ರೈಲಿನ AC ಕೋಚ್ ಹನಿಮೂನ್ ಥೀಮ್‌ನಲ್ಲಿ ಅಲಂಕಾರ: ಮುಖ್ಯ ಟಿಕೆಟ್ ಇನ್ಸ್ ಪೆಕ್ಟರ್ ಅಮಾನತು-Viral Video

11002 ನಾಂದೇಡ್ಗ್ರಾಮ್ ಎಕ್ಸ್‌ಪ್ರೆಸ್ ರೈಲಿನ ಫಸ್ಟ್ ಎಸಿ ಕ್ಯಾಬಿನ್ ನ್ನು ಬಲೂನ್‌ಗಳು, ಹೂವಿನ ಅಲಂಕಾರ, ಸಾವಿರಾರು ಗುಲಾಬಿ ಹೂವಿನ ದಳಗಳು ಹಾಗೂ ಗೋಡೆಯ ಮೇಲೆ "I Love You" ಎಂಬ ಸಂದೇಶದೊಂದಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು.
Decoration of Coach
ಕೋಚ್ ನ್ನು ವಿಶೇಷವಾಗಿ ಅಲಂಕಾರ ಮಾಡಿರುವುದು
Updated on

ಭಾರತೀಯ ರೈಲ್ವೆಯ ಫಸ್ಟ್ ಎಸಿ ಕೋಚ್ ನ್ನು 'ಹನಿಮೂನ್ ಸೂಟ್' ಮಾದರಿಯಲ್ಲಿ ಅಲಂಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

11002 ನಾಂದೇಡ್ಗ್ರಾಮ್ ಎಕ್ಸ್‌ಪ್ರೆಸ್ ರೈಲಿನ ಫಸ್ಟ್ ಎಸಿ ಕ್ಯಾಬಿನ್ ನ್ನು ಬಲೂನ್‌ಗಳು, ಹೂವಿನ ಅಲಂಕಾರ, ಸಾವಿರಾರು ಗುಲಾಬಿ ಹೂವಿನ ದಳಗಳು ಹಾಗೂ ಗೋಡೆಯ ಮೇಲೆ "I Love You" ಎಂಬ ಸಂದೇಶದೊಂದಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ರೈಲು ಸಂಚಾರದಲ್ಲಿರುವಾಗಲೇ ಈ ಕೋಚ್ ಸಂಪೂರ್ಣವಾಗಿ ರೊಮ್ಯಾಂಟಿಕ್ ವಾತಾವರಣಕ್ಕೆ ಪರಿವರ್ತನೆಯಾಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ಅಲಂಕಾರದ ಹಿಂದೆ ಮಹಾರಾಷ್ಟ್ರದ ರಾಹತ್ ರೂಮ್ ಡೆಕೊರೇಶನ್ ಸಂಸ್ಥೆಯಿದ್ದು, ಜಲ್ನಾದ ದಂಪತಿಗಾಗಿ ಫಸ್ಟ್ ಎಸಿ ಕ್ಯಾಬಿನ್ ನ್ನು ಮುಂಗಡವಾಗಿ ಬುಕ್ ಮಾಡಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ. ದಂಪತಿ ಔರಂಗಾಬಾದ್‌ನಿಂದ ಜಲ್ನಾ ರೈಲು ನಿಲ್ದಾಣದವರೆಗೆ ಕಾರಿನಲ್ಲಿ ಪ್ರಯಾಣಿಸಿದರೆ, ಈ ನಡುವೆ ಅವರ ತಂಡ ರೈಲಿನ ಕೋಚ್ ನ್ನು ಅಲಂಕರಿಸಿತ್ತು. ಬಳಿಕ ದಂಪತಿ ಜಲ್ನಾ ನಿಲ್ದಾಣದಲ್ಲಿ ರೈಲನ್ನು ಹತ್ತಿದ್ದರು.

ಭಾರತೀಯ ರೈಲ್ವೆ ಈ ಘಟನೆಗೆ ಗಂಭೀರವಾಗಿ ಸ್ಪಂದಿಸಿದೆ. ಅಲಂಕಾರ ಮಾಡಿದ ವ್ಯಕ್ತಿ ಯಾವುದೇ ಅನುಮತಿಯಿಲ್ಲದೆ ಕೋಚ್‌ಗೆ ಪ್ರವೇಶಿಸಿದ್ದರಿಂದ ಇದನ್ನು ಭದ್ರತಾ ಲೋಪವೆಂದು ಪರಿಗಣಿಸಲಾಗಿದೆ.

ಈ ಸಂಬಂಧ ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅನುಮತಿಯಿಲ್ಲದೆ ಕೋಚ್ ಪ್ರವೇಶ, ಟಿಕೆಟ್ ಇಲ್ಲದೆ ಪ್ರಯಾಣ ಹಾಗೂ ರೈಲ್ವೆ ಆವರಣಕ್ಕೆ ಅಕ್ರಮ ಪ್ರವೇಶ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ.

ಘಟನೆ ವೇಳೆ ಕರ್ತವ್ಯದಲ್ಲಿದ್ದ ಮುಖ್ಯ ಟಿಕೆಟ್ ಪರಿಶೀಲಕ ಗಿರೀಶ್ ಕುಮಾರ್ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ. ಜೊತೆಗೆ ಭದ್ರತಾ ಲೋಪಕ್ಕೆ ಕಾರಣರಾದವರನ್ನು ಪತ್ತೆಹಚ್ಚಲು ಇಲಾಖಾ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

Decoration of Coach
ಇಂದಿನಿಂದ ರೈಲು ಪ್ರಯಾಣ ದುಬಾರಿ: AC, Non-AC ಕೋಚ್ ಪರಿಷ್ಕೃತ ದರ ಪಟ್ಟಿ ಇಲ್ಲಿದೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಹಲವರು ಈ ವಿಭಿನ್ನ ಹಾಗೂ ರೊಮ್ಯಾಂಟಿಕ್ ಪ್ರಯತ್ನವನ್ನು ಶ್ಲಾಘಿಸಿ, ಜೀವನದ ವಿಶೇಷ ಕ್ಷಣವನ್ನು ಆಚರಿಸುವ ವಿಶಿಷ್ಟ ವಿಧಾನ ಎಂದು ಪ್ರಶಂಸಿಸಿದ್ದಾರೆ.

ಮತ್ತೊಂದೆಡೆ, ರೈಲಿನ ಕೋಚ್‌ಗಳನ್ನು ಈ ರೀತಿ ಅಲಂಕರಿಸಲು ಪ್ರಯಾಣಿಕರಿಗೆ ಅನುಮತಿ ಇದೆಯೇ ಎಂಬ ಪ್ರಶ್ನೆಯನ್ನು ಅನೇಕರು ಎತ್ತಿದ್ದಾರೆ. ಬಲೂನ್‌, ಕಾಗದ ಹಾಗೂ ಹೂವಿನ ಅಲಂಕಾರಗಳು ಅಗ್ನಿ ಅವಘಡಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇವು ರೈಲ್ವೆಯ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವುದಿಲ್ಲವೇ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಇದರ ನಡುವೆ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ಈ ರೈಲಿಗೆ ತಮಾಷೆಯಾಗಿ "ಸುಹಾಗ್‌ರಾತ್ ಎಕ್ಸ್‌ಪ್ರೆಸ್" ಹಾಗೂ "ಹನಿಮೂನ್ ಆನ್ ವೀಲ್ಸ್" ಎಂಬ ಹೆಸರುಗಳನ್ನು ನೀಡಿ, ಈ ವಿಶಿಷ್ಟ ಅಲಂಕಾರವನ್ನು ಆಧರಿಸಿ ಹಲವು ಮೀಮ್‌ಗಳು ಮತ್ತು ಹಾಸ್ಯಭರಿತ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Decoration of Coach
ಬೆಂಗಳೂರಿನಿಂದ ಮುಂಬೈಗೆ ಏಕಮುಖ ವಿಶೇಷ ರೈಲು ಸಂಚಾರ: ಇದು ಎಲ್ಲೆಲ್ಲಿ ನಿಲುಗಡೆಯಾಗಲಿದೆ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com