ಲೈಂಗಿಕ ದೌರ್ಜನ್ಯ-ಬೆದರಿಕೆ ಆರೋಪ: ಹಿಂದೂ ಮುಖಂಡ, ನಿರ್ದೇಶಕ ಸೇರಿ ನಾಲ್ವರ ವಿರುದ್ಧ POCSO ಕೇಸ್‌ ದಾಖಲಿಸಿದ ಕುಂಭಮೇಳ ಸುಂದರಿ ಮೊನಾಲಿಸಾ

ಮೊನಾಲಿಸಾ ಭೋಸ್ಲೆ ಸಲ್ಲಿಸಿರುವ ದೂರಿನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ, ಮಾನಸಿಕ ಹಿಂಸೆ ಹಾಗೂ ಬೆದರಿಕೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Monalisa And farman Khan
ಮೊನಾಲಿಸಾ ಮತ್ತು ಫರ್ಮಾನ್ ಖಾನ್
Updated on

ನವದೆಹಲಿ: 'ಮಹಾ ಕುಂಭಮೇಳ' ಖ್ಯಾತಿಯ ಮೊನಾಲಿಸಾ ಭೋಸ್ಲೆ ಗಂಭೀರ ಆರೋಪಗಳೊಂದಿಗೆ ಕಾನೂನು ಹೋರಾಟ ಆರಂಭಿಸಿದ್ದಾರೆ.

ಅಪ್ರಾಪ್ತೆಯರ ರಕ್ಷಣೆಗೆ ಜಾರಿಗೆ ತಂದಿರುವ ಪೋಕ್ಸೋ ಕಾಯ್ದೆ ಅಡಿಯಲ್ಲಿ ನಿರ್ದೇಶಕ ಸನೋಜ್ ಮಿಶ್ರಾ, ವಿಶ್ವ ಹಿಂದೂ ಪರಿಷತ್ ಸಂಬಂಧಿತ ಮುಖಂಡ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.

ಮೊನಾಲಿಸಾ ಭೋಸ್ಲೆ ಸಲ್ಲಿಸಿರುವ ದೂರಿನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ, ಮಾನಸಿಕ ಹಿಂಸೆ ಹಾಗೂ ಬೆದರಿಕೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 29, 2026 ರಂದು ಎಫ್‌ಐಆರ್ ದಾಖಲಾಗಿದೆ. 'ದಿ ಡೈರಿ ಆಫ್ ಮಣಿಪುರ' ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕ ಸನೋಜ್ ಮಿಶ್ರಾ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮೊನಾಲಿಸಾ ಆರೋಪಿಸಿದ್ದಾರೆ.

ಇದೇ ವೇಳೆ ವಕೀಲ ಅನಿಲ್ ವಿಲಾಯಿಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕುವ ಮೂಲಕ ಮಾನಹಾನಿ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

ಕಳೆದ ಕೆಲ ದಿನಗಳಿಂದ ಮೊನಾಲಿಸಾ ಸುದ್ದಿಯಲ್ಲಿದ್ದಾರೆ. ಅನ್ಯ ಧರ್ಮದ ಫರ್ಮಾನ್‌ ಅವರನ್ನು ವಿವಾಹವಾಗಿರುವ ಅವರು, ಆ ಬಳಿಕ ಅದೇ ವಿಚಾರವಾಗಿ ಟ್ರೆಂಡ್‌ನಲ್ಲಿದ್ದಾರೆ. ಕೆಲವರು ಅವರ ವಿವಾಹವನ್ನು ʼಲವ್‌ ಜಿಹಾದ್‌ʼ ಎಂದು ಕರೆದಿದ್ದಾರೆ. ಇದರಲ್ಲಿ ನಿರ್ದೇಶಕ ಸನೋಜ್‌ ಮಿಶ್ರಾ (Sanoj Mishra) ಕೂಡ ಇದ್ದಾರೆ.

Monalisa And farman Khan
ಕುಂಭಮೇಳ ಸುಂದರಿ ಮೊನಾಲಿಸಾ ಮದುವೆಗೆ ಬಿಗ್ ಟ್ವಿಸ್ಟ್‌: ಅಪ್ರಾಪ್ತೆ ಎಂದು ಸಾಬೀತು; ಪತಿ ಫರ್ಮಾನ್ ವಿರುದ್ಧ ಪೋಕ್ಸೋ ಕೇಸ್!

ಈ ಪ್ರಕರಣವು ಮೊನಾಲಿಸಾ ಅವರ ವೈಯಕ್ತಿಕ ಜೀವನದ ವಿವಾದದೊಂದಿಗೆ ತಳುಕು ಹಾಕಿಕೊಂಡಿದೆ. ಮೊನಾಲಿಸಾ ಅವರು ಫರ್ಮಾನ್ ಎಂಬುವವರನ್ನು ವಿವಾಹವಾಗಿದ್ದು, ಇದು ಕುಟುಂಬದ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಮದುವೆಯ ಸಮಯದಲ್ಲಿ ಮೊನಾಲಿಸಾ ಅಪ್ರಾಪ್ತ ವಯಸ್ಕಳಾಗಿದ್ದಳು ಮತ್ತು ಅವಳನ್ನು ದಾರಿತಪ್ಪಿಸಿ ಮದುವೆಯಾಗಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಈ ಮದುವೆಯ ಹಿಂದೆ 'ಲವ್ ಜಿಹಾದ್' ಸಂಚಿದೆ ಎಂದು ಆರೋಪಿಸಿ ಫರ್ಮಾನ್ ವಿರುದ್ಧ ಈ ಹಿಂದೆ ದೂರು ನೀಡಿದ್ದರು.

ಆದರೆ, ಮೊನಾಲಿಸಾ ಅವರು "ನನಗೆ ಈಗ 18 ವರ್ಷ ತುಂಬಿದೆ, ನಾನು ಪ್ರಾಪ್ತ ವಯಸ್ಕಳು. ನನ್ನ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ನನಗಿದೆ," ಎಂದು ತಮ್ಮ ಮದುವೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸದ್ಯ ಈ ಬಗ್ಗೆ ನ್ಯಾಯಾಲಯದ ಮುಂದೆ ಹಾಜರಾಗಿ ಮೊನಾಲಿಸಾ ತಮ್ಮ ಹೇಳಿಕೆಯನ್ನು ದಾಖಲಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಘಟನೆಯು ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿರುವುದರಿಂದ, ಈ ಪ್ರಕರಣವನ್ನು ಮುಂದಿನ ತನಿಖೆಗಾಗಿ ಮಧ್ಯಪ್ರದೇಶ ಪೊಲೀಸರಿಗೆ ವರ್ಗಾಯಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com