ಮರೆಯಾಯ್ತಾ ಮುಂಗಾರು?: ಜೂನ್ 4 ರಿಂದ 18ರವರೆಗೆ ಭಾರತದಲ್ಲಿ ಶೇ.41 ರಷ್ಟು ಮಳೆ ಕೊರತೆ!

ದಕ್ಷಿಣ ಮಹಾರಾಷ್ಟ್ರದ ಮೇಲೆ ನೈಋತ್ಯ ಮುಂಗಾರು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಜೂನ್ 4ರಿಂದ ಜೂನ್ 18ರವರೆಗೆ ದೇಶದಾದ್ಯಂತ ಶೇ.41ರಷ್ಟು ಮಳೆ ಕೊರತೆ ದಾಖಲಾಗಿದೆ.
rainfall deficit in India
ಭಾರತದಲ್ಲಿ ಮಳೆ ಕೊರತೆ
Updated on

ನವದೆಹಲಿ: ಭಾರತದಲ್ಲಿ ನೈರುತ್ಯ ಮುಂಗಾರು ಮಾರುತಗಳು ದುರ್ಬಲಗೊಂಡಿದ್ದು, ಶೇ.41 ಮಳೆ ಕೊರತೆಯಾಗಿದೆ ಎಂದು ಹೇಳಲಾಗಿದೆ.

ದಕ್ಷಿಣ ಮಹಾರಾಷ್ಟ್ರದ ಮೇಲೆ ನೈಋತ್ಯ ಮುಂಗಾರು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಜೂನ್ 4ರಿಂದ ಜೂನ್ 18ರವರೆಗೆ ದೇಶದಾದ್ಯಂತ ಶೇ.41ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ.

ಈ ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯವಾಗಿ ಸುರಿಯಬೇಕಿದ್ದ 72.2 ಮಿ.ಮೀ. ಮಳೆಯ ಬದಲಾಗಿ ಕೇವಲ 42.6 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ.

ಹವಾಮಾನ ಇಲಾಖೆಯ ಪ್ರದೇಶವಾರು ಮಳೆ ವ್ಯತ್ಯಾಸ ನಕ್ಷೆಯ ಪ್ರಕಾರ, ಮಧ್ಯ ಭಾರತದಲ್ಲಿ ಶೇ.67, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ.42, ದಕ್ಷಿಣ ಪರ್ಯಾಯ ದ್ವೀಪ ಪ್ರದೇಶದಲ್ಲಿ ಶೇ.22 ಹಾಗೂ ವಾಯವ್ಯ ಭಾರತದಲ್ಲಿ ಶೇ.6ರಷ್ಟು ಮಳೆ ಕೊರತೆ ಕಂಡುಬಂದಿದೆ.

rainfall deficit in India
ಜೂನ್ ತಿಂಗಳ ಮೊದಲಾರ್ಧ ಕಡಿಮೆ ಮಳೆ: ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರಿನ ಹಂಚಿಕೆಯಲ್ಲಿ ಶೇ. 60ರಷ್ಟು ಕೊರತೆ

ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಉಳಿದ ಭಾಗಗಳಿಗೆ ನೈಋತ್ಯ ಮುಂಗಾರು ಮುಂದುವರಿಯಲು ಸಾಧ್ಯವಾಗದಿರುವುದಕ್ಕೆ "ಅನುಕೂಲಕರವಾದ ದೊಡ್ಡ ಪ್ರಮಾಣದ ಹವಾಮಾನ ಪರಿಸ್ಥಿತಿಗಳ ಕೊರತೆ" ಪ್ರಮುಖ ಕಾರಣವಾಗಿದೆ ಎಂದು ಗುರುವಾರ ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಉತ್ತರದತ್ತ ಸಾಗುವ ಪ್ರಕ್ರಿಯೆ ನಿಧಾನಗೊಳ್ಳಲು ಐದು ಪ್ರಮುಖ ಕಾರಣಗಳಿದ್ದು, ಮೊದಲನೆಯದಾಗಿ, ಪ್ರಸ್ತುತ ಮುಂಗಾರು ಪ್ರವಾಹಕ್ಕೆ ಅರಬ್ಬೀ ಸಮುದ್ರದಿಂದ ಬಲವಾದ ತೇವಾಂಶಭರಿತ ಗಾಳಿಯ ಅಲೆ (ಸರ್ಜ್) ಲಭ್ಯವಾಗುತ್ತಿಲ್ಲ ಎಂದು ಐಎಂಡಿ ತಿಳಿಸಿದೆ.

"ಇಂತಹ ಬಲವಾದ ಗಾಳಿಯ ಅಲೆಗಳು ಸಾಮಾನ್ಯವಾಗಿ ಹೆಚ್ಚಿನ ತೇವಾಂಶವನ್ನು ಒಳನಾಡಿನತ್ತ ತಂದು, ವ್ಯಾಪಕ ಮಳೆಯಾಗಲು ಕಾರಣವಾಗುತ್ತವೆ. ಇದರಿಂದ ಮುಂಗಾರು ಮತ್ತಷ್ಟು ಪ್ರದೇಶಗಳಿಗೆ ಮುನ್ನಡೆಯಲು ಸಹಕಾರಿಯಾಗುತ್ತದೆ" ಎಂದು ಹವಾಮಾನ ಇಲಾಖೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com