

ವಿಶಾಖಪಟ್ಟಣಂ: ಲವರ್ ಕೊಂದು, ಆಕೆಯ ಮೃತದೇಹವನ್ನು ತುಂಡರಿಸಿ ಫ್ರೀಡ್ಜ್ ನಲ್ಲಿಟ್ಟಿದ್ದ ನೌಕಪಡೆಯ ಉದ್ಯೋಗಿಯನ್ನು ಬಂಧಿಸಲಾಗಿದೆ. ವಿಶಾಖಪಟ್ಟಣಂನ ಗಜುವಾಕ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ತಡರಾತ್ರಿ ಆರೋಪಿ ಪೊಲೀಸರ ಮುಂದೆ ಶರಣಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಆರೋಪಿಯನ್ನು ನೌಕಾಪಡೆಯ ಉದ್ಯೋಗಿ ರವೀಂದ್ರ ಎಂದು ಗುರುತಿಸಲಾಗಿದೆ. ಎಲ್‌ವಿ ನಗರದಲ್ಲಿರುವ ಆರೋಪಿ ಮನೆಯಲ್ಲಿ ತುಂಡರಿಸಿದ ಮೃತದೇಹವನ್ನು ಸ್ಥಳೀಯ ಪೊಲೀಸರು ಪತ್ತೆ ಮಾಡಿದ್ದಾರೆ.
ಆರೋಪಿ ಸಂತ್ರಸ್ತೆಯ ದೇಹವನ್ನು ಎರಡು ಭಾಗಗಳಾಗಿ ತುಂಡರಿಸಿದ್ದಾರೆ ಎಂದು ವರದಿಯಾಗಿರುವುದಾಗಿ ವಿಶಾಖಪಟ್ಟಣಂನ ಗಜುವಾಕದ ಸರ್ಕಲ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಮೃತದೇಹದ ಅರ್ಧ ಭಾಗವನ್ನು ಫ್ರೀಡ್ಜ್ ನಲ್ಲಿ ಇರಿಸಲಾಗಿತ್ತು. ಉಳಿದ ಅರ್ಧವನ್ನು ಗೋಣಿ ಚೀಲದಲ್ಲಿ ಪ್ಯಾಕ್ ಮಾಡಲಾಗಿತ್ತು. ಪತ್ನಿ ತವರು ಮನೆಗೆ ಹೋಗಿದ್ದಾಗ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆ ಮೌನಿಕಾಳನ್ನು ಮಧ್ಯಾಹ್ನ ತನ್ನ ಮನೆಗೆ ಬರುವಂತೆ ರವೀಂದ್ರ ಹೇಳಿದ್ದಾನೆ. ತದನಂತರ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಅದು ಭೀಕರ ಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.
ಆರೋಪಿ ರವೀಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗಾಜುವಾಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Advertisement