'ದೇವಸ್ಥಾನಗಳಲ್ಲಿ ಅವಮಾನ ಅನುಭವಿಸಿದ್ದೆ': ಇಸ್ಲಾಂಗೆ ಮತಾಂತರವಾದ ತಮಿಳು ನಟ ಜೈ

ನಟ ವಿಜಯ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದ ತಮಿಳು ಚಿತ್ರರಂಗದ ಪ್ರಸಿದ್ಧ ನಟ ಜೈ ಅಲಿಯಾಸ್ ಜೈ ಸಂಪತ್ ಈಗ ಅಧಿಕೃತವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ.
Tamil actor Jai
ತಮಿಳು ನಟ ಜೈ ಸಂಪತ್
Updated on

ಚೆನ್ನೈ: ನಟ ಹಾಗೂ ಸಿಎಂ ವಿಜಯ್ ಜೊತೆ ಸಹನಟನಾಗಿ ಅಭಿನಯಿಸಿದ್ದ ನಟ ಜೈ ಸಂಪತ್ ಇಸ್ಲಾಂಗೆ ಮತಾಂತರವಾದ ವಿಚಾರವನ್ನು ಬಹಿರಂಗ ಪಡಿಸಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಹೌದು.. ನಟ ವಿಜಯ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದ ತಮಿಳು ಚಿತ್ರರಂಗದ ಪ್ರಸಿದ್ಧ ನಟ ಜೈ ಅಲಿಯಾಸ್ ಜೈ ಸಂಪತ್ ಈಗ ಅಧಿಕೃತವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ.

‘ಗಲಾಟಾ ಪ್ಲಸ್‌’ ಡಿಜಿಟಲ್‌ ವೇದಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಟ ಜೈ ಸಂಪತ್, ‘ನಾನು ಕೆಲವು ದೇವಾಲಯಗಳಲ್ಲಿ ಅವಮಾನಕಾರಿ ಅನುಭವಗಳನ್ನು ಎದುರಿಸಿದೆ. ಮಸೀದಿಗಳನ್ನು ಹೊರತುಪಡಿಸಿ ಬೇರೆ ಯಾವ ಸ್ಥಳದಲ್ಲಿಯೂ ವ್ಯಕ್ತಿಯಾಗಿ ಒಂದೇ ರೀತಿಯ ಗೌರವ ಸಿಕ್ಕ ಅನುಭವ ನನಗಿರಲಿಲ್ಲ. ಹೀಗಾಗಿ, 2011ರಿಂದ ಇಸ್ಲಾಂ ಧರ್ಮವನ್ನು ಅನುಸರಿಸಲು ಆರಂಭಿಸಿದೆ’ ಎಂದು ಹೇಳಿದ್ದಾರೆ.

ಜೈ 2011 ರಿಂದಲೇ ಇಸ್ಲಾಂ ಧರ್ಮದ ರೀತಿರಿವಾಜು ಹಾಗೂ ಆಚರಣೆಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಇದರ ಮುಂದುವರಿದ ಭಾಗವಾಗಿ, "ನಾನು ಶೀಘ್ರದಲ್ಲೇ ಕಾನೂನಾತ್ಮಕವಾಗಿ ನನ್ನ ಹೆಸರನ್ನು ಸಹ ಬದಲಾಯಿಸಿಕೊಳ್ಳಲಿದ್ದೇನೆ" ಎಂದು ನಟ ಜೈ ಬಹಿರಂಗಪಡಿಸಿದ್ದಾರೆ.

Tamil actor Jai
'My magical May, one more win': 'ವಿಜಯ'ದ ಸಂಭ್ರಮ ಹಂಚಿಕೊಂಡ ತ್ರಿಶಾ

ದೇಗುಲಗಳಲ್ಲಿ ಅಪಮಾನ

ನನಗೆ ಅನೇಕ ಮುಸ್ಲಿಂ ಸ್ನೇಹಿತರಿದ್ದರು. ಅದಕ್ಕೂ ಮುನ್ನ ನಾನು ಶಬರಿಮಲೆಗೆ ಮಾಲೆ ಧರಿಸಿ ಹೋಗಿದ್ದೆ, ಹಾಗೆಯೇ ಕ್ರಿಶ್ಚಿಯನ್ ಧರ್ಮದ ಆಚರಣೆಗಳನ್ನೂ ಪಾಲಿಸುತ್ತಿದ್ದೆ. ಎಲ್ಲಾ ದೇವರುಗಳೂ ಒಂದೇ ಎಂಬ ಭಾವನೆಯಿಂದ ನಾನು ಎಲ್ಲವನ್ನೂ ಗೌರವಿಸುತ್ತಿದ್ದೆ.

ಆದರೆ ಒಂದು ಹಂತದಲ್ಲಿ, ನನಗೆ ಕೆಲವು ದೇವಾಲಯಗಳಲ್ಲಿ ಅವಮಾನ ಎದುರಾಯಿತು. ನಾನು ನಿರೀಕ್ಷಿಸದ ಕೆಲವು ಘಟನೆಗಳು ನನಗೆ ತೀವ್ರ ಅಸಮಾಧಾನ ಮೂಡಿಸಿದವು. ಇಂತಹ ಅನುಭವಗಳು ಪದೇ ಪದೇ ಮರುಕಳಿಸಿದಾಗ, ನಾನು ಒಂದು ದಿನ ಮಸೀದಿಗೆ ಭೇಟಿ ನೀಡಿದೆ." ಎಂದಿದ್ದಾರೆ.

ಮಸೀದಿಯಲ್ಲಿ ಸಮಾನತೆ ಭಾವ

ತಾವು ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಧರ್ಮಗಳ ಆಚರಣೆಗಳನ್ನು ಪಾಲಿಸುತ್ತಿದ್ದಾಗಿ, ಆದರೆ ಕೆಲವು ಕಹಿ ಅನುಭವಗಳು ಮತ್ತು ಅಪಮಾನಗಳು ತಮಗೆ ಬೇಸರ ತರಿಸಿದ್ದವು ಎಂದು ಹೇಳಿದ್ದಾರೆ. ಇದೇ ವೇಳೆ, ಮಸೀದಿಗೆ ಭೇಟಿ ನೀಡಿದಾಗ ತಮಗೆ ಅಲ್ಲಿ ಸಮಾನತೆಯ ಭಾವನೆ ಸಿಕ್ಕಿತು ಎಂದು ನಟ ಹಂಚಿಕೊಂಡಿದ್ದಾರೆ.

"ನಾನು ಮೊದಲ ಬಾರಿಗೆ ಮಸೀದಿಗೆ ಹೋದಾಗ, ಅಲ್ಲಿದ್ದ ಎಲ್ಲರಿಗೂ ನಾನು ಒಬ್ಬ ಸಿನಿಮಾ ನಟ ಎಂಬ ವಿಷಯ ಗೊತ್ತಿತ್ತು. ಆದರೆ, ಮಸೀದಿಯ ಒಳಗಿರುವಾಗ ನನ್ನ ಜೊತೆ ಯಾರೂ ಮಾತನಾಡಲು ಬರಲಿಲ್ಲ, ಯಾರೂ ನನ್ನ ಜೊತೆ ಫೋಟೋ ಅಥವಾ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳಲಿಲ್ಲ.

ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಗೆ ಬಂದ ನಂತರವಷ್ಟೇ ಎಲ್ಲರೂ ನನ್ನನ್ನು ಮಾತಾಡಿಸಿದರು. ಇಸ್ಲಾಂ ಧರ್ಮದಲ್ಲಿ ಮಸೀದಿಯ ಒಳಗೆ ಹೋದರೆ ಎಲ್ಲರೂ ಸಮಾನರು, ಅಲ್ಲಿ ಅಲ್ಲಾಹ್ ಮಾತ್ರ ಸರ್ವೋಚ್ಚ. ಅಲ್ಲಿ ಯಾರೂ ಸೆಲೆಬ್ರಿಟಿಗಳಲ್ಲ ಎಂಬುದನ್ನು ಆ ಕ್ಷಣ ನಾನು ಮನಗಂಡೆ.

ಆ ಒಂದು ಘಟನೆ ನನ್ನ ಸ್ವಭಾವವನ್ನೇ ಸಂಪೂರ್ಣವಾಗಿ ಬದಲಾಯಿಸಿತು." ಎಂದು ಹೇಳಿದ್ದಾರೆ. ಅಲ್ಲಿ ಸಿಕ್ಕ ಸಮಾನತೆ ಮತ್ತು ಶಾಂತಿಯೇ ತಾವು ಇಸ್ಲಾಂ ಧರ್ಮವನ್ನು ಆಕರ್ಷಿಸಲು ಮತ್ತು ಅಪ್ಪಿಕೊಳ್ಳಲು ಮುಖ್ಯ ಕಾರಣ ಎಂದು ನಟ ಜೈ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಧರ್ಮ ಬದಲಿಸಿದ್ರೂ ಹೆಸರು ಬದಲಾವಣೆ ಇಲ್ಲ

ನಾನು ಇಸ್ಲಾಂ ಧರ್ಮ ಸೇರಿದ್ರೂ ನನ್ನ ಹೆಸರನ್ನು ಬದಲಾಯಿಸಿಲ್ಲ. ಮುಂದೆ ನಾನು ನನ್ನ ಹೆಸರನ್ನು ಅಜೀಜ್ ಜೈ ಎಂದು ಬದಲಾಯಿಸಲು ಯೋಚನೆ ಮಾಡುತ್ತಿದ್ದೇನೆ ಎಂದು ನಟ ಹೇಳಿದ್ದಾರೆ.

ಸದ್ಯ ಜೈ ಅವರ ಮಾತುಗಳು ನಾನಾ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಕೆಲವರು ಇದನ್ನು ಪ್ರಚಾರಕ್ಕಾಗಿ ಹೇಳುತ್ತಿದ್ದಾರೆ ಎಂದಿದ್ದಾರೆ. ಇನ್ನು ಕೆಲವರು ನಟನಿಗೆ ಬೆಂಬಲವಾಗಿ ನಿಂತಿದ್ದಾರೆ. ಅಂದಹಾಗೆ ವಿಜಯ್ ಮತ್ತು ಜೈ ಅವರು ಮುಂಚೆ 'ಭಗವತಿ' (Bagavathi) ಎಂಬ ಸೂಪರ್ ಹಿಟ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ಜೈ ಅವರು ವಿಜಯ್ ಅವರ ಕಿರಿಯ ಸಹೋದರನ ಪಾತ್ರವನ್ನು ನಿರ್ಷಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com