ಬಿಜೆಪಿ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್! ರಕ್ಷಾಬಂಧನದಿಂದ ಪ್ರತಿಯೊಬ್ಬರಿಗೂ ₹2500

Mahila Samruddhi Yojana: ರಕ್ಷಾಬಂಧನ ಎಂಬ ಪವಿತ್ರ ಹಬ್ಬದ ಸಂದರ್ಭ ಮಹಿಳೆಯರಿಗೆ ಬಿಜೆಪಿ ಸರ್ಕಾರ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಅದರಂತೆ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಹಣವನ್ನ ಬಿಜೆಪಿ ಸರ್ಕಾರ ನೀಡಲಿದೆ.
₹2,500 for every woman starting from Raksha Bandhan!
ರಕ್ಷಾಬಂಧನದಿಂದ ಪ್ರತಿಯೊಬ್ಬ ಮಹಿಳೆಯರಿಗೂ ₹2500!Online Desk
Updated on

ರಕ್ಷಾಬಂಧನ (Raksha Bandhan) ಎಂಬ ಪವಿತ್ರ ಹಬ್ಬದ ಸಂದರ್ಭ ಮಹಿಳೆಯರಿಗೆ ಬಿಜೆಪಿ ಸರ್ಕಾರ (BJP Government) ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಅದರಂತೆ ಮುಂಬರುವ ಆಗಸ್ಟ್ 28 ರಿಂದ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಹಣವನ್ನ ದೆಹಲಿಯ ಬಿಜೆಪಿ ಸರ್ಕಾರ, ತನ್ನ ಚುನಾವಣಾ ಭರವಸೆಯಂತೆ ಮಹಿಳಾ ಸಮೃದ್ಧಿ ಯೋಜನೆಯನ್ನು (Mahila Samruddhi Yojana) ಜಾರಿಮಾಡಲಿದೆ ಎಂದು ವರದಿಯಾಗಿದೆ.

ಯಾರು ಯಾರಿಗೆ ₹ 2500?
ರಾಷ್ಟ್ರ ರಾಜಧಾನಿಯ 20 ರಿಂದ 22 ಲಕ್ಷ ಮಹಿಳೆಯರಿಗೆ ರೇಖಾ ಗುಪ್ತ ನೇತೃತ್ವದ ಬಿಜೆಪಿ ಸರ್ಕಾರ 2,500 ರೂಪಾಯಿ ನೀಡಲಿದೆ. ಇನ್ನು ಈ ಯೋಜನೆಗೆ ರಕ್ಷಾಬಂಧನದಂದು ಆಗಸ್ಟ್ 28 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಅದರಂತೆ ವಾರ್ಷಿಕ 2.5 ರಿಂದ 3 ಲಕ್ಷಗಳ ಆದಾಯದ, ಕುಟುಂಬಗಳ 21 ರಿಂದ 60 ವಯಸ್ಸಿನ, ದೆಹಲಿಯ ಮಹಿಳೆಯರು ಈ ಯೋಜನೆಯಡಿ ಹಣ ಪಡೆಯಲಿದ್ದಾರೆ.

₹2,500 for every woman starting from Raksha Bandhan!
ರಾಜಸ್ಥಾನ: Delhi-Mumbai ಎಕ್ಸ್‌ಪ್ರೆಸ್‌ವೇ; ಟ್ರಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ್; 8 ಮಂದಿ ಸಜೀವ ದಹನ, 24 ಜನರಿಗೆ ಗಾಯ

ಆದರೆ, ಸರ್ಕಾರಿ ಮಹಿಳಾ ಉದ್ಯೋಗಿಗಳು, ತೆರಿಗೆ ಪಾವತಿದಾರರು, ಸರ್ಕಾರಿ ಪಿಂಚಣಿ ಪಡೆಯುವ ಹಿರಿಯ ನಾಗರೀಕರು ಜೊತೆಗೆ ಕಾರುಗಳಂತಹ 4 ಚಕ್ರದ ವಾಹನ ಹೊಂದಿರುವವರಿಗೆ ಈ ಯೋಜನೆಯಿಂದ ಹಣ ಸಿಗುವುದಿಲ್ಲ ಎನ್ನಲಾಗಿದೆ. ಏತನ್ಮಧ್ಯೆ, ಅಧಿಕಾರಿಗಳನ್ನು ಉಲ್ಲೆಖಿಸಿ, "ಯೋಜನೆಗೆ ಈಗಾಗಲೇ ಬಹುತೇಕ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು, ಇನ್ನುಳಿದ ಪ್ರಕ್ರಿಯೆ ಕೂಡ ಶೀಘ್ರ ಮುಗಿಯಲಿದ್ದು ಆಗಸ್ಟ್ 28 ರಿಂದ ಎಲ್ಲರಿಗೂ ನೇರ ಹಣ ವರ್ಗಾವಣೆ ಮೂಲಕ ಅರ್ಹ ಫಲಾನುಭವಿಗಳ ಅಕೌಂಟ್‌ಗೆ ಹಣವನ್ನ ನೇರವಾಗಿ ಟ್ರಾನ್ಸ್‌ಫರ್ ಆಗಲಿದೆ ಎಂದು ವರದಿಯಾಗಿದೆ.

ಮಹಿಳಾ ಸಮೃದ್ಧಿ ಯೋಜನೆಗಾಗಿ ದೆಹಲಿ ಸರ್ಕಾರ ಈಗಾಗಲೇ 2026-27 ನೇ ಸಾಲಿನ ಬಜೆಟ್ ನಲ್ಲಿ 5,100 ಹಣವನ್ನ ಮೀಸಲಿಟ್ಟಿದೆ. ಯೋಜನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ರೇಖಾ ಗುಪ್ತ, "ಯೋಜನೆಯಡಿ, ಎಲ್ಲಾ ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆ ಇಲ್ಲದೆ ಸರಿಯಾಗಿ ಹಣ ಸೇರುತ್ತದೆ ಎನ್ನುವುದನ್ನು ಖಚಿತಪಡಿಸಿಗೊಂಡ ನಂತರವೇ ತಮ್ಮ ಸರ್ಕಾರ ಜಾರಿಗೆ ತರುವುದಾಗಿ" ತಿಳಿಸಿದ್ದಾರೆ.

₹2,500 for every woman starting from Raksha Bandhan!
Narendra Modi ಯಾಕೆ ಪತ್ರಿಕಾಗೋಷ್ಠಿ ನಡೆಸಲ್ಲ?: ವಿದ್ಯಾರ್ಥಿ ಪ್ರಶ್ನೆಗೆ ತೇಜಸ್ವಿ ಸೂರ್ಯ ಉತ್ತರ ಏನು ಅಂದರೆ...

ಮುಂದುವರೆದು ಈ ಯೋಜನೆಯ ಅರ್ಜಿ ಸಲ್ಲಿಕೆಯಿಂದ ಹಿಡಿದು ಹಣ ಸಂದಾಯದವರೆಗೆ ಸಂಪೂರ್ಣ ಪ್ರಕ್ರಿಯೆಯು ಆನ್ಲೈನ್ ಮೂಲಕವೇ ನಡೆಯಲಿದೆ. ಹಾಗಾಗಿ, ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆ, ಆಧಾರ್-ಲಿಂಕ್ ಮಾಡಲಾದ ಬ್ಯಾಂಕ್ ಅಕೌಂಟ್ ಮತ್ತು ಮೊಬೈಲ್ ನಂಬರ್ ಜೊತೆಗೆ ಇನ್ನಿತರ ಕೆಲ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com