ಭೀಕರ: ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್; ತಿಂಡಿ ತರಲು ಹೋಗಿದ್ದ ಮಕ್ಕಳಿಗೆ ಗಂಭೀರ ಗಾಯ, Video Viral

ನಯಾ ತಲಾಬ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆ ಬದಿಯ ಅಂಗಡಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಅಂಗಡಿಯ ಸಮೀಪದಲ್ಲಿದ್ದ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.
2 Children Seriously Injured After Tractor Carrying Electric Poles Crashes Into Shop
ಅಂಗಡಿಗೆ ಢಿಕ್ಕಿಯಾದ ವಿದ್ಯುತ್ ಕಂಬ ಹೊತ್ತಿದ್ದ ಟ್ರಾಕ್ಟರ್
Updated on

ಜೈಪುರ: ರಾಜಸ್ಥಾನದ ಜಾಲಾವರ್ ಜಿಲ್ಲೆಯ ನಯಾ ತಲಾಬ್ ರಸ್ತೆಯಲ್ಲಿ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು, ವಿದ್ಯುತ್ ಕಂಬಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಅಂಗಡಿಗೆ ಢಿಕ್ಕಿಯಾದ ಪರಿಣಾಮ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೂಲಗಳ ಪ್ರಕಾರ ಟ್ರ್ಯಾಕ್ಟರ್‌ನಲ್ಲಿ ಭಾರೀ ಗಾತ್ರದ ವಿದ್ಯುತ್ ಕಂಬಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ನಯಾ ತಲಾಬ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆ ಬದಿಯ ಅಂಗಡಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಅಂಗಡಿಯ ಸಮೀಪದಲ್ಲಿದ್ದ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.

ಘಟನೆ ಕಂಡ ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳು ಮಕ್ಕಳನ್ನು ಅವಶೇಷಗಳಿಂದ ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

2 Children Seriously Injured After Tractor Carrying Electric Poles Crashes Into Shop
ಬಸ್ ಹತ್ತೋದು, ಮೈಕೈ ಮುಟ್ಟೋದು! ಕಾಮುಕನಿಗೆ ಮಹಿಳೆ ಧರ್ಮದೇಟು; ಕಾಲಲ್ಲಿ ಒದ್ದು ಚಾಲಕನಿಂದ ಸಖತ್ ಕ್ಲಾಸ್..! Video

ತಿಂಡಿ ತರಲು ಹೋಗಿದ್ದ ಮಕ್ಕಳು

ಇನ್ನು ಈ ಅಪಘಾತದಲ್ಲಿ ಇಬ್ಬರು ಮಕ್ಕಳು ತಿಂಡಿತರಲೆಂದು ಅಂಗಡಿಗೆ ತೆರಳಿದ್ದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ವಿದ್ಯುತ್ ಕಂಬ ಹೊತ್ತು ಸಾಗುತ್ತಿದ್ದ ಟ್ರಾಕ್ಟರ್ ನಿಯಂತ್ರಣ ತಪ್ಪಿ ನೇರವಾಗಿ ಅಂಗಡಿ ಮತ್ತು ಅಂಗಡಿ ಮುಂದಿದ್ದ ಮಕ್ಕಳಿಗೆ ಢಿಕ್ಕಿಯಾಗಿದೆ.

ಅಪಘಾತದಿಂದ ಅಂಗಡಿಗೆ ಹಾಗೂ ಸುತ್ತಮುತ್ತಲಿನ ಆಸ್ತಿಪಾಸ್ತಿಗೂ ಭಾರೀ ಹಾನಿಯಾಗಿದೆ. ಡಿಕ್ಕಿಯ ಭಾರೀ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ರ್ಯಾಕ್ಟರ್ ನಿಯಂತ್ರಣ ತಪ್ಪಲು ಅತಿವೇಗ, ಯಾಂತ್ರಿಕ ದೋಷ ಅಥವಾ ಚಾಲಕನ ನಿರ್ಲಕ್ಷ್ಯ ಕಾರಣವೇ ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ.

ಸಂಚಾರ ಅಸ್ತವ್ಯಸ್ತ

ಅಪಘಾತದ ಹಿನ್ನೆಲೆಯಲ್ಲಿ ನಯಾ ತಲಾಬ್ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಟ್ರ್ಯಾಕ್ಟರ್ ತೆರವುಗೊಳಿಸಿ ರಸ್ತೆ ಸಂಚಾರವನ್ನು ಪೊಲೀಸರು ಪುನಃ ಆರಂಭಿಸಿದರು.

ಈ ಘಟನೆ ನಗರ ಪ್ರದೇಶಗಳಲ್ಲಿ ಭಾರೀ ತೂಕದ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ವಾಹನಗಳ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಸಾಕ್ಷಿಗಳ ಹೇಳಿಕೆ ಹಾಗೂ ಚಾಲಕನ ವಿಚಾರಣೆಯ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com