AN-32 crash: ಜೋರ್ಹತ್ ವಾಯುನೆಲೆಯಲ್ಲಿ AN-32 ವಿಮಾನ ಪತನ, ಕೊನೇ ಕ್ಷಣದಲ್ಲಿ ಆಗಿದ್ದೇನು? Video

ವಿಮಾನವು ನಿಯಮಿತ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿದ್ದು, ಇದರ ಪರಿಣಾಮವಾಗಿ ಐದು IAF ಸಿಬ್ಬಂದಿ ಸಾವನ್ನಪ್ಪಿದ್ದರು. ಸಹ ಪೈಲಟ್ ಬದುಕುಳಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
Assam AN-32 crash CCTV footage has surfaced online
ಭಾರತೀಯ ವಾಯುಸೇನೆ ಎಎನ್ 32 ವಿಮಾನ ಪತನದ ಅಂತಿಮ ಕ್ಷಣ
Updated on

ಗುವಾಹತಿ: ಕಳೆದ ಶನಿವಾರ ಐದು ಸಿಬ್ಬಂದಿಗಳ ದಾರುಣ ಸಾವಿಗೆ ಕಾರಣವಾದ ಅಸ್ಸಾಂ ಜೋರ್ಹತ್ ವಾಯುನೆಲೆಯಲ್ಲಿ ಸಂಭವಿಸಿದ AN-32 ವಿಮಾನ ಪತನದ ಅಂತಿಮ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು.. ಭಾರತೀಯ ವಾಯುಸೇನೆಗೆ ಸೇರಿದ AN-32 ವಿಮಾನ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಜೋರ್ಹತ್‌ನಲ್ಲಿ ನಡೆದ ದುರಂತ ಘಟನೆಯ ಸುತ್ತಲಿನ ಕ್ಷಣಗಳನ್ನು ತೋರಿಸುತ್ತಿದೆ.

ಭಾರತೀಯ ವಾಯುಪಡೆಯ ಸಾರಿಗೆ ವಿಮಾನವು ನಿಯಮಿತ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿದ್ದು, ಇದರ ಪರಿಣಾಮವಾಗಿ ಐದು IAF ಸಿಬ್ಬಂದಿ ಸಾವನ್ನಪ್ಪಿದ್ದರು. ಸಹ ಪೈಲಟ್ ಬದುಕುಳಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಕಾರಣವನ್ನು ನಿರ್ಧರಿಸಲು ತನಿಖೆಯನ್ನು ಪ್ರಾರಂಭಿಸಲಾಗಿದೆ.

Assam AN-32 crash CCTV footage has surfaced online
ಅಸ್ಸಾಂನಲ್ಲಿ AN-32 ಸಾರಿಗೆ ವಿಮಾನ ಪತನ: ಐವರು IAF ಸಿಬ್ಬಂದಿ ಸಾವು; ತನಿಖೆಗೆ ಆದೇಶ

ಅಂತಿಮ ಕ್ಷಣದಲ್ಲಿ ಆಗಿದ್ದೇನು?

ಅಂಟೋನೋವ್ AN-32 ವಿಮಾನವು ನಿಯಮಿತ ತರಬೇತಿ/ಕಾರ್ಯಾಚರಣಾ ಹಾರಾಟದಲ್ಲಿತ್ತು. ಅಸ್ಸಾಂನ ಜೋರ್ಹತ್ ವಾಯುನೆಲೆಯಲ್ಲಿ ಇಳಿಯುವ ವೇಳೆ ವಿಮಾನವು ರನ್ ವೇ ಮೇಲೆ ಇಳಿಯಿತಾದರೂ ಅಂತಿಮ ಕ್ಷಣದಲ್ಲಿ ನಿಯಂತ್ರಣ ತಪ್ಪಿ ರನ್‌ವೇಯಿಂದ ಹೊರ ಹೋಗಿತ್ತು.

ನಂತರ ಅದು ಟ್ಯಾಕ್ಸಿವೇ ದಾಟಿ, ಹಳ್ಳಕ್ಕೆ ಇಳಿದು ಅದರ ಮೂತಿ ನೆಲಕ್ಕೆ ಅಪ್ಪಳಿಸಿತು. ಈ ವೇಳೆ ವಿಮಾನ ಹಲವು ಭಾಗಗಳಾಗಿ ಒಡೆದು ಬೆಂಕಿಗಾಹುತಿಯಾಯಿತು.

ಅಪಘಾತದ ವೇಳೆ ವಿಮಾನದಲ್ಲಿ ಒಟ್ಟು ಆರು ಸಿಬ್ಬಂದಿ ಇದ್ದರು. ಈ ದುರಂತದಲ್ಲಿ ಐವರು ಭಾರತೀಯ ವಾಯುಪಡೆ ಸಿಬ್ಬಂದಿ ಮೃತಪಟ್ಟರು, ಒಬ್ಬ ಸಹ-ಪೈಲಟ್ (Co-pilot) ಬದುಕುಳಿದು ಕಾರ್ಯಾಚರಣೆಯಲ್ಲಿ ರಕ್ಷಿಸಲ್ಪಟ್ಟರು.

ದುರಂತಕ್ಕೆ ಕಾರಣವೇನು?

ದುರಂತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ತನಿಖೆ ನಡೆಸಲು ಭಾರತೀಯ ವಾಯುಪಡೆಯು ಕೋರ್ಟ್ ಆಫ್ ಇಂಕ್ವೈರಿ (Court of Inquiry)ಗೆ ಆದೇಶಿಸಿದೆ. ತಾಂತ್ರಿಕ ದೋಷ, ರನ್‌ವೇ ಸಮಸ್ಯೆ, ಮಾನವೀಯ ತಪ್ಪು ಅಥವಾ ಇತರ ಕಾರಣಗಳಿಂದ ದುರಂತ ಸಂಭವಿಸಿರಬಹುದೇ ಎಂಬುದನ್ನು ತನಿಖೆ ಪರಿಶೀಲಿಸುತ್ತಿದೆ. ಇದುವರೆಗೆ ಯಾವುದೇ ಅಂತಿಮ ವರದಿ ಪ್ರಕಟವಾಗಿಲ್ಲ.

ಮೃತಪಟ್ಟ ಸಿಬ್ಬಂದಿ

ಈ ದುರಂತದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲಿಂಟ್ ಲೆಫ್ಟಿನೆಂಟ್ ಶುಭಮ್ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ ವಾಯು ಖೇಮಾರಾಮ್ ಕುಮಾವತ್ ಮತ್ತು ಅಗ್ನಿವೀರ್ ವಾಯು ಡ್ಯಾನಿಶ್ ಆಲಂ ಸಾವನ್ನಪ್ಪಿದ್ದಾರೆ.

ಅಂದಹಾಗೆ AN-32 ಸೋವಿಯತ್ ವಿನ್ಯಾಸದ ಅವಳಿ-ಎಂಜಿನ್ ಮಿಲಿಟರಿ ಸಾರಿಗೆ ವಿಮಾನವಾಗಿದ್ದು, ಇದನ್ನು ಭಾರತೀಯ ವಾಯುಪಡೆಯು ಎತ್ತರದ ಮತ್ತು ದೂರದ ಪ್ರದೇಶಗಳು ಸೇರಿದಂತೆ ವೈವಿಧ್ಯಮಯ ಭೂಪ್ರದೇಶಗಳಲ್ಲಿ ಲಾಜಿಸ್ಟಿಕ್ಸ್, ಸರಕು ಸಾಗಣೆ ಮತ್ತು ಕಾರ್ಯಾಚರಣೆಯ ಬೆಂಬಲಕ್ಕೆ ವ್ಯಾಪಕವಾಗಿ ಬಳಸಲಾಗುತ್ತದೆ.

ಮೊದಲಿಗೆ ಈ ವಿಮಾನವನ್ನು 1980ರ ದಶಕದಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು. ಸೈನಿಕರು, ಆಹಾರ ಸಾಮಗ್ರಿಗಳು ಮತ್ತು ಉಪಕರಣಗಳನ್ನು ದೂರದ ಹಾಗೂ ಎತ್ತರದ ಪ್ರದೇಶಗಳಿಗೆ ಸಾಗಿಸಲು ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ವಿಮಾನಗಳ ಆಧುನೀಕರಣ ನಡೆದಿದ್ದರೂ, ಈ ವಿಮಾನಗಳ ವಯಸ್ಸು ಈಗ 40 ವರ್ಷಕ್ಕಿಂತ ಹೆಚ್ಚಾಗಿದೆ. ಈ ದುರಂತದ ಬಳಿಕ AN-32 ವಿಮಾನಗಳ ಸುರಕ್ಷತೆ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿವೆ.

Assam AN-32 crash CCTV footage has surfaced online
ಅಸ್ಸಾಂ: ಜೋರ್ಹಾಟ್ ವಾಯುನೆಲೆಯಲ್ಲಿ AN-32 ಸಾರಿಗೆ ವಿಮಾನ ಪತನ; ಬೆಂಕಿಗಾಹುತಿ; Video

ಇದೇ ಮೊದಲೇನಲ್ಲ

ಜೋರ್ಹಾತ್ ನಲ್ಲಿ ಸಂಭವಿಸಿದ ದುರಂತ ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಇದೇ ಎಎನ್ 32 ಸರಣಿಯ ವಿಮಾನಗಳು ಅಪಘಾತಕ್ಕೀಡಾಗಿವೆ. 2019ರಲ್ಲಿ Antonov An-32 ವಿಮಾನವು ಇದೇ ಜೋರ್ಹತ್ ನಿಂದ ಅರುಣಾಚಲ ಪ್ರದೇಶದ ಮೆಚುಕಾಕ್ಕೆ ತೆರಳುವ ವೇಳೆ ನಾಪತ್ತೆಯಾಗಿತ್ತು. ಬಳಿಕ ಅದು ಪರ್ವತ ಪ್ರದೇಶದಲ್ಲಿ ಪತನಗೊಂಡು ವಿಮಾನದಲ್ಲಿದ್ದ ಎಲ್ಲಾ 13 ಮಂದಿ ಮೃತಪಟ್ಟಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com