

ಚೆನ್ನೈ: ಇತ್ತೀಚಿಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರ ಬೆನ್ನಲೇ ವಿಜಯ್ ಆಪ್ತ ಸ್ನೇಹಿತೆಯಾಗಿರುವ ನಟಿ ತ್ರಿಶಾ ಕೃಷ್ಣನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿ ಕುರಿತು ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು.
ಇದೀಗ ಮತ್ತೊಂದು ಪೋಸ್ಟ್ ಮೂಲಕ ತ್ರಿಶಾ ಗಮನ ಸೆಳೆದಿದ್ದು, 'ನನ್ನ ಮ್ಯಾಜಿಕಲ್ ಮೇ': ‘ಮತ್ತೊಂದು ಜಯ’ ಎಂದು ಬರೆಯುವ ಮೂಲಕ ವಿಜಯ್ ಅವರ ಐತಿಹಾಸಿಕ ಗೆಲುವು ಮತ್ತು ತಮ್ಮ 'ಕರುಪ್ಪು' ಸಿನಿಮಾದ ಯಶಸ್ಸಿನ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ನಟಿ, ಇತ್ತೀಚೆಗೆ ತಮ್ಮ ಹೊಸ ತಮಿಳು ಸಿನಿಮಾ ಕರುಪ್ಪು(Karuppu) ಚಿತ್ರದ ಶೂಟಿಂಗ್ ಸೀನ್ಸ್ ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪೋಸ್ಟ್ ಜೊತೆ ನೀಡಿದ ಕ್ಯಾಪ್ಷನ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
“My magical may said, One More for the Win. Just God Things” (ಮ್ಯಾಜಿಕಲ್ ಮೇ ತಿಂಗಳಲ್ಲಿ ಮತ್ತೊಂದು ಜಯ. ಎಲ್ಲಾ ದೈವ ಇಚ್ಛೆ) ಎಂದು ತ್ರಿಶಾ ಬರೆದುಕೊಂಡಿದ್ದಾರೆ.
ಈ ಕ್ಯಾಪ್ಷನ್ ನೋಡಿ ಹಲವರು ಇದು ತಮಿಳುನಾಡು ಸಿಎಂ ವಿಜಯ್ ಅವರ ಇತ್ತೀಚಿನ ರಾಜಕೀಯ ಗೆಲುವಿಗೆ ಸಂಬಂಧಿಸಿದೆ ಎಂದು ಹೇಳುತ್ತಿದ್ದಾರೆ. ವಿಜಯ್ ಅವರು ಮುಖ್ಯಮಂತ್ರಿಯಾಗಿರುವ ಸಂಭ್ರಮವನ್ನು ಪರೋಕ್ಷವಾಗಿ ತ್ರಿಶಾ ಇಂದಿಗೂ ಸಂಭ್ರಮಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
Advertisement