10 ಸೆಕೆಂಡ್ ಗುಂಡಿನ ಸುರಿಮಳೆ: ಹಾಡಹಗಲೇ ಜಿಮ್ ಮಾಲೀಕನ ಭೀಕರ ಹತ್ಯೆ, Video Viral

26 ವರ್ಷದ ಜಿಮ್ ಮಾಲೀಕ ಕಪಿಲ್ ಎಂಬಾತ ಮೃತಪಟ್ಟಿದ್ದು, ಘಟನೆಯಲ್ಲಿ ಒಬ್ಬ ಯುವತಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
gym owner in Hansi was murdered
ಹಾಡಹಗಲೇ ಗುಂಡಿಟ್ಟು ವ್ಯಕ್ತಿಯ ಹತ್ಯೆPTI
Updated on

ಹನ್ಸಿ: ಹರ್ಯಾಣದ ಹನ್ಸಿ ಪಟ್ಟಣದ ಫವ್ವಾರಾ ಚೌಕ್ ಸಮೀಪ ಹಾಡಹಗಲೇ ಭೀಕರ ಹತ್ಯೆ ನಡೆದಿದ್ದು, ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ನಡು ರಸ್ತೆಯಲ್ಲೇ ವ್ಯಕ್ತಿಯೊಬ್ಬರ ಮೇಲೆ ಗುಂಡಿನ ಸುರಿಮಳೆ ಗೈದು ಹತ್ಯೆ ಮಾಡಿದ್ದಾರೆ.

ಗುರುವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ 26 ವರ್ಷದ ಜಿಮ್ ಮಾಲೀಕ ಕಪಿಲ್ ಎಂಬಾತ ಮೃತಪಟ್ಟಿದ್ದು, ಘಟನೆಯಲ್ಲಿ ಒಬ್ಬ ಯುವತಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಮೂಲಗಳ ಪ್ರಕಾರ ಹರ್ಯಾಣದ ಜಿಂದ್ ಜಿಲ್ಲೆಯ ಗ್ರಾಮವೊಂದರ ನಿವಾಸಿಯಾಗಿದ್ದ ಕಪಿಲ್, ಹನ್ಸಿಯಲ್ಲಿ ಫಿಟ್ನೆಸ್ ಸೆಂಟರ್ ನಡೆಸುತ್ತಿದ್ದರು. ಅವರು ಆ ಸಮಯದಲ್ಲಿ ಆರು-ಏಳು ಮಂದಿ ಯುವಕರಿಗೆ ಮುಚ್ಚಿದ್ದ ಅಂಗಡಿಗಳ ಮೆಟ್ಟಿಲುಗಳ ಮೇಲೆ ಹೊರಾಂಗಣ ತರಬೇತಿ ನೀಡುತ್ತಿದ್ದರು. ಇದೇ ಸಂದರ್ಭದಲ್ಲಿ ಈ ದಾಳಿ ನಡೆದಿದ್ದು, ಅಂಗಡಿಯೊಂದರ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

gym owner in Hansi was murdered
ಧರ್ಮಸ್ಥಳ ವಿಸ್ಮಯ: 26 ವರ್ಷಗಳ ಹಿಂದೆ ಕಾಣೆಯಾಗಿದ್ದ ಸತೀಶ್, ಸಲೀಂ ಆಗಿ ಪತ್ತೆ! ಸಾಯುವ ಮುನ್ನ ಮಗನ ನೋಡಬೇಕೆಂಬ ತಾಯಿ ಕನಸು ನನಸು!

ಭೀಕರ ವಿಡಿಯೋ

ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಕಪಿಲ್ ತಮ್ಮ ಗ್ರಾಹಕರಿಗೆ ‘ಸ್ಟೆಪ್-ಅಪ್’ ವ್ಯಾಯಾಮ ಮಾಡಿಸುತ್ತಿದ್ದ ವೇಳೆ ಅವರು ರಸ್ತೆಯ ಕಡೆಗೆ ಬೆನ್ನು ತಿರುಗಿಸಿಕೊಂಡಿರುವುದು ಕಾಣಿಸುತ್ತದೆ.

ಈ ವೇಳೆ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಲ್ಲಿ ಚಾಲಕ ಹೆಲ್ಮೆಟ್ ಧರಿಸಿದ್ದರೆ, ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಬಿಳಿ ಬಣ್ಣದ ಕ್ಯಾಪ್ ಧರಿಸಿ ಮುಖವನ್ನು ಮುಚ್ಚಿಕೊಂಡಿದ್ದ. ಹಿಂಬದಿ ಸವಾರ ಬೈಕ್‌ನಿಂದ ಇಳಿದು ಕೆಲವೇ ಕ್ಷಣಗಳಲ್ಲಿ ಕಪಿಲ್ ಮೇಲೆ ಅತ್ಯಂತ ಸಮೀಪದಿಂದ 10 ಸುತ್ತು ಗುಂಡು ಹಾರಿಸಿದ್ದಾನೆ.

ತಲೆಗೆ ಮತ್ತು ಬೆನ್ನಿಗೆ ಗುಂಡು ತಗುಲಿದ್ದ ಕಪಿಲ್, ಗುಂಡು ಹಾರಿಸಿದ ವ್ಯಕ್ತಿಯ ಕಡೆ ತಿರುಗಿ ನೋಡುವಷ್ಟರಲ್ಲಿ ನೆಲಕ್ಕುರುಳಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

ಮಹಿಳೆಗೂ ಗಾಯ

ಇನ್ನು ಅಲ್ಲೇ ವಾರ್ಮ್-ಅಪ್ ಮಾಡುತ್ತಿದ್ದ ಶಿಖಾ ಎಂಬ ಮಹಿಳೆಗೂ ಗುಂಡಿನ ಚೂರುಗಳು ತಗುಲಿ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಹಿಸಾರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್ ತನಿಖೆ

ಘಟನೆಯ ಬಳಿಕ ಪೊಲೀಸರು ಸ್ಥಳವನ್ನು ಸುತ್ತುವರಿದು ತನಿಖೆ ಆರಂಭಿಸಿದ್ದಾರೆ. ಅಪರಾಧ ತನಿಖಾ ಸಂಸ್ಥೆ (CIA) ಹಾಗೂ ವಿಧಿವಿಜ್ಞಾನ ತಜ್ಞರ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ದುಷ್ಕರ್ಮಿಗಳ ಗುರುತು ಹಾಗೂ ಅವರು ಪರಾರಿಯಾದ ಮಾರ್ಗವನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಪೊಲೀಸ್ ಉಪ ಅಧೀಕ್ಷಕ (ಮುಖ್ಯ ಕಚೇರಿ) ವಿನೋದ್ ಶಂಕರ್ ಅವರ ಪ್ರಕಾರ, ಕಪಿಲ್ ಇತ್ತೀಚೆಗಷ್ಟೇ ತಮ್ಮ ಫಿಟ್ನೆಸ್ ಕೇಂದ್ರವನ್ನು ಈ ಹೊಸ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ಹತ್ಯೆಯ ಹಿಂದಿನ ಉದ್ದೇಶವನ್ನು ಪತ್ತೆಹಚ್ಚಲು ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಕಪಿಲ್ ಅವರ ತಾಯಿ ನೀಡಿದ ಮಾಹಿತಿಯ ಪ್ರಕಾರ, ಅವರು ಮೂರು ವರ್ಷಗಳ ಹಿಂದೆ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com