RSS ನೋಂದಣಿ ಮಾಡಿಸಿ ಎಂಬ ಖರ್ಗೆ ಆಗ್ರಹಕ್ಕೆ ಮೋಹನ್ ಭಾಗ್ವತ್ ಪ್ರತಿಕ್ರಿಯೆ: ಇಲ್ಲಿದೆ ವಿವರ...

ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳು ರಹಸ್ಯವಾಗಿವೆ, ಹೀಗಾಗಿ ಆ ಸಂಸ್ಥೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಇತ್ತೀಚೆಗೆ ಹೇಳಿದ್ದರು.
Mohan Bhagwat (file photo)
ಮೋಹನ್ ಭಾಗ್ವತ್online desk
Updated on

ತ್ರಿಶೂರ್: ಆರ್ ಎಸ್ಎಸ್ ಸಂಘಟನೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂಬ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹದ ಬಗ್ಗೆ ಸರಸಂಘಚಾಲಕ ಮೋಹನ್ ಭಾಗ್ವತ್ ಪ್ರತಿಕ್ರಿಯೆ ನೀಡಿದ್ದಾರೆ.

ಕೇರಳದ ತ್ರಿಶೂರಿನಲ್ಲಿ ಕರ್ನಾಟಕ ಸರ್ಕಾರದ ಆಗ್ರಹದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಮೋಹನ್ ಭಾಗ್ವತ್, ಕರ್ನಾಟಕ ಸರ್ಕಾರದ ಆಗ್ರಹ ಒಂದು ಗಿಮಿಕ್, ಇದರಲ್ಲಿ ಕೇವಲ ರಾಜಕೀಯವಷ್ಟೇ ಇದೆ. ಆರ್ ಎಸ್ಎಸ್ ನಲ್ಲಿ ಯಾವುದೂ ರಹಸ್ಯವಾಗಿಲ್ಲ, ನಾವು ಬಹಿರಂಗವಾಗಿ ಎಲ್ಲರಿಗೂ ಆರ್ ಎಸ್ ಎಸ್ ಬಗ್ಗೆ ತಿಳಿಸುತ್ತಿದ್ದೇವೆ. ಬಯಲಿನಲ್ಲಿ ಕೆಲಸ ಮಾಡುತ್ತೇವೆ, ಬಹಳಷ್ಟು ಸಂಗತಿಗಳು ನೋಂದಣಿಯಾಗಿಲ್ಲ ಹಿಂದೂ ಧರ್ಮ ನೋಂದಣಿಯಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳು ರಹಸ್ಯವಾಗಿವೆ, ಹೀಗಾಗಿ ಆ ಸಂಸ್ಥೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಇತ್ತೀಚೆಗೆ ಹೇಳಿದ್ದರು.

"ನಾವು ಯಾವುದೇ ರಹಸ್ಯ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ನಮ್ಮ ಶಾಖೆಗಳು ಮತ್ತು ಕಾರ್ಯಕ್ರಮಗಳು ತೆರೆದ ಮೈದಾನಗಳಲ್ಲಿ ನಡೆಯುತ್ತವೆ. ಜನರನ್ನು ಕರೆದು ಸಂಘದ ಬಗ್ಗೆ ಅವರಿಗೆ ಮುಕ್ತವಾಗಿ ತಿಳಿಸುತ್ತೇವೆ. ನಮ್ಮ ಕಾರ್ಯಕರ್ತರು ಪ್ರತಿದಿನ ಜನರ ನಡುವೆ ಇರುತ್ತಾರೆ, ಜನರು ನಮ್ಮನ್ನು ದಿನನಿತ್ಯ ನೋಡುತ್ತಾರೆ. ಹೀಗಿರುವಾಗ ನಾವು ರಹಸ್ಯವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ಸುಳ್ಳು " ಎಂದಿದ್ದಾರೆ.

Mohan Bhagwat (file photo)
RSS ನೋಂದಣಿ ಬಗ್ಗೆ ಮೋಹನ್ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಪತ್ರ: ಕಾನೂನು ಪಾಲನೆ ಕುರಿತು ಸ್ಪಷ್ಟನೆ ಕೇಳಿದ ಗೃಹ ಸಚಿವ!

ಇದು ಕೇವಲ ರಾಜಕೀಯ ಗಿಮಿಕ್

"ಕರ್ನಾಟಕ ಸರ್ಕಾರದ ಆಗ್ರಹಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ ನಾನು ಇದಕ್ಕೆ ಪ್ರತಿಕ್ರಿಯಿಸುವ ಅಗತ್ಯವೇ ಇಲ್ಲ. ಇದು ಕೇವಲ ರಾಜಕೀಯವಷ್ಟೇ. ಸಂಘದ ವಿರುದ್ಧ ಇಂತಹ ಗಿಮಿಕ್‌ಗಳನ್ನು ಮಾಡಲಾಗುತ್ತಿದೆ. ನಾವು ಇದಕ್ಕೆಲ್ಲಾ ಒಗ್ಗಿಕೊಂಡಿದ್ದೇವೆ. ನಮ್ಮ ಕೆಲಸಗಳಿಗೆ ಅಡ್ಡಿಪಡಿಸಲು ಮತ್ತು ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಅನುಮಾನ ಮೂಡಿಸಲು ಈ ರೀತಿ ಮಾಡಲಾಗುತ್ತಿದೆ, ಆದರೆ ಅದು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

"ಆರ್‌ಎಸ್‌ಎಸ್‌ ಬ್ರಿಟಿಷರ ಕಾಲದಲ್ಲೇ ಜನರ ಇಚ್ಛೆಯಿಂದ ಪ್ರಾರಂಭವಾದ ಸಂಸ್ಥೆ. 100 ವರ್ಷಗಳಿಂದ ಯಾರೂ ನಮಗೆ ರಿಜಿಸ್ಟರ್ ಮಾಡಿ ಎಂದು ಹೇಳಿಲ್ಲ. ನಮ್ಮದೇ ಆದ ಲಿಖಿತ ಸಂವಿಧಾನ ಇದೆ. ಅದನ್ನು 1950ರ ದಶಕದಲ್ಲೇ ನಾವು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಆಗ ಸರ್ಕಾರ ಮೊದಲು ರಿಜಿಸ್ಟರ್ ಮಾಡಿ ಆಮೇಲೆ ಸಂವಿಧಾನ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿರಲಿಲ್ಲ" ಎಂದಿದ್ದಾರೆ.

"ಸರ್ಕಾರಕ್ಕೆ ಆರ್‌ಎಸ್‌ಎಸ್‌ ಬಗ್ಗೆ ಗೊತ್ತಿಲ್ಲ ಎಂದೇನಿಲ್ಲ. ಈ ಹಿಂದೆ ನಮ್ಮ ಮೇಲೆ ಎರಡು ಬಾರಿ ನಿಷೇಧ ಹೇರಲಾಗಿತ್ತು. ನ್ಯಾಯಾಲಯದ ಆದೇಶ ಮತ್ತು ಸತ್ಯಾಗ್ರಹಗಳ ಮೂಲಕ ಆ ನಿಷೇಧವನ್ನು ವಾಪಸ್ ಪಡೆಯಲಾಯಿತು. ನಮ್ಮನ್ನು ಬ್ಯಾನ್ ಮಾಡಿದ್ದರು ಎಂದರೆ, ಆರ್‌ಎಸ್‌ಎಸ್‌ ಎಂಬ ಸಂಸ್ಥೆ ಇದೆ ಎಂದು ಸರ್ಕಾರವೇ ಗುರುತಿಸಿದೆ ಎಂದರ್ಥ " ಎಂದು ಭಾಗವತ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com