ದೇಗುಲದ ಗೆಸ್ಟ್ ಹೌಸ್ ನಲ್ಲೇ ಮಹಿಳೆ ಜೊತೆ TDP ನಾಯಕರ 'ನಾಗಿನ್' ಡ್ಯಾನ್ಸ್; Video Viral

ಕೋದಂಡರಾಮಸ್ವಾಮಿ ದೇಗುಲದಲ್ಲಿ ದೇವಾಲಯದ ಅಧ್ಯಕ್ಷನೇ ಮಹಿಳೆ ಜೊತೆ ಸೇರಿ ಅಶ್ಲೀಲವಾಗಿ ನೃತ್ಯ ಮಾಡಿರುವ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
Viral Videos Of TDP Leaders Dancing With Woman
ದೇಗುಲದ ಗೆಸ್ಟ್ ಹೌಸ್ ನಲ್ಲಿ ಟಿಡಿಪಿ ನಾಯಕರ ಅಶ್ಲೀಲ ಡ್ಯಾನ್ಸ್
Updated on

ನೆಲ್ಲೂರು: ತಿರುಮಲ ತಿರುಪತಿ ದೇಗುಲ ಅಧ್ಯಕ್ಷ ಬಿಆರ್ ನಾಯ್ಡು ಅವರ ಅಶ್ಲೀಲ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಮತ್ತೋರ್ವ ತೆಲುಗು ದೇಶಂ ಪಕ್ಷದ ನಾಯಕನ ವಿಡಿಯೋವೊಂದು ಆಂಧ್ರ ಪ್ರದೇಶದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಹೌದು.. ಅಶ್ಲೀಲ ವಿಡಿಯೋ ವಿಚಾರವಾಗಿ ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ರಾಜಿನಾಮೆ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿರುವ ಬೆನ್ನಲ್ಲೇ ಇದೀಗ ಮತ್ತದೇ ತೆಲುಗು ದೇಶಂ ಪಕ್ಷದ ಮತ್ತೋರ್ವ ನಾಯಕ ವಿಡಿಯೋವೊಂದು ಭಾರಿ ಸುದ್ದಿ ಮಾಡುತ್ತಿದೆ.

ಇತ್ತ ಆಂಧ್ರ ಪ್ರದೇಶದ ಮೈತ್ರಿ ಸರ್ಕಾರ ಬಿಆರ್ ನಾಯ್ಡು ವಿಚಾರವಾಗಿ ಮುಜುಗರಕ್ಕೀಡಾಗಿರುವಾಗಲೇ ಮತ್ತೋರ್ವ ನಾಯಕ ವಿಡಿಯೋ ವೈರಲ್ ಆಗಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Viral Videos Of TDP Leaders Dancing With Woman
ಮಹಾರಾಷ್ಟ್ರದಲ್ಲಿ ಮತ್ತೊಂದು ಕಾಮಕಾಂಡ: ಸಚಿವ ನರಹರಿ ಜಿರ್ವಾಲ್ 'ಅಶ್ಲೀಲ ವಿಡಿಯೋ' ವೈರಲ್!

ಆಗಿದ್ದೇನು?

ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಚಿಲ್ಲಕೂರು ಮಂಡಲಂನ ತಮ್ಮಿನಪಟ್ಟಣಂ ನ ಕೋದಂಡರಾಮಸ್ವಾಮಿ ದೇಗುಲದಲ್ಲಿ ದೇವಾಲಯದ ಅಧ್ಯಕ್ಷನೇ ಮಹಿಳೆ ಜೊತೆ ಸೇರಿ ಅಶ್ಲೀಲವಾಗಿ ನೃತ್ಯ ಮಾಡಿರುವ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ದೇವಾಲಯದ ಅಧ್ಯಕ್ಷ ಸತೀಶ್ ಯಾದವ್ ಮತ್ತು ದುವ್ವುರು ವಿನಯ್ ರೆಡ್ಡಿ ಸೇರಿದಂತೆ ಮೂವರು ಟಿಡಿಪಿ ನಾಯಕರು ಮಹಿಳೆ ಜೊತೆ ಬಟ್ಟೆ ಬಿಚ್ಚಿಕೊಂಡು ಅಸಭ್ಯವಾಗಿ ನಾಗಿನ್ ನೃತ್ಯ ಮಾಡುತ್ತಿರುವ ವಿಡಿಯೋ ಇದಾಗಿದ್ದು, ಇಬ್ಬರು ನಾಯಕರು ಮಹಿಳೆ ಜೊತೆ ಡ್ಯಾನ್ಸ್ ಮಾಡುತ್ತಿದ್ದರೆ ಮತ್ತೋರ್ವ ನಾಯಕ ಅದರ ವಿಡಿಯೋ ತೆಗೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ವ್ಯಾಪಕ ಆಕ್ರೋಶ

ರಾಜ್ಯದ ಪ್ರತಿಷ್ಠಿತ ದೇವಾಲಯಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವ ವ್ಯಕ್ತಿಗಳು ಹೀಗಿ ಯುವತಿಯರೊಂದಿಗೆ ಸೇರಿ ಅಶ್ಲೀಲವಾಗಿ ವರ್ತಿಸುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ವಿಡಿಯೋಗಳು ಬಯಲಿಗೆ ಬಂದರೂ ಅವರು ಅದೇ ಹುದ್ದೆಗಳಲ್ಲಿ ಮುಂದುವರೆಯುತ್ತಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ವೈಸಿಪಿ ಕೆಂಡ

ಈ ಬಗ್ಗೆ ಮೈತ್ರಿ ಸರ್ಕಾರದ ವಿರುದ್ದ ಕೆಂಡಕಾರಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷ, "ನಿಮ್ಮ ಉತ್ತಮ ಸರ್ಕಾರದಲ್ಲಿ ನಿಮ್ಮ ನಾಯಕರು ಮಾಡುತ್ತಿರುವ ದುಷ್ಕೃತ್ಯಗಳು" ಎಂದು ಹೇಳಿದೆ. ಮಾತ್ರವಲ್ಲದೇ ಅದೇ ಪೋಸ್ಟ್ ಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಟ್ಯಾಗ್ ಮಾಡಿದ್ದಾರೆ.

'ಆಂಧ್ರಪ್ರದೇಶದಲ್ಲಿ, ಬಿ.ಆರ್. ನಾಯ್ಡು ಅಶ್ಲೀಲ ವಿಡಿಯೋ ಹಗರಣ ಹಸಿರಾಗಿರುವಂತೆಯೇ ಮತ್ತೊಬ್ಬ ದೇವಾಲಯದ ಅಧ್ಯಕ್ಷರು ಸಿಕ್ಕಿಬಿದ್ದಿದ್ದಾರೆ. ಕೋದಂಡ ರಾಮಸ್ವಾಮಿ ದೇವಾಲಯದ ಅಧ್ಯಕ್ಷ ಮತ್ತು ಟಿಡಿಪಿ ಶಾಸಕ ಸೋಮಿರೆಡ್ಡಿ ಅವರ ಆಪ್ತ ಸತೀಶ್ ಯಾದವ್ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅವರೊಂದಿಗೆ, ಬೊಲ್ಲವೊಲುವಿನ ಟಿಡಿಪಿ ನಾಯಕ ದುವ್ವುರು ವಿನಯ್ ರೆಡ್ಡಿ ಮತ್ತು ಪೂರ್ವ ಕಾನುಪುರುವಿನ ಮತ್ತೊಬ್ಬ ನಾಯಕ ಬೊಬ್ಬೈ ಶಿವ ಕುಮಾರ್ ಕೂಡ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಬಿ.ಆರ್. ನಾಯ್ಡುಅವರ ವಿರುದ್ಧ ಹಿಂದಿನ ವಿವಾದದ ಹೊರತಾಗಿಯೂ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಿಷ್ಕ್ರಿಯತೆಯು ಪಕ್ಷದ ನಾಯಕರನ್ನು ಅಜಾಗರೂಕತೆಯಿಂದ ವರ್ತಿಸಲು ಪ್ರೇರೇಪಿಸಿದೆ. ನಿಮ್ಮ ನಾಯಕತ್ವದ ಆಡಳಿತದ ಸ್ಥಿತಿ ಇದು, ಅಲ್ಲಿ ಇಂತಹ ದುಷ್ಕೃತ್ಯವನ್ನು ನಿಯಂತ್ರಿಸಲಾಗುವುದಿಲ್ಲ ಎಂದು ವೈಸಿಪಿ ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com