

ನಾಸಿಕ್: ಏಕನಾಥ್ ಶಿಂಧೆ ಬಣದಲ್ಲಿದ್ದು, ಪಶ್ಚಾತ್ತಾಪ ಪಡುತ್ತಿರುವ ಯಾವುದೇ ನಾಯಕರು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ಮರಳಬೇಕು ಎಂದು ಶಿವಸೇನೆ-ಯುಬಿಟಿ ನಾಯಕ ಸಂಜಯ್ ರಾವತ್ ಮಂಗಳವಾರ ಹೇಳಿದ್ದಾರೆ. ಆದಾಗ್ಯೂ, ಕೆಲವರಿಗೆ ಪಕ್ಷದಲ್ಲಿ ಜಾಗ ಸಿಗಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಅವಮಾನ ಮತ್ತಿತರ ಕಾರಣದಿಂದ ದಾರಿ ತಪ್ಪಿರುವುದಾಗಿ ಯಾರಿಗಾದರೂ ಅನಿಸುತ್ತಿದ್ದರೆ ಅಂತಹವರು ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಬಣ ಸೇರುವಂತೆ ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ರಾವತ್ ಆಹ್ವಾನ ನೀಡಿದ್ದಾರೆ.
ಶಿಂಧೆ ಬಣದಲ್ಲಿ ಹೆಚ್ಚುತ್ತಿರುವ ಅಸಮಾಧಾನ: ಬಿಜೆಪಿ ಸೇನೆಯ (ಯುಬಿಟಿ) ಕೈ ಮತ್ತು ಕಾಲುಗಳನ್ನು ಕತ್ತರಿಸಿದರೆ, ಅದು ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ (ಶಿಂಧೆ ನೇತೃತ್ವದ) ಶಿವಸೇನೆಯ ತಲೆಯನ್ನು ಕತ್ತರಿಸಿತು ಎಂದು ಶಿಂಧೆ ನೇತೃತ್ವದ ಶಿವಸೇನಾ ಬಣದಲ್ಲಿರುವ ಮಾಜಿ ರಾಜ್ಯ ಸಚಿವ ಅಬ್ದುಲ್ ಸತ್ತಾರ್ ಹೇಳಿದ ಒಂದು ದಿನದ ನಂತರ ರಾವತ್ ಈ ಹೇಳಿಕೆ ನೀಡಿದ್ದಾರೆ.
ನಮ್ಮ ಅಣ್ಣನೇ ನಮ್ಮನ್ನು ಮುಗಿಸುತ್ತಿದ್ದರೆ ಶಿವಸೇನೆ-ಬಿಜೆಪಿ ಮೈತ್ರಿಕೂಟಕ್ಕೆ ಅರ್ಥ ಇರಲ್ಲ ಎಂದು ಅವರು ಹೇಳಿದ್ದರು.
ಶಿವಸೇನೆ ವಿಭಜನೆಗೆ ಬಿಜೆಪಿ ಕಾರಣ: ಮಹಾರಾಷ್ಟ್ರದಲ್ಲಿ ಮೂಲ ಕೇಸರಿ ಮೈತ್ರಿಕೂಟದಲ್ಲಿ ಬಿಜೆಪಿ ಎಂದಿಗೂ "ಹಿರಿಯ ಸಹೋದರ" ಆಗಿರಲಿಲ್ಲ ಎಂದು ರಾವತ್ ಹೇಳಿದರು. ಅವಿಭಜಿತ ಶಿವಸೇನೆ ಹಿರಿಯ ಪಾಲುದಾರರಾಗಿದ್ದು, ಬಿಜೆಪಿ ಇದನ್ನು ಸಹಿಸಿಕೊಳ್ಳದ ಕಾರಣ ಪಕ್ಷವನ್ನು ವಿಭಜಿಸಿತು ಎಂದು ಅವರು ಹೇಳಿದರು.
ಶಿಂಧೆ ನೇತೃತ್ವದ ಶಿವಸೇನೆ ಒಂದು ಪಕ್ಷವಲ್ಲ, ಆದರೆ ಚುನಾವಣಾ ಆಯೋಗದ "ಭ್ರಷ್ಟ ಅಭ್ಯಾಸಗಳಿಂದ" ಹುಟ್ಟಿಕೊಂಡಿದೆ. ಶಿವಸೇನಾ ಚಿಹ್ನೆ ಮತ್ತು ಹೆಸರಿಗೆ ಸಂಬಂಧಿಸಿದ ಕಾನೂನು ವಿವಾದದ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪು ಬಂದಾಗಲೆಲ್ಲಾ ಅದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಪರವಾಗಿರಲಿದೆ ಎಂದು ರಾವತ್ ತಿಳಿಸಿದ್ದಾರೆ.
ಸೇನಾ (ಯುಬಿಟಿ) ವಕ್ತಾರೆ ಪ್ರತಿಕ್ರಿಯೆಗಳು: ಸೇನಾ (ಯುಬಿಟಿ) ವಕ್ತಾರೆ ಸುಷ್ಮಾ ಅಂಧಾರೆ ಕೂಡ ಸತ್ತಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಸ್ಲೋ ಪಾಯಿಸನ್ ಎಂಬುದು ನಮಗೆ ಮೊದಲಿನಿಂದಲೂ ತಿಳಿದಿತ್ತು. ಆದರೆ, ಅಧಿಕಾರದ ಆಸೆಗೆ ಬಿದ್ದು ಈಗ ಅಸಹಾಯಕರಾಗಿದ್ದೀರಿ ಎಂದು ಹೇಳಿದ್ದಾರೆ.
Advertisement