BJP ಕಚೇರಿಯಲ್ಲಿ ಸ್ಫೋಟ; ಪಂಜಾಬ್‌ನ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಿದ ದುಷ್ಕರ್ಮಿಗಳು

ಜುಲೈ 26ರ ತಡರಾತ್ರಿ ಪಂಜಾಬ್‌ನ ಸಂಗ್ರೂರ್‌ನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಅದರಲ್ಲೂ, ಪಂಜಾಬ್‌ನಲ್ಲಿ ಕಳೆದ ಮೂರು ತಿಂಗಳಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದು ಎರಡನೇ ಬಾರಿ. ಆ ಕುರಿತ ವರದಿ ಇಲ್ಲಿದೆ.
Petrol bomb attack on BJP district office in Sangrur, Punjab
ಪಂಜಾಬ್‌ನ ಸಂಗ್ರೂರ್‌ನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ದಾಳಿOnline Desk
Updated on

ಸಂಗ್ರೂರ್‌ (ಪಂಜಾಬ್‌): ಜುಲೈ 26ರ ತಡರಾತ್ರಿ ಪಂಜಾಬ್‌ನ ಸಂಗ್ರೂರ್‌ನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಅದರಲ್ಲೂ, ಪಂಜಾಬ್‌ನಲ್ಲಿ ಕಳೆದ ಮೂರು ತಿಂಗಳಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದು ಎರಡನೇ ಬಾರಿ. ಆ ಕುರಿತ ವರದಿ ಇಲ್ಲಿದೆ.

ಏನಿದು ಘಟನೆ?

ಜುಲೈ 26ರ ತಡರಾತ್ರಿ ಪಂಜಾಬ್‌ನ ಸಂಗ್ರೂರ್‌ನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ತುಂಬಿದ್ದ ಬಾಟಲ್ ಗಳನ್ನು ಕಾಂಪೌಂಡ್ ಗೋಡೆಯ ಒಳಗೆ ಎಸೆದಿದ್ದಾರೆ. ಈ ಸ್ಫೋಟದಿಂದಾಗಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಕಾಂಪೌಂಡ್ ಗೋಡೆಯ ಒಂದು ಭಾಗ ಹಾನಿಯಾಗಿದೆ. ಅಲ್ಲದೆ, ಕಚೇರಿಯ ಹೊರಗಿನ ಗೋಡೆಗಳಿಗೆ ಕಪ್ಪು ಮಸಿ ಬಳಿಯಲಾಗಿದೆ.

ಬಿಜೆಪಿ ಕಚೇರಿಯ ಮೇಲೆ ದಾಳಿ ಏಕೆ ನಡೆಯಿತು?

ಆದಾಗ್ಯೂ, ದಾಳಿಯ ಹಿಂದಿನ ಉದ್ದೇಶ ಮತ್ತು ಆರೋಪಿಗಳ ಗುರುತು ಇನ್ನೂ ಸ್ಪಷ್ಟವಾಗಿಲ್ಲ. ದಾಳಿಯು ರಾಜಕೀಯ ದ್ವೇಷದಿಂದಾಗಿದೆಯೇ ಅಥವಾ ಬೇರೆ ಯಾವುದಾದರೂ ಉದ್ದೇಶದಿಂದಾಗಿದೆಯೇ ಎಂದು ಪಂಜಾಬ್ ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.

ಏತನ್ಮಧ್ಯೆ, ಇದಕ್ಕೂ ಮುನ್ನ, ಏಪ್ರಿಲ್ 1, 2026 ರಂದು ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಪ್ರಧಾನ ಕಚೇರಿಯ ಹೊರಗೂಕೂಡ ಇದೇ ಮಾದರಿಯ ಸ್ಫೋಟ ಸಂಭವಿಸಿತ್ತು. ಆ ವೇಳೆ ದಾಳಿಗೆ ಹ್ಯಾಂಡ್ ಗ್ರೆನೇಡ್ ಬಳಸಲಾಗಿತ್ತು. ಆದರೆ, ಈ ಎರಡೂ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.

Petrol bomb attack on BJP district office in Sangrur, Punjab
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಎಕೆ-47 ಬಳಸಿ ಫೈರಿಂಗ್: ಬಿಹಾರ ಪೊಲೀಸ್ ಅಮಾನತು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com