ಪಾಕಿಸ್ತಾನ ಮೇಲೆ ಅಫ್ಘಾನಿಸ್ತಾನದಿಂದ ಪ್ರತೀಕಾರದ ಡ್ರೋನ್ ದಾಳಿ

ಪ್ರತೀಕಾರದ ದಾಳಿಯ ಸಮಯದಲ್ಲಿ ಡುರಾಂಡ್ ರೇಖೆಯ ಉದ್ದಕ್ಕೂ ಇರುವ ಯುದ್ಧ ಕಮಾಂಡ್ ಕೇಂದ್ರವಾದ ಪಾಕಿಸ್ತಾನದ ಕೊಹಾತ್ ಮಿಲಿಟರಿ ಕೋಟೆ ಮತ್ತು ಕೋಟೆಯ ಕಮಾಂಡರ್ ಕಚೇರಿಗೆ ಗಮನಾರ್ಹ ಹಾನಿಯಾಗಿದೆ.
Afghanistan launches retaliatory drone strikes on Pakistan
ಅಫ್ಘಾನಿಸ್ತಾನದಿಂದ ಪ್ರತೀಕಾರದ ಡ್ರೋನ್ ದಾಳಿ
Updated on

ಇಸ್ಲಾಮಾಬಾದ್: ಪಾಕಿಸ್ತಾನ ಖೈಬರ್ ಪಖ್ತುನ್ಖ್ವಾದ ಕೊಹಾತ್ ಪ್ರದೇಶದಲ್ಲಿರುವ ಪಾಕ್ ಸೇನೆಯ ಕಾರ್ಯತಂತ್ರದ ಮಿಲಿಟರಿ ಕೇಂದ್ರಗಳು ಮತ್ತು ನೆಲೆಗಳ ಮೇಲೆ ಅಫ್ಘಾನಿಸ್ತಾನ ಶುಕ್ರವಾರ ಪ್ರತೀಕಾರದ ಡ್ರೋನ್ ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ತಿಳಿಸಿದೆ.

ಪ್ರತೀಕಾರದ ದಾಳಿಯ ಸಮಯದಲ್ಲಿ ಡುರಾಂಡ್ ರೇಖೆಯ ಉದ್ದಕ್ಕೂ ಇರುವ ಯುದ್ಧ ಕಮಾಂಡ್ ಕೇಂದ್ರವಾದ ಪಾಕಿಸ್ತಾನದ ಕೊಹಾತ್ ಮಿಲಿಟರಿ ಕೋಟೆ ಮತ್ತು ಕೋಟೆಯ ಕಮಾಂಡರ್ ಕಚೇರಿಗೆ ಗಮನಾರ್ಹ ಹಾನಿಯಾಗಿದೆ ಎಂದು ಅಫ್ಘಾನಿಸ್ತಾನ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದೆ.

"ಕೋಟೆಯ ಮಿಲಿಟರಿ ನೆಲೆಗಳು, ಕಮಾಂಡ್ ಸೆಂಟರ್, ಡಿಪೋಗಳು ಮತ್ತು ಸೈನಿಕರ ವಸತಿ ಆವರಣಗಳನ್ನು ನಾಶ ಮಾಡಲಾಗಿದೆ. ದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ ಮತ್ತು ಭಾರಿ ಪ್ರಮಾಣದಲ್ಲಿ ಆಸ್ತಿ ಹಾನಿಯಾಗಿದೆ" ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ತಿಳಿಸಿದೆ.

Afghanistan launches retaliatory drone strikes on Pakistan
ರಂಜಾನ್ ನಡುವೆಯೇ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ದಾಳಿ: ಹಲವು ನಾಗರಿಕರ ಸಾವು

ಮೂಲಗಳ ಪ್ರಕಾರ, ಕೊಹಾತ್ ಮಿಲಿಟರಿ ಕೋಟೆಯನ್ನು ಪಾಕಿಸ್ತಾನದ ಪ್ರಮುಖ ಮಿಲಿಟರಿ ಕೇಂದ್ರವೆಂದು ಪರಿಗಣಿಸಲಾಗಿದೆ. ಇದು ಪರಚಿನಾರ್, ಸದ್ದಾ, ಖೈಬರ್ ಮತ್ತು ಕುರ್ರಮ್ ಏಜೆನ್ಸಿಯಂತಹ ಪ್ರದೇಶಗಳಿಗೆ ಮಿಲಿಟರಿ ಲಾಜಿಸ್ಟಿಕ್ಸ್ ಮತ್ತು ಕಾರ್ಯಾಚರಣೆಯ ಬೆಂಬಲವನ್ನು ಒದಗಿಸುತ್ತದೆ.

ಇದಕ್ಕು ಮುನ್ನ ಅಘ್ಪಾನ್ ರಾಜಧಾನಿ ಕಾಬೂಲ್‌ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ಪಾಕಿಸ್ತಾನ ವೈಮಾನಿಕ ಬಾಂಬ್‌ ದಾಳಿ ನಡೆಸಿದ್ದು, ಇದರಿಂದಾಗಿ 4 ಜನ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com