ಅಲ್ಪ ಜ್ಞಾನ ಅಪಾಯಕಾರಿ: NFHS-6 ಸಂಶೋಧನೆಗಳ ಕುರಿತು ಖರ್ಗೆ ವಿರುದ್ಧ ನಡ್ಡಾ ವಾಗ್ದಾಳಿ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS)-6 ಸಂಶೋಧನೆಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಟೀಕೆಗೆ ಪ್ರತಿಯಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಪ್ರತಿಕ್ರಿಯಿಸಿದ್ದಾರೆ. ಅಲ್ಪಜ್ಞಾನ ಅಪಾಯಕಾರಿ ಎಂದು ಹೇಳಿದ್ದಾರೆ.
JP Nadda, Mallikarjun kharge
ಜೆಪಿ ನಡ್ಡಾ, ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS)-6 ಸಂಶೋಧನೆಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಟೀಕೆಗೆ ಪ್ರತಿಯಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಪ್ರತಿಕ್ರಿಯಿಸಿದ್ದಾರೆ. ಅಲ್ಪಜ್ಞಾನ ಅಪಾಯಕಾರಿ ಎಂದು ಹೇಳಿದ್ದು, ಇತ್ತೀಚಿನ ದತ್ತಾಂಶವು ಮೋದಿ ಸರ್ಕಾರದ ಅಡಿಯಲ್ಲಿ ಭಾರತದ ಆರೋಗ್ಯ ರಕ್ಷಣಾ ಸೂಚಕಗಳಲ್ಲಿ ಗಮನಾರ್ಹ ಸುಧಾರಣೆಯನ್ನು ತೋರಿಸುತ್ತದೆ ಎಂದು ಹೇಳಿದರು.

NFHS-6 ದತ್ತಾಂಶವು ಭಾರತೀಯ ಜನತಾ ಪಕ್ಷದ (BJP) ಸರ್ಕಾರದ ಸಂಪೂರ್ಣ ಅಸಮರ್ಥತೆಯನ್ನು ಬಹಿರಂಗಪಡಿಸಿದೆ. ಆರೋಗ್ಯ ರಕ್ಷಣೆ ಮತ್ತು ಪೌಷ್ಟಿಕಾಂಶದಲ್ಲಿನ ತನ್ನ ವೈಫಲ್ಯಗಳನ್ನು ಎತ್ತಿ ತೋರಿಸುವ ನಿರ್ಣಾಯಕ ದತ್ತಾಂಶವನ್ನು ಉದ್ದೇಶಪೂರ್ವಕವಾಗಿ ಮರೆಮಾಡಿದೆ ಎಂದು ಖರ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್‌ ಮಾಡಿದ್ದರು. ಕಾಂಗ್ರೆಸ್ ಅಧ್ಯಕ್ಷರ ಟೀಕೆಗಳಿಗೆ ಪ್ರತಿಕ್ರಿಯಿಸಿದ ನಡ್ಡಾ, ರಾಜಕೀಯ ಉದ್ದೇಶಗಳಿಗಾಗಿ ಸಮೀಕ್ಷೆಯ ಸಂಶೋಧನೆಗಳನ್ನು ಆಯ್ದ ಭಾಗವಾಗಿ ನೋಡುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿನ "ಗಮನಾರ್ಹ ಬದಲಾವಣೆಗಳನ್ನು" ದತ್ತಾಂಶವು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

JP Nadda, Mallikarjun kharge
NEET-UG 2026: ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ 'ಸೋರಿಕೆ' ಆರೋಪ ತಳ್ಳಿಹಾಕಿದ NTA; ಸುಳ್ಳು ಸುದ್ದಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ಖರ್ಗೆಯವರ ಅಲ್ಪ ಜ್ಞಾನ ಅಪಾಯಕಾರಿ. ಸಾರ್ವಜನಿಕ ಆರೋಗ್ಯವನ್ನು ರಾಜಕೀಯವಾಗಿ ನೋಡುತ್ತಿರುವುದು ಸರಿಯಲ್ಲ. ಅಲ್ಪ ಜ್ಞಾನದಿಂದ ರಾಜಕೀಯಕ್ಕೆ ಸೇವೆ ಸಲ್ಲಿಸಬಹುದು. ಆದರೆ ಸತ್ಯಗಳು ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತವೆ ಎಂದು Xನಲ್ಲಿ ಪೋಸ್ಟ್ ಮಾಡಿದ್ದಾರೆ. NFHS-3 (2005-06) ರಿಂದ ತಾಯಿಯ ಆರೋಗ್ಯ ರಕ್ಷಣಾ ಸೂಚಕಗಳಲ್ಲಿನ ಸುಧಾರಣೆಗಳನ್ನು ಉಲ್ಲೇಖಿಸಿ, ಮೊದಲ ತ್ರೈಮಾಸಿಕದಲ್ಲಿ ಪ್ರಸವಪೂರ್ವ ನೋಂದಣಿ ಶೇಕಡಾ 43.9 ರಿಂದ 76.2ಕ್ಕೆ, ಸಾಂಸ್ಥಿಕ ಹೆರಿಗೆಗಳು ಶೇಕಡಾ 38.7 ರಿಂದ 90.6ಕ್ಕೆ ಮತ್ತು ನುರಿತ ಆರೋಗ್ಯ ಸಿಬ್ಬಂದಿ ಹಾಜರಾದ ಹೆರಿಗೆಗಳು ಶೇಕಡಾ 46.6 ರಿಂದ 91.3ಕ್ಕೆ ಏರಿದೆ ಎಂದು ಹೇಳಿದರು. ಈ ಸಾಧನೆಗಳು ದೇಶಾದ್ಯಂತ ಮಹಿಳೆಯರಿಗೆ ಆರೋಗ್ಯ ಸೇವೆಗಳಿಗೆ ಸುಧಾರಿತ ಪ್ರವೇಶವನ್ನು ಪ್ರತಿಬಿಂಬಿಸುತ್ತವೆ ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com