ಹುಟ್ಟುಹಬ್ಬಕ್ಕೆ ಕರೆದು ದಲಿತ ಬಾಲಕಿ ಮೇಲೆ ಪೊಲೀಸ್ ಅಧಿಕಾರಿ ಅತ್ಯಾಚಾರ; ಕಾವಲು ಕಾಯುತ್ತಿದ್ದ ಸಹೋದ್ಯೋಗಿ ಸೇರಿ ಇಬ್ಬರು ಅಂದರ್!

ಜುಲೈ 22ರ ಸಂಜೆ ಪರಿಚಯಸ್ಥರೊಬ್ಬರ ಮೊಬೈಲ್ ಫೋನ್ ಬಳಸಿ ಆ ಹುಡುಗಿಗೆ ಕರೆ ಮಾಡಿ, ತನ್ನ ಮಗಳ ಹುಟ್ಟುಹಬ್ಬದ ಸಮಾರಂಭಕ್ಕೆ ಆಹ್ವಾನಿಸಿದ್ದರು ಎಂದು ಆರೋಪಿಸಲಾಗಿದೆ.
Representative Image
ಪ್ರಾತಿನಿಧಿಕ ಚಿತ್ರ
Updated on

ಭೋಪಾಲ್: ತಮ್ಮ ಮಗಳ ಹುಟ್ಟುಹಬ್ಬದ ಸಮಾರಂಭಕ್ಕೆ ಆಹ್ವಾನಿಸುವ ನೆಪದಲ್ಲಿ ಕರೆದೊಯ್ದು ಪೊಲೀಸ್ ಅಧಿಕಾರಿಯೊಬ್ಬರು 17 ವರ್ಷದ ದಲಿತ ಬಾಲಕಿಯೊಬ್ಬಳನ್ನು ಅತ್ಯಾಚಾರವೆಸಗಿದ್ದಾರೆ. ಈ ವೇಳೆ ಅವರ ಸಹೋದ್ಯೋಗಿಯೊಬ್ಬರು ತಮ್ಮ ಮೂರು ವರ್ಷದ ಮಗನೊಂದಿಗೆ ಕಾವಲು ಕಾಯುತ್ತಿದ್ದರು ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮಧ್ಯಪ್ರದೇಶ ಪೊಲೀಸ್‌ನ ವಿಶೇಷ ಕಾರ್ಯಪಡೆಗೆ (STF) ಸೇರಿರುವ ಮತ್ತು ಸದ್ಯ ಧಾರಾ ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಮುಖ್ಯ ಆರೋಪಿ ಸಂತೋಷ್ ಸೇನ್ ಹಾಗೂ ಗ್ವಾಲಿಯರ್ ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಅವರ ಸಹೋದ್ಯೋಗಿ ಜಿತೇಂದ್ರ ರಜಪೂತ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಜಹಾಂಗೀರಾಬಾದ್ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಜನ್ ಸಿಂಗ್ ಅಹಿರ್ವಾರ್ ತಿಳಿಸಿದ್ದಾರೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, ಭಾರತೀಯ ನ್ಯಾಯ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಅತ್ಯಾಚಾರ ಹಾಗೂ ಇತರ ಅಪರಾಧಗಳ ಆರೋಪದ ಮೇಲೆ ಸೇನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅತ್ಯಾಚಾರದ ಆರೋಪವನ್ನು ಹೊರತುಪಡಿಸಿ, ರಜಪೂತ್ ವಿರುದ್ಧವೂ ಇದೇ ಕಾಯ್ದೆಗಳನ್ನು ಅನ್ವಯಿಸಲಾಗಿದೆ ಎಂದು ಅವರು ತಿಳಿಸಿದರು.

ರಜಪೂತ್ ಆ ಹುಡುಗಿಯನ್ನು ಕರೆದೊಯ್ಯಲು ಕಾರಿನ ವ್ಯವಸ್ಥೆ ಮಾಡಿದ್ದರು ಮತ್ತು ಆ ಅಪರಾಧವನ್ನು ಎಸಗಲು ಸೇನ್‌ಗೆ ಸಹಾಯ ಮಾಡಿದ್ದರು ಎಂದು ರಾಜನ್ ಸಿಂಗ್ ಅಹಿರ್ವಾರ್ ತಿಳಿಸಿದರು.

ಇತ್ತೀಚೆಗಷ್ಟೇ ಭೋಪಾಲ್‌ನಿಂದ ಧಾರ್ ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಸೇನ್, ಜುಲೈ 22ರ ಸಂಜೆ ಪರಿಚಯಸ್ಥರೊಬ್ಬರ ಮೊಬೈಲ್ ಫೋನ್ ಬಳಸಿ ಆ ಹುಡುಗಿಗೆ ಕರೆ ಮಾಡಿ, ತನ್ನ ಮಗಳ ಹುಟ್ಟುಹಬ್ಬದ ಸಮಾರಂಭಕ್ಕೆ ಆಹ್ವಾನಿಸಿದ್ದರು ಎಂದು ಆರೋಪಿಸಲಾಗಿದೆ.

Representative Image
ಬಾಗೇಪಲ್ಲಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ; ಆರೋಪಿಗಾಗಿ ಪೊಲೀಸರ ಹುಡುಕಾಟ!

ಸಂಜೆ ಸುಮಾರು 6.30ರ ಸುಮಾರಿಗೆ ಆ ಬಾಲಕಿ ಲಾಲ್ ಪರೇಡ್ ಮೈದಾನದ ಬಳಿ ತಲುಪಿದಾಗ, ರಜಪೂತ್‌ನ ಮೂರು ವರ್ಷದ ಮಗನೊಂದಿಗೆ ಇಬ್ಬರು ಪೊಲೀಸರು ಕಾರಿನಲ್ಲಿ ಕಾಯುತ್ತಿದ್ದರು ಎಂದು ಅಧಿಕಾರಿ ತಿಳಿಸಿದರು.

ಸೇನ್ ಆ ಹುಡುಗಿಯ ವಿಶ್ವಾಸ ಗಳಿಸಿ ಆಕೆಯನ್ನು ಎಂಪಿ ನಗರದ ಮನೆಯೊಂದಕ್ಕೆ ಕರೆದೊಯ್ದಿದ್ದಾನೆ; ಅಲ್ಲಿ ರಜಪೂತ್ ತನ್ನ ಮಗನೊಂದಿಗೆ ಹೊರಗೆ ನಿಂತು ಕಾವಲು ಕಾಯುತ್ತಿರುವಾಗ ಆತ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಆ ಹುಡುಗಿ ಮನೆಗೆ ತೆರಳಿ ತನ್ನ ಕುಟುಂಬದವರಿಗೆ ವಿಷಯ ತಿಳಿಸಿದ್ದು, ದೂರು ದಾಖಲಿಸಲಾಯಿತು.

ಪೊಲೀಸರು ಆರಂಭದಲ್ಲಿ ಕಮಲಾ ನಗರ ಪೊಲೀಸ್ ಠಾಣೆಯಲ್ಲಿ 'ಶೂನ್ಯ ಎಫ್‌ಐಆರ್' (Zero FIR) ದಾಖಲಿಸಿದರು ಮತ್ತು ನಂತರ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಜಹಾಂಗೀರಾಬಾದ್ ಪೊಲೀಸ್ ಠಾಣೆಗೆ ವರ್ಗಾಯಿಸಿದರು. ಅಪರಾಧ ಎಲ್ಲಿ ನಡೆದಿದೆ ಅಥವಾ ಆ ಪ್ರದೇಶವು ಯಾವ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಲೆಕ್ಕಿಸದೆ, ಭಾರತದ ಯಾವುದೇ ಪೊಲೀಸ್ ಠಾಣೆಯಲ್ಲಿ 'ಶೂನ್ಯ ಎಫ್‌ಐಆರ್' ಅನ್ನು ದಾಖಲಿಸಬಹುದು.

'ಅವರನ್ನು ಗುರುವಾರ ಬಂಧಿಸಲಾಯಿತು. ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದೇವೆ' ಎಂದು ಅಹಿರ್ವಾರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com