ಪಶ್ಚಿಮ ಏಷ್ಯಾ ಸಂಘರ್ಷ: ಯುಎಇಯಲ್ಲಿ ಸಿಲುಕಿದ ಭಾರತೀಯರಿಗಾಗಿ ಸ್ಪೈಸ್‌ಜೆಟ್ ನಿಂದ 13 ವಿಶೇಷ ವಿಮಾನ ಹಾರಾಟ

ಮುಂಬೈಗೆ ಏಳು ವಿಶೇಷ ವಿಮಾನಗಳು, ದೆಹಲಿಗೆ ಐದು ವಿಶೇಷ ವಿಮಾನಗಳು ಮತ್ತು ದುಬೈನಿಂದ ಮುಂಬೈಗೆ ಒಂದು ವಿಶೇಷ ವಿಮಾನವನ್ನು ನಿರ್ವಹಿಸಲಾಗುವುದು" ಎಂದು ಸ್ಪೈಸ್‌ಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.
SpiceJet to operate 13 special flights from UAE on Thursday for passengers stranded due to West Asia conflict
ಸ್ಪೈಸ್‌ಜೆಟ್ ವಿಮಾನ
Updated on

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಯುಎಇಯಲ್ಲಿ ಸಿಲುಕಿರುವ ಭಾರತೀಯರು ದೇಶಕ್ಕೆ ವಾಪಸ್ ಬರಲು ಅನುಕೂಲವಾಗುವಂತೆ ಸ್ಪೈಸ್‌ಜೆಟ್ ಗುರುವಾರ ಯುಎಇಯಿಂದ 13 ವಿಶೇಷ ವಿಮಾನಗಳನ್ನು ನಿರ್ವಹಿಸುತ್ತಿದೆ.

"13 ವಿಮಾನಗಳಲ್ಲಿ 12 ವಿಮಾನಗಳು ಫುಜೈರಾದಿಂದ ಮತ್ತು ಒಂದು ದುಬೈನಿಂದ ಕಾರ್ಯನಿರ್ವಹಿಸಲಿವೆ.

ಮುಂಬೈಗೆ ಏಳು ವಿಶೇಷ ವಿಮಾನಗಳು, ದೆಹಲಿಗೆ ಐದು ವಿಶೇಷ ವಿಮಾನಗಳು ಮತ್ತು ದುಬೈನಿಂದ ಮುಂಬೈಗೆ ಒಂದು ವಿಶೇಷ ವಿಮಾನವನ್ನು ನಿರ್ವಹಿಸಲಾಗುವುದು" ಎಂದು ಸ್ಪೈಸ್‌ಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.

SpiceJet to operate 13 special flights from UAE on Thursday for passengers stranded due to West Asia conflict
ದುಬೈ ವಿಮಾನ ನಿಲ್ದಾಣ ಬಂದ್: ಬಳ್ಳಾರಿ ಶಾಸಕ ಭರತ್ ರೆಡ್ಡಿ ಸೇರಿ 50ಕ್ಕೂ ಹೆಚ್ಚು ಪ್ರವಾಸಿಗರು ಸಂಕಷ್ಟದಲ್ಲಿ; Video

ಮಂಗಳವಾರ ಮತ್ತು ಬುಧವಾರ, ವಿಮಾನಯಾನ ಸಂಸ್ಥೆಯು, ಫುಜೈರಾದಿಂದ ದೆಹಲಿ, ಮುಂಬೈ ಮತ್ತು ಕೊಚ್ಚಿಗೆ 12 ವಿಶೇಷ ವಿಮಾನಗಳನ್ನು ನಿರ್ವಹಿಸಿದೆ ಎಂದು ಹೇಳಿದೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಸಂಘರ್ಷದಿಂದ ವಾಯು ಪ್ರದೇಶವನ್ನು ಹಠಾತ್ ಬಂದ್ ಮಾಡಲಾಗಿದ್ದು, ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ವಿವಿಧ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ.

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com