Video: ಭಾರತಕ್ಕೆ ಬಿಗ್‌ ರಿಲೀಫ್‌; ಹಾರ್ಮುಜ್ ಜಲಸಂಧಿ ಮೂಲಕ ಗುಜರಾತ್ ತಲುಪಿದ LPG ಹೊತ್ತ ಶಿವಾಲಿಕ್ ನೌಕೆ!

ಇಂದು ಬೆಳಗಿನ ಜಾವ ಯುದ್ಧ ಪೀಡಿತ ಪ್ರದೇಶ ಹಾರ್ಮುಜ್ ಜಲಸಂಧಿ ಮೂಲಕ ಶಿವಾಲಿಕ್ ಹಡಗು ಸುರಕ್ಷಿತವಾಗಿ ಹೊರಬಂದು ಸಂಜೆ ಗುಜರಾತ್ ನ ಬಂದರಿಗೆ ಆಗಮಿಸಿದೆ.
LPG tanker Shivalik reaches Guj port after crossing Hormuz
ಶಿವಾಲಿಕ್ ನೌಕೆ
Updated on

ಗಾಂಧಿನಗರ: ಮಧ್ಯ ಪ್ರಾಚ್ಯ ಸಂಘರ್ಷದ ನಡುವೆ ಭಾರತಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು, ಸುಮಾರು 40,000 ಮೆಟ್ರಿಕ್ ಟನ್ ಎಲ್‌ಪಿಜಿ(LPG) ಹೊತ್ತ ಶಿವಾಲಿಕ್ ಹಡಗು ಸೋಮವಾರ ಸಂಜೆ ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಿದೆ.

ಇಂದು ಬೆಳಗಿನ ಜಾವ ಯುದ್ಧ ಪೀಡಿತ ಪ್ರದೇಶ ಹಾರ್ಮುಜ್ ಜಲಸಂಧಿ ಮೂಲಕ ಶಿವಾಲಿಕ್ ಹಡಗು ಸುರಕ್ಷಿತವಾಗಿ ಹೊರಬಂದು ಸಂಜೆ ಗುಜರಾತ್ ನ ಬಂದರಿಗೆ ಆಗಮಿಸಿದೆ.

ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಸೇರಿದ 'ಶಿವಾಲಿಕ್' ಹಡಗು ಇಂದು ಸಂಜೆ ಗುಜರಾತ್‌ನ ಮುದ್ರಾ ಬಂದರನ್ನು ತಲುಪಿದೆ. ಮತ್ತೊಂದು ಹಡಗು 'ನಂದಾದೇವಿ' ಮಂಗಳವಾರ ಬೆಳಗ್ಗೆ ಗುಜರಾತ್‌ನ ಕಾಂಡ್ಲಾ ಬಂದರನ್ನು ತಲುಪುವ ನಿರೀಕ್ಷೆ ಇದೆ ಬಂದರು ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

ಇಂದು ಬೆಳಗ್ಗೆ ದೆಹಲಿಯಲ್ಲಿ ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ, ಸೋಮವಾರ ಶಿವಾಲಿಕ್‌ನ ಸರಕು ಬಿಡುಗಡೆಯಲ್ಲಿ ಯಾವುದೇ ವಿಳಂಬವಾಗದಂತೆ ಬಂದರಿನಲ್ಲಿ ದಾಖಲಾತಿ ಮತ್ತು ಆದ್ಯತೆಯ ಬರ್ತಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದರು.

LPG tanker Shivalik reaches Guj port after crossing Hormuz
West Asia conflict: ಇರಾನ್ ಉದ್ವಿಗ್ನತೆ ನಡುವೆಯೂ ಭಾರತ ಧ್ವಜ ಹೊತ್ತ ಹಡಗು Hormuz ಜಲಸಂಧಿಯಿಂದ ಸುರಕ್ಷಿತವಾಗಿ ಪ್ರಯಾಣ!

ಕಚ್ಚಾ ತೈಲವನ್ನು ಸಾಗಿಸುತ್ತಾ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಹೊರಟಿದ್ದ ಜಗ್ ಲಾಡ್ಕಿ ಎಂಬ ಮತ್ತೊಂದು ಹಡಗು ಸುರಕ್ಷಿತವಾಗಿ ಭಾರತಕ್ಕೆ ಪ್ರಯಾಣ ಬೆಳೆಸಿದ್ದು, ನಾಳೆ ಮುಂದ್ರಾ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ. 22 ಸರಕು ಸಾಗಣೆದಾರರು ಪ್ರಸ್ತುತ ಹಾರ್ಮುಜ್ ಜಲಸಂಧಿಯ ಪಶ್ಚಿಮಕ್ಕೆ ಸ್ಥಾನ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 81,000 ಟನ್ ಮುರ್ಬನ್ ಕಚ್ಚಾ ತೈಲವನ್ನು ಹೊತ್ತ ಯುಎಇಯಿಂದ ಹೊರಟ ಭಾರತೀಯ ಧ್ವಜ ಹೊಂದಿರುವ ಹಡಗು 'ಜಗ್ ಲಾಡ್ಕಿ' ಭಾರತಕ್ಕೆ ಸುರಕ್ಷಿತವಾಗಿ ಪ್ರಯಾಣ ಬೆಳೆಸುತ್ತಿದೆ ಎಂದು ಸಿನ್ಹಾ ಹೇಳಿದ್ದಾರೆ.

ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಯಾವುದೇ ಸಂಘರ್ಷದ ಘಟನೆ ವರದಿಯಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಪರಿಣಾಮವಾಗಿ, ಈಗ ಪರ್ಷಿಯನ್ ಕೊಲ್ಲಿಯಲ್ಲಿ 22 ಭಾರತೀಯ ಧ್ವಜ ಹೊಂದಿರುವ ಹಡಗುಗಳು ಸುರಕ್ಷಿತವಾಗಿವೆ ಮತ್ತು ಅವುಗಳಲ್ಲಿ ಒಟ್ಟು 611 ನಾವಿಕರು ಇದ್ದಾರೆ.

ಇಸ್ರೇಲ್, ಅಮೆರಿಕ – ಇರಾನ್‌ ಯುದ್ಧದಿಂದ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯ ಹಲವಾರು ವಲಯಗಳ ಮೇಲೆ ಪರಿಣಾಮ ಬೀರುತ್ತಿದೆ. ರೆಸ್ಟೋರೆಂಟ್‌ಗಳು, ಹಾಸ್ಟೆಲ್‌ಗಳು ಮತ್ತು ಕೆಲವು ಕಂಪನಿಗಳು, ಮನೆಗಳು ಮತ್ತು ಹೋಟೆಲ್‌ಗಳಲ್ಲಿ ಭಾರೀ ಸಮಸ್ಯೆ ಎದುರಾಗಿದೆ. ಎಲ್‌ಪಿಜಿ ಸರಬರಾಜಲ್ಲಿ ವಿಳಂಬವಾದರೆ ಮತ್ತಷ್ಟು ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಇದರ ನಡುವೆ ಶಿವಾಲಿಕ್‌ ಹಡಗು ಭಾರತ ತಲುಪಿದ್ದು, ಮತ್ತೊಂದು ಹಡಗು ನಂದಾ ದೇವಿ ನಾಳೆ ಕಾಂಡ್ಲಾ ಬಂದರಿಗೆ ಆಗಮಿಸಲಿದೆ. ಇದರಿಂದ ಗ್ಯಾಸ್‌ ಸಮಸ್ಯೆಗೆ ಕೊಂಚ ರಿಲೀಫ್‌ ಸಿಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com