿಂಗ್: ಮೃತ ಕೈ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ; ರಿಪಬ್ಲಿಕ್ ಆಫ್ ಬಳ್ಳಾರಿ ಆಗಲು ಬಿಡಲ್ಲ: DKS; ನರೇಗಾ ಯೋಜನೆ ರದ್ದುಗೊಳಿಸಲು ಬಿಡಲ್ಲ!

ಸಿಂಗ್ (56) ಅವರನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 ಭಾಗ IIರ ಅಡಿಯಲ್ಲಿ ಮತ್ತು ಪರವಾನಗಿ ಷರತ್ತುಗಳ ಉಲ್ಲಂಘನೆಗೆ ಸಂಬಂಧಿಸಿದ ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಯಿತು.

ಈ ಪ್ರಕರಣವು ಫತೇಪುರ್ ಬೆರಿಯ ತೋಟದ ಮನೆಯಲ್ಲಿ ಹೊಸ ವರ್ಷದ ಪಾರ್ಟಿಯಲ್ಲಿ ನಡೆದ ಸಂಭ್ರಮಾಚರಣೆಯ ವೇಳೆ ಗುಂಡು ಹಾರಿಸಿದ್ದಕ್ಕೆ ಸಂಬಂಧಿಸಿದೆ. ಇದು ಮಹಿಳೆಯೊಬ್ಬರ ಸಾವಿಗೆ ಕಾರಣವಾಯಿತು.

ಜೂನ್ 6 ರಂದು ನ್ಯಾಯಾಲಯವು 97 ಪುಟಗಳ ಆದೇಶದಲ್ಲಿ, 'ಹಬ್ಬಗಳ ಸಮಯದಲ್ಲಿ ಸಂಭ್ರಮಾಚರಣೆಯ ಗುಂಡು ಹಾರಿಸುವ ಕೃತ್ಯಗಳು ನಮ್ಮ ದೇಶದಲ್ಲಿ ಸಾವುನೋವುಗಳಿಗೆ ಕಾರಣವಾಗುವ ಒಂದು ಪಿಡುಗಾಗಿವೆ. ಈ ಪ್ರಕರಣವು ಅಂತಹದೇ ಒಂದು ದುರಂತವನ್ನು ಪ್ರತಿಬಿಂಬಿಸುತ್ತದೆ; ಇದರಲ್ಲಿ ಬಿಹಾರದ ಬಹುಬಾರಿ ಶಾಸಕರಾಗಿರುವ ಮೊದಲ ಆರೋಪಿ (ರಾಜು ಕುಮಾರ್ ಸಿಂಗ್) ನಡೆಸಿದರು ಎನ್ನಲಾದ ಬೇಜವಾಬ್ದಾರಿಯುತ ಸಂಭ್ರಮಾಚರಣೆಯ ಗುಂಡಿನ ದಾಳಿಯು, 2018ರ ಡಿಸೆಂಬರ್ 31 ಮತ್ತು 2019ರ ಜನವರಿ 1ರ ಮಧ್ಯರಾತ್ರಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ಒಬ್ಬ ಅತಿಥಿಯ ಸಾವಿಗೆ ಕಾರಣವಾಯಿತು ಎಂದು ತಿಳಿಸಿದೆ.

ಸಾಕ್ಷ್ಯಗಳನ್ನು ಗಮನಿಸಿದ ನ್ಯಾಯಾಲಯವು, ಅನೇಕ ಸಾಕ್ಷಿಗಳಿಂದ ಸಿಂಗ್ ಅವರೇ ಸಂತ್ರಸ್ತೆ ಅರ್ಚನಾ ಗುಪ್ತಾ ಅವರ ಸಾವಿಗೆ ಕಾರಣವಾದ ಮಾರಣಾಂತಿಕ ಗುಂಡನ್ನು ಹಾರಿಸಿದ್ದರು ಎಂಬುದು ಸಾಬೀತಾಗಿದೆ ಎಂದು ಹೇಳಿತ್ತು.

X
Kannada Prabha
www.kannadaprabha.com