

ನವದೆಹಲಿ: ಜನರನ್ನು ಭಯಭೀತರಾಗಬೇಡಿ ಎಂದು ಹೇಳುವ ಪ್ರಧಾನ ಮಂತ್ರಿ ವಿವಿಧ ಕಾರಣಗಳಿಂದಾಗಿ ಸ್ವತಃ ಒಳಗೊಳಗೆ ಭಯಗೊಂಡಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಸಂಬಂಧ ಸರ್ಕಾರದಿಂದ ಉತ್ತರ ಕೋರಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವಾರು ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದರು,
ಪ್ರತಿಭಟನೆ ನಡೆಸಿದ ನಂತರ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಜನರನ್ನು ಭಯಗೊಳ್ಳಬೇಡಿ ಎಂದು ಹೇಳುವ ಪ್ರಧಾನಿ ಎಪ್ಸ್ಟೀನ್ ಫೈಲ್ಸ್ ವಿಷಯ ಮತ್ತು ಅಮೆರಿಕದಲ್ಲಿನ ಅದಾನಿ ಪ್ರಕರಣದಿಂದಾಗಿ ಪ್ರಧಾನಿ ಭಯಭೀತರಾಗಿದ್ದಾರೆ, ಹೀಗಾಗಿ ಲೋಕಸಭೆ ಅಧಿವೇಶನಕ್ಕೆ ಬರುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪ್ರಧಾನಿ ಕುರ್ಚಿ ಖಾಲಿಯಿರುವುದನ್ನು ನಿನ್ನೆ ನೀವು ನೋಡಿದ್ದೀರಿ. ಆದ್ದರಿಂದ, ಅವರು ದೇಶಕ್ಕೆ ಭಯಭೀತರಾಗಬೇಡಿ ಎಂದು ಹೇಳುತ್ತಿದ್ದಾರೆ ಆದರೆ ಸ್ವತಃ ಭಯಭೀತರಾಗಿದ್ದಾರೆ" ಎಂದು ಗಾಂಧಿ ಹೇಳಿದರು.
ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಎಸ್‌ಪಿ ಸೇರಿದಂತೆ ಹಲವಾರು ವಿರೋಧ ಪಕ್ಷದ ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸಿ, 'ನಾಮ್ ನರೇಂದರ್, ಕಾಮ್ ಸರೆಂಡರ್ ' ಮತ್ತು 'ಮೋದಿ ಜಿ, ಎಲ್‌ಪಿಜಿ' ಮುಂತಾದ ಘೋಷಣೆಗಳನ್ನು ಕೂಗಿದರು. ಪ್ರಿಯಾಂಕಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಮಹಿಳಾ ಸಂಸದರು ಇಟ್ಟಿಗೆಯ ಅಡುಗೆ ಒಲೆಯೊಂದಿಗೆ ಕುಳಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
Advertisement