ಭಾರತದ 31 ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಜನರಲ್ ಧೀರಜ್ ಸೇಠ್!

ಏಪ್ರಿಲ್ 1 ರಂದು ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಅವರು ಪುಣೆ ಮೂಲದ ದಕ್ಷಿಣ ಕಮಾಂಡ್‌ನ ಮುಖ್ಯಸ್ಥರಾಗಿದ್ದರು. ಇದು ಕಳೆದ ವರ್ಷ ಆಪರೇಷನ್ ಸಿಂಧೂರ್ ಸಮಯದಲ್ಲಿ ಉನ್ನತ ಮಟ್ಟದ ಕಾರ್ಯಾಚರಣೆಯ ಸನ್ನದ್ಧತೆಯನ್ನು ಕಾಯ್ದುಕೊಂಡಿತ್ತು.
General Dhiraj Seth
ಜನರಲ್ ಧೀರಜ್ ಸೇಠ್
Updated on

ನವದೆಹಲಿ: ಭಾರತದ 31 ನೇ ಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್ ಮಂಗಳವಾರ ಅಧಿಕಾರ ವಹಿಸಿಕೊಂಡರು.

ಮಿಲಿಟರಿಯಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ ಜನರಲ್ ಉಪೇಂದ್ರ ದ್ವಿವೇದಿ ಅವರ ಸೇವಾವಧಿ ಇಂದು ಮುಕ್ತಾಯವಾಯಿತು. ಅವರ ಉತ್ತರಾಧಿಕಾರಿಯಾಗಿ ಜನರಲ್ ಧೀರಜ್ ಸೇಠ್ ಅಧಿಕಾರ ಸ್ವೀಕರಿಸಿದರು. ಹೆಚ್ಚಿನ ಸ್ವಾವಲಂಬನೆ, ಆಧುನಿಕ ತಂತ್ರಜ್ಞಾನ ಮತ್ತು ಯುದ್ಧ ಸನ್ನದ್ಧತೆಯ ಕಡೆಗೆ ಭಾರತೀಯ ಸಶಸ್ತ್ರ ಪಡೆ ಸಜ್ಜಾಗುತ್ತಿರುವಂತೆಯೇ

1.3 ಮಿಲಿಯನ್ ನ ಬಲಶಾಲಿ ಭಾರತೀಯ ಸೇನೆಯ ನಾಯಕತ್ವವನ್ನು ಅವರು ವಹಿಸಿಕೊಂಡಿದ್ದಾರೆ. ಭಾರತದ ಗಡಿಗಳಲ್ಲಿ ನಿರಂತರ ಅಪ್ರಚೋದಿತ ದಾಳಿಯಂತಹ ಸಂದರ್ಭಗಳಲ್ಲಿ ಅವರು ಸೇನೆಯ ಅತ್ಯುನ್ನತ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು,ಕಾರ್ಯಾಚರಣೆ ಮತ್ತು ಮುಂದೆ ಸಾಮರ್ಥ್ಯ ಅಭಿವೃದ್ಧಿಯತ್ತ ತಮ್ಮ ಗಮನ ಕೇಂದ್ರೀಕರಿಸಬೇಕಾಗಿದೆ.

ಖಡಕ್‍ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾದ ಜನರಲ್ ಸೇಠ್ ಅವರನ್ನು ಡಿಸೆಂಬರ್ 1986 ರಲ್ಲಿ ಆರ್ಮರ್ಡ್ ಕಾರ್ಪ್ಸ್‌ಗೆ ನಿಯೋಜಿಸಲಾಗಿತ್ತು. ಸೇನಾ ಮುಖ್ಯಸ್ಥರಾಗುವ ಮುನ್ನಾ ಅವರು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಜೈಪುರದಲ್ಲಿರುವ ಸೌತ್ ವೆಸ್ಟರ್ನ್ ಮತ್ತು ಸದರ್ನ್ ಕಮಾಂಡ್ ಎರಡನ್ನೂ ಮುನ್ನಡೆಸಿದರು. ಪಶ್ಚಿಮ ಮುಂಭಾಗದಲ್ಲಿ ಎರಡು ಕಾರ್ಯಾಚರಣೆಯ ಸೇನಾ ಕಮಾಂಡ್‌ಗಳಿಗೆ ಕಮಾಂಡ್ ಮಾಡಿದ ಕೆಲವೇ ಅಧಿಕಾರಿಗಳಲ್ಲಿ ಇವರು ಒಬ್ಬರಾಗಿದ್ದಾರೆ.

General Dhiraj Seth
ಜನರಲ್ ಉಪೇಂದ್ರ ದ್ವಿವೇದಿ ಸೇವಾವಧಿ ಮುಕ್ತಾಯ; ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ

ಸುಮಾರು 40 ವರ್ಷಗಳ ಮಿಲಿಟರಿ ವೃತ್ತಿಜೀವನದಲ್ಲಿ ಜನರಲ್ ಸೇಠ್, ವಿವಿಧ ಕಾರ್ಯಾಚರಣೆಯ ಪರಿಸರಗಳಲ್ಲಿ ಪ್ರತಿಯೊಂದು ಹಂತದಲ್ಲೂ ಕಮಾಂಡ್ ಹುದ್ದೆಯನ್ನು ಅಲಂಕರಿಸಿದ್ದಾರೆ. ಏಪ್ರಿಲ್ 1 ರಂದು ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಅವರು ಪುಣೆ ಮೂಲದ ದಕ್ಷಿಣ ಕಮಾಂಡ್‌ನ ಮುಖ್ಯಸ್ಥರಾಗಿದ್ದರು. ಇದು ಕಳೆದ ವರ್ಷ ಆಪರೇಷನ್ ಸಿಂಧೂರ್ ಸಮಯದಲ್ಲಿ ಉನ್ನತ ಮಟ್ಟದ ಕಾರ್ಯಾಚರಣೆಯ ಸನ್ನದ್ಧತೆಯನ್ನು ಕಾಯ್ದುಕೊಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com