

ಅಸ್ಸಾಂ: ರಾಡಾರ್ ಸಂಪರ್ಕದಿಂದ ಕಡಿತಗೊಂಡು ನಾಪತ್ತೆಯಾಗಿದ್ದ ಸುಖೋಯ್ 30 ಎಂಕೆಐ ಯುದ್ಧ ವಿಮಾನ ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಪತನ ಇಬ್ಬರು ಪೈಲಟ್‌ಗಳು ದುರ್ಮರಣ ಹೊಂದಿದ್ದಾರೆ ಎಂದು IAF ಶುಕ್ರವಾರ ತಿಳಿಸಿದೆ.
ತರಬೇತಿಯಲ್ಲಿದ್ದ Su-30MKI ಯುದ್ಧ ವಿಮಾನ ಗುರುವಾರ ಜೋರ್ಹತ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ (IAF) ಹೇಳಿಕೆಯಲ್ಲಿ ತಿಳಿಸಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ "Sqn Ldr Anuj ಮತ್ತು ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಸಾವನ್ನಪ್ಪಿದ್ದಾರೆ. ದುಃಖದ ಸಮಯದಲ್ಲಿ ಅವರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುವುದಾಗಿ ಭಾರತೀಯ ವಾಯುಪಡೆ ಹೇಳಿದೆ. ರಷ್ಯಾ ಮೂಲದ ವಿಮಾನ ಜೊತೆಗಿನ ಸಂಪರ್ಕ ನಿನ್ನೆ ಸಂಜೆ 7:42 ಕ್ಕೆ ಸಂಪರ್ಕ ಕಡಿತಗೊಂಡಿತ್ತು.
Su-30MKI ಫೈಟರ್ ಜೆಟ್: Su-30MKI ರಷ್ಯಾದ ವಿಮಾನ ತಯಾರಕ ಸುಖೋಯ್ ಅಭಿವೃದ್ಧಿಪಡಿಸಿದ ಎರಡು ಆಸನಗಳ ಯುದ್ಧ ವಿಮಾನವಾಗಿದೆ. ಈಗ ಇದನ್ನು ಭಾರತೀಯ ವಾಯುಪಡೆಗೆ HAL ಪರವಾನಗಿ ಅಡಿಯಲ್ಲಿ ನಿರ್ಮಿಸಲಾಗಿದೆ. ಭಾರತೀಯ ವಾಯುಪಡೆಯಲ್ಲಿ 260 ಕ್ಕೂ ಹೆಚ್ಚು ಸುಖೋಯ್ 30 ಯುದ್ಧ ವಿಮಾನಗಳಿವೆ.
ಈ ಹಿಂದೆ ಜೂನ್ 2024 ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸುಖೋಯ್ ಯುದ್ಧ ವಿಮಾನ ಪತನಗೊಂಡಿತ್ತು. ಮತ್ತೊಂದು ಸುಖೋಯ್-30 ಯುದ್ಧ ವಿಮಾನ ಜನವರಿ 2023 ರಲ್ಲಿ ಗ್ವಾಲಿಯರ್ ವಾಯುನೆಲೆಯಿಂದ ಟೇಕ್ ಆಫ್ ಆದ ನಂತರ ಪತನಗೊಂಡಿತ್ತು.
Advertisement