CUET UG 2026: BJP ಶಾಸಕ ಕೈಲಾಶ್ ಗೆಹ್ಲೋಟ್ ಪುತ್ರಿ ದೇಶಕ್ಕೆ ಟಾಪರ್; ಸಾಧನೆ ಬಗ್ಗೆ ದೇವಿನಾ ಹೇಳಿದ್ದೇನು?

"ನಾನು ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದೇನೆ ಎಂದು ನಂಬಲು ಸಾಧ್ಯವಾಗದ ಕಾರಣ ನನ್ನ ಅರ್ಜಿ ಸಂಖ್ಯೆಯನ್ನು ಮತ್ತೆ ಮತ್ತೆ ಪರಿಶೀಲಿಸುತ್ತಲೇ ಇದ್ದೆ"
BJP leader’s daughter Devina Gehlot bags AIR 1
ದೇವಿನಾ
Updated on

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಮಂಗಳವಾರ CUET UG 2026ರ ಫಲಿತಾಂಶ ಪ್ರಕಟಸಿದ್ದು, ಬಿಜೆಪಿ ನಾಯಕ ಮತ್ತು ದೆಹಲಿ ಮಾಜಿ ಸಚಿವ ಕೈಲಾಶ್ ಗೆಹ್ಲೋಟ್ ಅವರ ಪುತ್ರಿ ದೇವಿನಾ ಗೆಹ್ಲೋಟ್ ಅವರು ಅಖಿಲ ಭಾರತ ಮಟ್ಟದಲ್ಲಿ(AIR) ಮೊದಲ ರ್ಯಾಂಕ್ ಪಡೆದಿದ್ದಾರೆ.

ದೇವಿನಾ ಗೆಹ್ಲೋಟ್​ ಅವರು​ ಒಟ್ಟು 1250 ಅಂಕಗಳಲ್ಲಿ 1232.19 ಅಂಕಗಳನ್ನು ಪಡೆದು ದೇಶಕ್ಕೆ ಟಾಪರ್ ಆಗಿದ್ದಾರೆ. ದೇವಿನಾ ಗೆಹ್ಲೋಟ್ ದೆಹಲಿಯ ಮಾಜಿ ಸಚಿವ ಮತ್ತು ಪ್ರಸ್ತುತ ಬಿಜೆಪಿ ಶಾಸಕ ಕೈಲಾಶ್ ಗೆಹ್ಲೋಟ್ ಅವರ ಪುತ್ರಿಯಾಗಿದ್ದಾರೆ.

ಡಿಪಿಎಸ್ ವಸಂತ್ ಕುಂಜ್‌ ಶಾಲೆಯ ವಿದ್ಯಾರ್ಥಿನಿಯಾಗಿರುವ ದೇವಿನಾ ಅವರು, ಇಡೀ ದೇಶಕ್ಕೆ ತಾನು ಟಾಪರ್ ಆಗಿರುವುದು ಕಂಡು ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ.

BJP leader’s daughter Devina Gehlot bags AIR 1
SSLC ಫಲಿತಾಂಶ ಪ್ರಕಟ: ಬಸ್ ಕಂಡಕ್ಟರ್ ಪುತ್ರ ರಾಜ್ಯಕ್ಕೆ ಟಾಪರ್; ತನ್ನ ಸಾಧನೆ ಬಗ್ಗೆ ಪ್ರೀತಮ್ ಹೇಳಿದ್ದೇನು?

"ನಾನು ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದೇನೆ ಎಂದು ನಂಬಲು ಸಾಧ್ಯವಾಗದ ಕಾರಣ ನನ್ನ ಅರ್ಜಿ ಸಂಖ್ಯೆಯನ್ನು ಮತ್ತೆ ಮತ್ತೆ ಪರಿಶೀಲಿಸುತ್ತಲೇ ಇದ್ದೆ" ಎಂದು ದೇವಿನಾ ತಮ್ಮ ಫಲಿತಾಂಶವನ್ನು ನೋಡಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ಫಲಿತಾಂಶ ಪ್ರಕಟವಾದ ಬಳಿಕ ಮಾತನಾಡಿದ ಅವರು, ಉತ್ತಮ ಸಾಧನೆ ಮಾಡುವ ವಿಶ್ವಾಸವಿದ್ದರೂ ದೇಶದಲ್ಲೇ ಮೊದಲ ಸ್ಥಾನ ಪಡೆಯುವ ನಿರೀಕ್ಷೆ ಇರಲಿಲ್ಲ ಎಂದು ಹೇಳಿದ್ದಾರೆ.

ಹಲವು ಗಂಟೆಗಳ ಕಾಲ ಅಧ್ಯಯನ ಮಾಡುವುದಕ್ಕಿಂತ ಶಿಸ್ತು, ಸ್ಥಿರತೆ ಮತ್ತು ಪುನರಾವರ್ತನೆ ತಮ್ಮ ಯಶಸ್ಸಿಗೆ ಕಾರಣ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೂನ್ 23 ರಂದು CUET UG 2026 ಫಲಿತಾಂಶ ಪ್ರಕಟಿಸಿದೆ ಮತ್ತು ಅಧಿಕೃತ ಪೋಸ್ಟ್‌ನಲ್ಲಿ ಟಾಪರ್‌ಗಳ ಹೆಸರುಗಳನ್ನು ಸಹ ಹಂಚಿಕೊಂಡು, ಅಭಿನಂದನೆ ಸಲ್ಲಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com