ಪಶ್ಚಿಮ ಏಷ್ಯಾ ಸಂಘರ್ಷ: 8 ಗಂಟೆಗಳ ಕಾಲ ಹಾರಾಟದ ನಂತರ ಇಂಡಿಗೋ ವಿಮಾನ ದೆಹಲಿಗೆ ವಾಪಸ್!

ಕೊನೆ ಕ್ಷಣದ ವಾಯುಪ್ರದೇಶ ನಿರ್ಬಂಧಗಳಿಂದಾಗಿ ದೆಹಲಿ - ಮ್ಯಾಂಚೆಸ್ಟರ್‌ ವಿಮಾನ ತನ್ನ ಮೂಲ ಸ್ಥಳಕ್ಕೆ ಮರಳಬೇಕಾಯಿತು ಎಂದು ಇಂಡಿಗೋ ತಿಳಿಸಿದೆ.
IndiGo Delhi–Manchester flight returns after 8 hours in air amid West Asia airspace curbs
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ಹೋಗುತ್ತಿದ್ದ ಇಂಡಿಗೋ ವಿಮಾನವು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಆಫ್ರಿಕಾದ ಮೇಲೆ ಸುಮಾರು ಎಂಟು ಗಂಟೆಗಳ ಕಾಲ ಹಾರಾಟ ನಡೆಸಿದ ನಂತರ ವಾಪಸ್ ದೆಹಲಿ ಬಂದಿದೆ.

ಕೊನೆ ಕ್ಷಣದ ವಾಯುಪ್ರದೇಶ ನಿರ್ಬಂಧಗಳಿಂದಾಗಿ ದೆಹಲಿ - ಮ್ಯಾಂಚೆಸ್ಟರ್‌ ವಿಮಾನ ತನ್ನ ಮೂಲ ಸ್ಥಳಕ್ಕೆ ಮರಳಬೇಕಾಯಿತು ಎಂದು ಇಂಡಿಗೋ ತಿಳಿಸಿದೆ.

6E 033 ವಿಮಾನವು ಸೋಮವಾರ(ಮಾರ್ಚ್ 9, 2026) ಬೆಳಗಿನ ಜಾವ 12.30 ಕ್ಕೆ ದೆಹಲಿಯಿಂದ ಹೊರಟಿತು. ಈ ವಿಮಾನವು ಸಂಘರ್ಷ ಪೀಡಿತ ಪರ್ಷಿಯನ್ ಕೊಲ್ಲಿ ಪ್ರದೇಶವನ್ನು ಸಂಪೂರ್ಣವಾಗಿ ತಪ್ಪಿಸಿ, ಆಫ್ರಿಕಾದ ಮೇಲೆ ಹಾರುತ್ತಿತ್ತು. ಅದು ಇಥಿಯೋಪಿಯಾ ಮೂಲಕ ಖಂಡವನ್ನು ಪ್ರವೇಶಿಸಿತು ಮತ್ತು ಎರಿಟ್ರಿಯಾದ ಮೇಲೆ ಹಾರುತ್ತಿದ್ದಾಗ ಯು-ಟರ್ನ್ ತೆಗೆದುಕೊಂಡು ದೆಹಲಿಗೆ ಹಿಂತಿರುಗಲು ಪ್ರಾರಂಭಿಸಿತು, ಅಂತಿಮವಾಗಿ ಮಧ್ಯಾಹ್ನ 2.30 ರ ಸುಮಾರಿಗೆ ದೆಹಲಿಯಲ್ಲಿ ಲ್ಯಾಂಡ್ ಆಗಿದೆ.

IndiGo Delhi–Manchester flight returns after 8 hours in air amid West Asia airspace curbs
ಇಸ್ರೇಲ್ ವಾಯು ಪ್ರದೇಶ ಬಂದ್: ದೆಹಲಿ-ಟೆಲ್ ಅವೀವ್ ಏರ್ ಇಂಡಿಯಾ ವಿಮಾನ ಮುಂಬೈಗೆ ಡೈವರ್ಟ್

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಪರಿಣಾಮ "ಕೊನೆಯ ಕ್ಷಣದ ವಾಯುಪ್ರದೇಶದ ನಿರ್ಬಂಧಗಳಿಂದಾಗಿ" ವಿಮಾನ ಹಿಂತಿರುಗಬೇಕಾಯಿತು ಎಂದು ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಯಾಣವನ್ನು ಪುನರಾರಂಭಿಸುವ ಸಾಧ್ಯತೆಯನ್ನು ನಿರ್ಣಯಿಸಲು ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com