Video: ವಿಶ್ವದ ಹಲವು ದೇಶಗಳು ಯುವಕರಿಗೆ ತರಬೇತಿ ನೀಡಲು RSS ಸಹಕಾರ ಕೇಳುತ್ತಿವೆ- ಮೋಹನ್ ಭಾಗವತ್

ಆರ್‌ಎಸ್‌ಎಸ್ ಸ್ವಯಂಸೇವಕರು ಕಾರ್ಯನಿರ್ವಹಿಸುವ ಪ್ರತಿಯೊಂದು ಸಂಸ್ಥೆಯನ್ನೂ ಸಂಘವೇ ದೂರದಿಂದ ನಿಯಂತ್ರಿಸುತ್ತದೆ ಅಥವಾ ನಡೆಸುತ್ತದೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕಲು ಪ್ರಯತ್ನಿಸಿದರು.
Mohan Bhagwat
RSS ಮುಖ್ಯಸ್ಥ ಮೋಹನ್ ಭಾಗವತ್
Updated on

ನವದೆಹಲಿ: ವಿಶ್ವದ ವಿವಿಧ ದೇಶಗಳ ಜನರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯವನ್ನು ಗಮನಿಸುತ್ತಿದ್ದು, ತಮ್ಮ ದೇಶಗಳ ಯುವಕರಿಗೆ ತರಬೇತಿ ನೀಡುವ ವಿಧಾನವನ್ನು ಕಲಿಸಿಕೊಡಲು ಸಂಘದ ಸಹಕಾರವನ್ನು ಕೇಳುತ್ತಿವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಸ್ವಯಂಸೇವಕರು ಕಾರ್ಯನಿರ್ವಹಿಸುವ ಪ್ರತಿಯೊಂದು ಸಂಸ್ಥೆಯನ್ನೂ ಸಂಘವೇ ದೂರದಿಂದ ನಿಯಂತ್ರಿಸುತ್ತದೆ ಅಥವಾ ನಡೆಸುತ್ತದೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕಲು ಪ್ರಯತ್ನಿಸಿದರು.

ಭಾಗವತ್ ಅವರು "ಡಾ. ಹೆಡ್ಗೆವಾರ್: ಆಧುನಿಕ ಯುಗ ಕೆ ಶಾಲಿವಾಹನ" ಎಂಬ ಯೂಟ್ಯೂಬ್ ವಿಡಿಯೊದ ಸಾರ್ವಜನಿಕ ಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ, ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಸಂಘದ ಪ್ರಚಾರಕರ ಜೀವನಾಧಾರಿತ 100 ವಿಡಿಯೊಗಳನ್ನು ಅವರು ಬಿಡುಗಡೆ ಮಾಡಿದರು.

'ಪ್ರಚಾರಕರು' ಎಂದರೆ ಸಂಘದ ವಿಸ್ತರಣೆಗಾಗಿ ಪೂರ್ಣಾವಧಿ ಸೇವೆ ಸಲ್ಲಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಸಾಮರ್ಥ್ಯವುಳ್ಳ ವ್ಯಕ್ತಿಗಳನ್ನು ರೂಪಿಸುವುದೇ ಆರ್‌ಎಸ್‌ಎಸ್ ಮತ್ತು ಅದರ ಕಾರ್ಯಕರ್ತರ ಪ್ರಮುಖ ಆದ್ಯತೆಯಾಗಿದೆ ಎಂದು ಭಾಗವತ್ ಹೇಳಿದರು.

"ಒಬ್ಬ ಉತ್ತಮ ವ್ಯಕ್ತಿಯನ್ನು ಹೇಗೆ ರೂಪಿಸಬೇಕು ಎಂಬುದಕ್ಕೆ ಜಗತ್ತಿನಲ್ಲಿ ಇಷ್ಟು ಪರಿಣಾಮಕಾರಿ ವಿಧಾನ ಮತ್ತೊಂದಿಲ್ಲ. ಈ ವಿಷಯವನ್ನು ನಾನು ಹಿಂದೆ ಹೇಳುತ್ತಿದ್ದೆ. ಆದರೆ ಈಗ ಅದು ಎಲ್ಲರಿಗೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಏಕೆಂದರೆ ದೇಶ-ವಿದೇಶಗಳಿಂದ ಜನರು ಬಂದು ಆರ್‌ಎಸ್‌ಎಸ್‌ನ ಕಾರ್ಯವನ್ನು ನೇರವಾಗಿ ನೋಡುತ್ತಿದ್ದಾರೆ" ಎಂದು ಅವರು ಹೇಳಿದರು.

Mohan Bhagwat
'ಗುರುದಕ್ಷಿಣೆಯೇ ನಮ್ಮ ಆದಾಯ, ಪ್ರತಿಯೊಂದು ರೂಪಾಯಿಗೂ ಲೆಕ್ಕವಿದೆ', ನಮಗೆ ನೋಂದಣಿಯ ಅಗತ್ಯವಿಲ್ಲ: ಪ್ರಿಯಾಂಕ್ ಖರ್ಗೆಗೆ RSS ತಿರುಗೇಟು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com