ಕೇರಳ ಚುನಾವಣೆ: ಕೇವಲ 9 ಮಹಿಳೆಯರಿಗೆ ಕಾಂಗ್ರೆಸ್ ಟಿಕೆಟ್; ಶಮಾ ಮೊಹಮ್ಮದ್ ಕಿಡಿ

ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಶಮಾ ಮೊಹಮ್ಮದ್, ನಾನು ಆರಾಧಿಸುವ, ಗೌರವಿಸುವ ಮತ್ತು ಮೆಚ್ಚುವ ನನ್ನ ನಾಯಕ ರಾಹುಲ್ ಗಾಂಧಿ ಅವರು ಕೇರಳದ ಕಾಂಗ್ರೆಸ್ ಮಹಿಳೆಯರನ್ನು ಬೆಂಬಲಿಸುವಂತೆ ನಾನು ಗೌರವದಿಂದ ಒತ್ತಾಯಿಸುತ್ತೇನೆ ಎಂದಿದ್ದಾರೆ.
Only 9 of 92 Assembly tickets for women, says Congress leader Shama Mohamed ahead of Kerala polls
ಶಮಾ ಮೊಹಮ್ಮದ್
Updated on

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಅತ್ಯಂತ ಕಡಿಮೆ ಇರುವ ಬಗ್ಗೆ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಶಮಾ ಮೊಹಮ್ಮದ್, ನಾನು ಆರಾಧಿಸುವ, ಗೌರವಿಸುವ ಮತ್ತು ಮೆಚ್ಚುವ ನನ್ನ ನಾಯಕ ರಾಹುಲ್ ಗಾಂಧಿ ಅವರು ಕೇರಳದ ಕಾಂಗ್ರೆಸ್ ಮಹಿಳೆಯರನ್ನು ಬೆಂಬಲಿಸುವಂತೆ ನಾನು ಗೌರವದಿಂದ ಒತ್ತಾಯಿಸುತ್ತೇನೆ ಎಂದಿದ್ದಾರೆ.

ಒಟ್ಟು 92 ವಿಧಾನಸಭಾ ಟಿಕೆಟ್‌ಗಳಲ್ಲಿ, ಕೇವಲ 9 ಮಾತ್ರ ಮಹಿಳೆಯರಿಗೆ ಸಿಕ್ಕಿವೆ. ಇಲ್ಲಿಯವರೆಗೆ ಘೋಷಿಸಲಾದ 16 ಲೋಕಸಭಾ ಟಿಕೆಟ್‌ಗಳಲ್ಲಿ ಕೇವಲ 1 ಮಾತ್ರ ಮಹಿಳೆಗೆ ನೀಡಲಾಗಿದೆ. ಒಂದು ವೇಳೆ ಮಹಿಳೆ ಪ್ರತಿಭಾನ್ವಿತರಾಗಿದ್ದರೆ, ಪರಿಸ್ಥಿತಿ ಇನ್ನಷ್ಟು ನಿರಾಶಾದಾಯಕವಾಗಿದೆ. ಇದು ತುಂಬಾ ದುಃಖಕರ” ಎಂದು ಶಮಾ ಹೇಳಿದ್ದಾರೆ.

Only 9 of 92 Assembly tickets for women, says Congress leader Shama Mohamed ahead of Kerala polls
ಕೇರಳ ಚುನಾವಣೆ: ಕಾಂಗ್ರೆಸ್ ಗೆ ಮಾಡು ಇಲ್ಲವೇ ಮಡಿ ಹೋರಾಟ (ನೇರ ನೋಟ)

ಕಾಂಗ್ರೆಸ್ ಕೇರಳ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಒಂದು ದಿನದ ನಂತರ ಶಮಾ ಮೊಹಮ್ಮದ್ ಅವರು ಈ ಹೇಳಿಕೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ವಿ.ಡಿ. ಸತೀಸನ್ ಅವರು, ಪಕ್ಷ ಸ್ಪರ್ಧಿಸುತ್ತಿರುವ ಎಲ್ಲಾ 95 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ನಾವು 55 ಸ್ಥಾನಗಳನ್ನು ಮೊದಲೇ ಘೋಷಿಸಿದ್ದೇವೆ ಮತ್ತು ಉಳಿದ 40 ಸ್ಥಾನಗಳನ್ನು ಈಗ ಅಂತಿಮಗೊಳಿಸಲಾಗಿದೆ. ಆಯ್ಕೆ ಪ್ರಕ್ರಿಯೆ ಮುಗಿದಿದೆ ಮತ್ತು ಈಗ ಪ್ರಚಾರದತ್ತ ಗಮನ ಹರಿಸುತ್ತೇವೆ” ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com