ನಿಕಾಹ್‌ಗಾಗಿ ಮುಸ್ಲಿಂ ಆಗಿದ್ದ ಯುಪಿ ಯುವಕ 'ಘರ್ ವಾಪಸಿ': ಹನುಮಂತನಿಗೆ ಪೂಜೆ ಸಲ್ಲಿಸಿ, ತಾಯಿ ಕಾಲು ಮುಟ್ಟಿ ಕ್ಷಮೆ ಕೇಳಿದ ಆಯುಷ್, Video ವೈರಲ್

ಭಗವಾನ್ ಹನುಮಂತನ ಮೂರ್ತಿಗೆ ತಿಲಕ ಇಟ್ಟು, ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ತಮ್ಮ ನಿರ್ಧಾರದಿಂದ ಪೋಷಕರಿಗೆ ಮತ್ತು ಇಡೀ ಕುಟುಂಬಕ್ಕೆ ಆದ ನೋವಿಗೆ ಆಯುಷ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
Ayush Malik
ಆಯುಷ್ ಮಲಿಕ್
Updated on

ಶಾಮ್ಲಿ (ಉತ್ತರ ಪ್ರದೇಶ): ಪ್ರೇಮ ವಿವಾಹಕ್ಕಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಭಾರಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಯುವಕ ಆಯುಷ್ ಮಲಿಕ್, ಇದೀಗ ಮತ್ತೆ ಹಿಂದೂ ಧರ್ಮಕ್ಕೆ (ಘರ್ ವಾಪಸಿ) ಮರಳಿದ್ದಾರೆ.

ಮನೆಯಲ್ಲಿ ಕುಟುಂಬಸ್ಥರೊಂದಿಗೆ ಹಿಂದೂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಪೂಜೆ ಸಲ್ಲಿಸುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಆಯುಷ್ ಮಲಿಕ್ ತಮ್ಮ ಮನೆಯ ದೇವರ ಕೋಣೆಯಲ್ಲಿ ದೀಪ ಹಚ್ಚಿ, ಆರತಿ ಬೆಳಗುತ್ತಿರುವುದು ಕಂಡುಬಂದಿದೆ.

ಅಷ್ಟೇ ಅಲ್ಲದೆ, ಭಗವಾನ್ ಹನುಮಂತನ ಮೂರ್ತಿಗೆ ತಿಲಕ ಇಟ್ಟು, ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ತಮ್ಮ ನಿರ್ಧಾರದಿಂದ ಪೋಷಕರಿಗೆ ಮತ್ತು ಇಡೀ ಕುಟುಂಬಕ್ಕೆ ಆದ ನೋವಿಗೆ ಆಯುಷ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ತಾವು ಯಾವುದೇ ಒತ್ತಡವಿಲ್ಲದೆ, ಸಂಪೂರ್ಣ ಸ್ವಇಚ್ಛೆಯಿಂದ ಸನಾತನ ಧರ್ಮಕ್ಕೆ ಮರಳಿರುವುದಾಗಿ ತಿಳಿಸಿದ್ದಾರೆ.

ಶಾಮ್ಲಿಯ ಪ್ರಸಿದ್ಧ ಉದ್ಯಮಿ ದೇವ್‌ರಾಜ್ ಮಲಿಕ್ ಅವರ ಪುತ್ರ ಆಯುಷ್ ಮಲಿಕ್, ಕೆಲವು ವಾರಗಳ ಹಿಂದೆ ಚಾಂದ್ನಿ ಖುರೇಷಿ ಎಂಬ ಯುವತಿಯನ್ನು ವಿವಾಹವಾಗಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು.

Ayush Malik
'ದೇವಸ್ಥಾನಗಳಲ್ಲಿ ಅವಮಾನ ಅನುಭವಿಸಿದ್ದೆ': ತಮಿಳು ನಟ ಜೈ ಸಂಪತ್ ಇಸ್ಲಾಂಗೆ ಮತಾಂತರ!

ಮತಾಂತರದ ಬಳಿಕ ಅವರು ತಮ್ಮ ಹೆಸರನ್ನು 'ಮೊಹಮ್ಮದ್ ಅಲಿ' ಎಂದು ಬದಲಾಯಿಸಿಕೊಂಡು ನಿಕಾಹ್ ಮಾಡಿಕೊಂಡಿದ್ದರು. ಆಗ ಇದು ಸ್ವಯಂಪ್ರೇರಿತ ನಿರ್ಧಾರ ಎಂದು ಆಯುಷ್ ಹೇಳಿಕೊಂಡಿದ್ದರು.

ಆದರೆ, ಆಯುಷ್ ತಂದೆ ದೇವ್‌ರಾಜ್ ಮಲಿಕ್ ಅವರು ಪೊಲೀಸರಿಗೆ ದೂರು ನೀಡಿ, ತಮ್ಮ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಡೆಯಲು ಚಾಂದ್ನಿ ಮತ್ತು ಆಕೆಯ ಕುಟುಂಬದವರು ಮಗನ ಬ್ರೈನ್‌ವಾಶ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಉತ್ತರ ಪ್ರದೇಶ ಪೊಲೀಸರು, ರಾಜ್ಯದ ಕಟ್ಟುನಿಟ್ಟಿನ 'ಮತಾಂತರ ವಿರೋಧಿ ಕಾಯ್ದೆ'ಯಡಿ ದೂರಿನಲ್ಲಿ ಹೆಸರಿಸಲಾದ ಮೂವರು ಸೇರಿದಂತೆ ಒಟ್ಟು 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ಈವರೆಗೆ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದೀಗ ಆಯುಷ್ ಮಲಿಕ್ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಈ ವಿಡಿಯೊ ನಿಜವೇ ಅಥವಾ ಇಲ್ಲವೇ ಎಂಬುದು ಇನ್ನೂ ದೃಢವಾಗಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com