16 ಸ್ಥಿರ-ಡೋಸ್ ಔಷಧ ಸಂಯೋಜನೆಗಳಿಗೆ ಕೇಂದ್ರ ಸರ್ಕಾರ ನಿಷೇಧ

ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದು, ಔಷಧಿಗಳ ವಿವೇಚನಾತ್ಮಕ ಬಳಕೆಯನ್ನು ಉತ್ತೇಜಿಸುವುದು ಹಾಗೂ ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟ ಪರಿಣಾಮಕಾರಿ ಔಷಧಿಗಳಷ್ಟೇ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು ಈ ಕ್ರಮದ ಉದ್ದೇಶವಾಗಿದೆ
Centre bans 16 fixed-dose drug combinations
ಸ್ಥಿರ-ಡೋಸ್ ಔಷಧ ಸಂಯೋಜನೆಗಳಿಗೆ ಕೇಂದ್ರ ಸರ್ಕಾರ ನಿಷೇಧ (ಸಂಗ್ರಹ ಚಿತ್ರ)
Updated on

ನವದೆಹಲಿ: ಚಿಕಿತ್ಸಾ ದೃಷ್ಟಿಯಿಂದ ಸಮರ್ಥನೆ ಇಲ್ಲದ ಹಾಗೂ ಅವುಗಳ ಬಳಕೆಯಿಂದಾಗುವ ಅಪಾಯಗಳಿಗೆ ಹೋಲಿಸಿದರೆ ಯಾವುದೇ ಗಮನಾರ್ಹ ಪ್ರಯೋಜನಗಳಿಲ್ಲ ಎಂಬ ಕಾರಣ ನೀಡಿ, ಕೇಂದ್ರ ಸರ್ಕಾರ 16 ಸ್ಥಿರ-ಡೋಸ್ ಸಂಯೋಜನೆ (Fixed-Dose Combination - FDC) ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿದೆ.

ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದು, ಔಷಧಿಗಳ ವಿವೇಚನಾತ್ಮಕ ಬಳಕೆಯನ್ನು ಉತ್ತೇಜಿಸುವುದು ಹಾಗೂ ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟ ಪರಿಣಾಮಕಾರಿ ಔಷಧಿಗಳಷ್ಟೇ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ನಿರ್ಧಾರವು, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಎಫ್‌ಡಿಸಿ ಔಷಧಿಗಳ ಪರಿಶೀಲನೆ ನಡೆಸಿದ ಬಳಿಕ ಕೈಗೊಳ್ಳಲಾಗಿದೆ. ವಿವಿಧ ಔಷಧ ಸಂಯೋಜನೆಗಳನ್ನು ಪರಿಶೀಲಿಸಿ, ಅವುಗಳಲ್ಲಿ ವೈಜ್ಞಾನಿಕ ಆಧಾರವಿಲ್ಲದ, ಚಿಕಿತ್ಸಾತ್ಮಕವಾಗಿ ಸಮರ್ಥಿಸಲಾಗದ ಅಥವಾ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಸಂಯೋಜನೆಗಳನ್ನು ಗುರುತಿಸಲು ಔಷಧ ತಾಂತ್ರಿಕ ಸಲಹಾ ಮಂಡಳಿ (DTAB) ತಜ್ಞರ ಸಮಿತಿಯನ್ನು ರಚಿಸಿತ್ತು.

Centre bans 16 fixed-dose drug combinations
ಹಸಿವಿಗೆಲ್ಲಿಂದ ಬಂತು ಜಾತಿ? ಪಡಿತರಕ್ಕೆ ʼಜಾತಿʼಲಿಂಕ್‌; ರಾಜ್ಯ ಸರ್ಕಾರದಿಂದ ಸ್ಪಷ್ಪನೆ ಕೇಳಿದ ಕೇಂದ್ರ!

ಏನಿದು ಸ್ಥಿರ-ಡೋಸ್ ಔಷಧ ಸಂಯೋಜನೆ?

ಸ್ಥಿರ-ಡೋಸ್ ಸಂಯೋಜನೆ (ಎಫ್‌ಡಿಸಿ) ಔಷಧಿಗಳು ಎಂದರೆ, ಎರಡು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ ಔಷಧೀಯ ಘಟಕಗಳನ್ನು (Active Pharmaceutical Ingredients - APIs) ನಿಗದಿತ ಪ್ರಮಾಣದಲ್ಲಿ ಸಂಯೋಜಿಸಿ ತಯಾರಿಸಲಾದ ಔಷಧಿಗಳಾಗಿವೆ.

"ಗುರುತಿಸಲಾದ ಈ 16 ಎಫ್‌ಡಿಸಿ ಔಷಧಿಗಳ ಮಾನವ ಬಳಕೆಗೆ ಸಂಬಂಧಿಸಿದ ತಯಾರಿಕೆ, ಮಾರಾಟ, ವಿತರಣೆ ಮತ್ತು ಪೂರೈಕೆಯನ್ನು ದೇಶಾದ್ಯಂತ ತಕ್ಷಣದಿಂದಲೇ ನಿಷೇಧಿಸಲಾಗಿದೆ" ಎಂದು ಸಚಿವಾಲಯ ತಿಳಿಸಿದೆ. ಈ ಔಷಧ ಸಂಯೋಜನೆಗಳಿಗೆ "ಚಿಕಿತ್ಸಾತ್ಮಕ ಸಮರ್ಥನೆ ಇಲ್ಲ" ಹಾಗೂ ಅವುಗಳ ಬಳಕೆಯಿಂದ ಉಂಟಾಗಬಹುದಾದ ಅಪಾಯಗಳಿಗೆ ಹೋಲಿಸಿದರೆ ಅವುಗಳಿಂದ ಯಾವುದೇ ಗಮನಾರ್ಹ ಪ್ರಯೋಜನವಿಲ್ಲ ಎಂದು ಸಚಿವಾಲಯ ಹೇಳಿದೆ.

ನಿಷೇಧಿಸಲಾದ ಔಷಧಿಗಳು ಚರ್ಮರೋಗ ಚಿಕಿತ್ಸೆಗೆ ಬಳಸುವ ಕೆಲವು ಸಿದ್ಧತೆಗಳು, ನೋವು ನಿವಾರಕ (Analgesic), ಸ್ನಾಯು ಸೆಳೆತ ನಿವಾರಕ (Antispasmodic) ಹಾಗೂ ಪ್ರತಿಜೀವಕ (Antibiotic) ಆಧಾರಿತ ಸಂಯೋಜನೆಗಳನ್ನು ಒಳಗೊಂಡಿವೆ.

ನಿಷೇಧಿತ ಔಷಧ ಸಂಯೋಜನೆಗಳು

  • ಅಸೆಟೈಲ್ ಸ್ಯಾಲಿಸಿಲಿಕ್ ಆಸಿಡ್ (Acetyl Salicylic Acid) ಮತ್ತು ಇಥೋಹೆಪ್ಟಾಜಿನ್ (Ethoheptazine)

  • ಡೈಸೈಕ್ಲೋಮಿನ್ (Dicyclomine), ಪ್ಯಾರಾಸಿಟಮಾಲ್ (Paracetamol) ಮತ್ತು ಕ್ಲಿಡಿನಿಯಂ ಬ್ರೋಮೈಡ್ (Clidinium Bromide)

  • ಡೈಸೈಕ್ಲೋಮಿನ್, ಪ್ಯಾರಾಸಿಟಮಾಲ್, ಕ್ಲಿಡಿನಿಯಂ ಬ್ರೋಮೈಡ್ ಹಾಗೂ ಕ್ಲೋರ್ಡಿಯಾಜೆಪಾಕ್ಸೈಡ್ (Chlordiazepoxide)

  • ಗ್ಲಿಕ್ಲಾಜೈಡ್ (Gliclazide) ಮತ್ತು ಕ್ರೋಮಿಯಂ ಪಿಕೋಲಿನೇಟ್ (Chromium Picolinate)

  • ಪ್ಯಾರಾಸಿಟಮಾಲ್ ಮತ್ತು ಲಿಗ್ನೋಕೇನ್ (Lignocaine)

ಪ್ರತಿಜೀವಕ (ಆ್ಯಂಟಿಬಯಾಟಿಕ್) ಆಧಾರಿತ ಹಲವು ಸಂಯೋಜನೆಗಳನ್ನೂ ನಿಷೇಧಿಸಲಾಗಿದೆ.

  • ಅಮೋಕ್ಸಿಸಿಲಿನ್ (Amoxicillin) ಮತ್ತು ಸೆರಾಟಿಯೋಪೆಪ್ಟಿಡೇಸ್ (Serratiopeptidase)

  • ಅಮೋಕ್ಸಿಸಿಲಿನ್, ಸೆರಾಟಿಯೋಪೆಪ್ಟಿಡೇಸ್ ಹಾಗೂ ಲ್ಯಾಕ್ಟೋಬ್ಯಾಸಿಲಸ್ ಸ್ಪೊರೋಜಿನ್ಸ್ (Lactobacillus Sporogenes)

  • ಅಮೋಕ್ಸಿಸಿಲಿನ್, ಕ್ಲೋಕ್ಸಾಸಿಲಿನ್ (Cloxacillin), ಲ್ಯಾಕ್ಟಿಕ್ ಆಸಿಡ್ ಬ್ಯಾಸಿಲಸ್ ಹಾಗೂ ಸೆರಾಟಿಯೋಪೆಪ್ಟಿಡೇಸ್

  • ಸೆಫಾಡ್ರೋಕ್ಸಿಲ್ (Cefadroxyl) ಮತ್ತು ಪ್ರೊಬೆನೆಸಿಡ್ (Probenecid)

  • ಸೆಫ್ಯೂರೋಕ್ಸೈಮ್ (Cefuroxime) ಮತ್ತು ಸೆರಾಟಿಯೋಪೆಪ್ಟಿಡೇಸ್

Centre bans 16 fixed-dose drug combinations
Tamil Nadu: ಕಲ್ಯಾಣ ಮಂಟಪಗಳು, ವಾಣಿಜ್ಯ ಸಂಕೀರ್ಣಗಳಿಗೆ ದೇವಾಲಯ ನಿಧಿ ಬಳಕೆಗೆ ಬ್ರೇಕ್! ವಿಜಯ್ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ, DMK ಕಿಡಿ!

ಇದಲ್ಲದೆ, ಅಲೋವೆರಾ ಅಥವಾ ಅಲೋ ಸಾರವನ್ನು ವಿಟಮಿನ್ ಇ, ಜೊಜೋಬಾ ಎಣ್ಣೆ, ಕಿತ್ತಳೆ ಎಣ್ಣೆ, ಗೋಧಿ ಕಾಳಿನ ಎಣ್ಣೆ, ಟೀ ಟ್ರೀ ಎಣ್ಣೆ, ಅಲ್ಯಾಂಟೊಯಿನ್ ಮತ್ತು ಡಿ-ಪ್ಯಾಂಥೆನಾಲ್ ಮೊದಲಾದ ಪದಾರ್ಥಗಳೊಂದಿಗೆ ಸಂಯೋಜಿಸಿ ತಯಾರಿಸಲಾದ ಕೆಲವು ಚರ್ಮ ಮತ್ತು ತ್ವಚೆ ಆರೈಕೆ ಉತ್ಪನ್ನಗಳನ್ನೂ ನಿಷೇಧಿತ ಪಟ್ಟಿಯಲ್ಲಿ ಸೇರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com