'ಮೌನದ ಏಕೈಕ ಧ್ವನಿ’: ಗಾಜಾ ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿ ಸೋನಿಯಾ ಗಾಂಧಿ ಬರೆದ ಲೇಖನಕ್ಕೆ ಬಿಜೆಪಿ ಟೀಕೆ

ಜನರನ್ನು ದಾರಿತಪ್ಪಿಸಲು ಹಾಗೂ ವಿದೇಶಾಂಗ ನೀತಿಗಿಂತ ಮತಬ್ಯಾಂಕ್ ರಾಜಕಾರಣಕ್ಕೆ ಆದ್ಯತೆ ನೀಡಲು ಸೋನಿಯಾ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
Sonia Gandhi
ಸೋನಿಯಾ ಗಾಂಧಿ
Updated on

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಗಾಜಾ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದ್ದಾರೆ. ಪತ್ರಿಕೆಯೊಂದರಲ್ಲಿ ಪ್ರಕಟವಾದ ತಮ್ಮ ಅಭಿಪ್ರಾಯ ಲೇಖನದಲ್ಲಿ, ಭಾರತವು ಪ್ಯಾಲೆಸ್ತೀನ್ ಜನರ ಹಕ್ಕುಗಳ ಕುರಿತ ತನ್ನ ಐತಿಹಾಸಿಕ ನಿಲುವಿಗಿಂತ ಇಸ್ರೇಲ್‌ನೊಂದಿಗೆ ನಿಕಟ ಸಂಬಂಧಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಜೊತೆಗೆ, ಗಾಜಾ ಕುರಿತ ಭಾರತದ ನೀತಿಯನ್ನು ದೇಶದ ವಿಶಾಲ ವಿದೇಶಾಂಗ ನೀತಿಯ ಚಿಂತನೆಗಳೊಂದಿಗೆ ಅವರು ಜೋಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಜನರನ್ನು ದಾರಿತಪ್ಪಿಸಲು ಹಾಗೂ ವಿದೇಶಾಂಗ ನೀತಿಗಿಂತ ಮತಬ್ಯಾಂಕ್ ರಾಜಕಾರಣಕ್ಕೆ ಆದ್ಯತೆ ನೀಡಲು ಸೋನಿಯಾ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.

2023ರಲ್ಲಿ ಹಮಾಸ್ ನಡೆಸಿದ ಮಾರಕ ದಾಳಿಯಲ್ಲಿ ಇಸ್ರೇಲ್ ಗಡಿಭಾಗದ ಪಟ್ಟಣಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟ ಬಳಿಕ, ಇಸ್ರೇಲ್ ಹಲವು ವರ್ಷಗಳಿಂದ ಗಾಜಾದಲ್ಲಿ ನಡೆಸಿದ ಭೂದಾಳಿಗಳ ಪರಿಣಾಮವಾಗಿ ಆ ಪ್ರದೇಶ ಬಹುತೇಕ ಅವಶೇಷಗಳಾಗಿ ಮಾರ್ಪಟ್ಟಿದೆ.

Sonia Gandhi
ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ: ಇರಾನ್ ಕ್ಷಿಪಣಿ ದಾಳಿ, ಗಾಜಾ ಗಡಿದ್ವಾರ ಬಂದ್; 'ಪ್ರತಿದಾಳಿ ಬೇಡ'- ನೆತನ್ಯಾಹುಗೆ ಟ್ರಂಪ್ ಖಡಕ್ ಸಂದೇಶ

'ಮೌನದ ಏಕೈಕ ಧ್ವನಿ'

ಸೋನಿಯಾ ಗಾಂಧಿ ತಮ್ಮ ಲೇಖನದಲ್ಲಿ, ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗದ ವರದಿಯನ್ನು ಉಲ್ಲೇಖಿಸಿದ್ದು, ಗಾಜಾದಲ್ಲಿ ಪ್ಯಾಲೆಸ್ತೀನಿಯರ ವಿರುದ್ಧ ಇಸ್ರೇಲ್ ನರಮೇಧ (Genocide) ಎಸಗಿದೆ ಎಂದು ವರದಿ ತೀರ್ಮಾನಿಸಿದೆ ಎಂದು ಹೇಳಿದ್ದಾರೆ.

ಈ ಸಂಘರ್ಷದಿಂದ ಉಂಟಾದ ಮಾನವೀಯ ದುರಂತವನ್ನೂ ಅವರು ಉಲ್ಲೇಖಿಸಿದ್ದು, 20,000ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟು, 44,000 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಸಾಕ್ಷ್ಯಾಧಾರಗಳು ಹಾಗೂ ಕಾನೂನು ಪ್ರಕ್ರಿಯೆಗಳು ಹೆಚ್ಚಾಗುತ್ತಿದ್ದರೂ, ಈ ಸಂಘರ್ಷವನ್ನು ತಡೆಯುವಲ್ಲಿ ಅಂತಾರಾಷ್ಟ್ರೀಯ ಸಮುದಾಯ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರವನ್ನು ಟೀಕಿಸಿದ ಅವರು, ಗಾಜಾದಲ್ಲಿನ ನಾಗರಿಕರ ಸಂಕಷ್ಟದ ವಿರುದ್ಧ ಸರ್ಕಾರ ಬಹುತೇಕ ಮೌನ ವಹಿಸಿದೆ ಮತ್ತು ತೀವ್ರವಾಗಿ ಧ್ವನಿ ಎತ್ತಿಲ್ಲ ಎಂದು ಆರೋಪಿಸಿದ್ದಾರೆ. ಭಾರತವು "ಮೌನದ ಏಕೈಕ ಧ್ವನಿ"ಯಾಗಿ ಉಳಿದಿದೆ ಎಂದು ಹೇಳಿರುವ ಅವರು, ಇದು ನೈತಿಕವಾಗಿ ಖಂಡನೀಯ ಮಾತ್ರವಲ್ಲ, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದಲೂ ಅರ್ಥವಾಗದ ಸಂಗತಿ ಎಂದು ಹೇಳಿದ್ದಾರೆ.

ಐತಿಹಾಸಿಕವಾಗಿ ಭಾರತವು ಪ್ಯಾಲೆಸ್ತೀನ್‌ನ ಮಿತ್ರ ರಾಷ್ಟ್ರವಾಗಿತ್ತು ಎಂದು ನೆನಪಿಸಿದ ಅವರು, ಆ ನಿಲುವಿನಿಂದ ದೂರ ಸರಿಯುವುದು ದೇಶದ ಜಾಗತಿಕ ಗೌರವಕ್ಕೆ ಧಕ್ಕೆ ಉಂಟುಮಾಡಬಹುದು ಎಂದು ಹೇಳಿದ್ದಾರೆ. ಈ ನಿರಂತರ ಮೌನವನ್ನು ನೈತಿಕವಾಗಿಯೂ ತಾರ್ಕಿಕವಾಗಿಯೂ ಸಮರ್ಥಿಸಲಾಗದು ಎಂದು ಅಭಿಪ್ರಾಯಪಟ್ಟ ಅವರು, ಪ್ಯಾಲೆಸ್ತೀನ್ ಜನರ ಹಕ್ಕುಗಳ ಪರವಾಗಿ ಸರ್ಕಾರ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.

'ವಿದೇಶಾಂಗ ನೀತಿಯಲ್ಲೂ ಮತಬ್ಯಾಂಕ್ ರಾಜಕಾರಣ'

ಸೋನಿಯಾ ಗಾಂಧಿಯವರ ಲೇಖನವನ್ನು ಟೀಕಿಸಿದ ಬಿಜೆಪಿ, ಕಾಂಗ್ರೆಸ್ ಪಕ್ಷವು ವಿದೇಶಾಂಗ ನೀತಿಯ ವಿಷಯದಲ್ಲಿಯೂ ಮತಬ್ಯಾಂಕ್ ರಾಜಕಾರಣ ಮಾಡುತ್ತದೆ ಎಂದು ಆರೋಪಿಸಿದೆ. ಗಾಜಾ ಮತ್ತು ಪ್ಯಾಲೆಸ್ತೀನ್ ವಿಚಾರದಲ್ಲಿ ಭಾರತ ತನ್ನ ನಿಲುವನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದು, ಮಾನವೀಯ ನೆರವನ್ನೂ ಒದಗಿಸಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ.

ಕದನ ವಿರಾಮಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿರ್ಣಯಗಳ ಮೇಲೆ ಭಾರತ ಮತ ಚಲಾಯಿಸುವ ಮೂಲಕ ತನ್ನ ನಿಲುವು ಸ್ಪಷ್ಟಪಡಿಸಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ಯಾಲೆಸ್ತೀನ್‌ನ ಅತ್ಯುನ್ನತ ನಾಗರಿಕ ಗೌರವವೂ ಲಭಿಸಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com