ಪಶ್ಚಿಮ ಬಂಗಾಳ: ಮಮತಾ ಕ್ಷೇತ್ರದ ಕೌಂಟಿಂಗ್ ಸೆಂಟರ್ ಮುಂಭಾಗ ಗಲಾಟೆ!

ಸ್ಟ್ರಾಂಗ್ ರೂಮ್‌ಗೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಗುರುವಾರ ರಾತ್ರಿ ಸಖಾವತ್ ಸ್ಮಾರಕ ಬಾಲಕಿಯರ ಶಾಲೆಯ ಅದೇ ಎಣಿಕೆ ಕೇಂದ್ರದ ಮುಂದೆ ಬ್ಯಾನರ್ಜಿ ನಾಲ್ಕು ಗಂಟೆಗಳ ಕಾಲ ಧರಣಿ ನಡೆಸಿದ್ದರು. ಇದಾದ ಬೆನ್ನಲ್ಲೇ ಈ ಘಟನೆ ನಡೆದಿದೆ.
Ruckus outside counting centre
ಕೌಂಟಿಂಗ್ ಸೆಂಟರ್ ಮುಂಭಾಗದ ಚಿತ್ರ
Updated on

ಭವಾನಿಪುರ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭವಾನಿಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗೂ ಒಂದು ದಿನ ಮುನ್ನಾ ಭಾರಿ ಗಲಾಟೆ ನಡೆದಿದೆ. ಬಿಜೆಪಿಯ ಧ್ವಜ ಹೊಂದಿರುವ ಎರಡು ಕಾರುಗಳಿಗೆ ಇವಿಎಂ ಇಟ್ಟಿರುವ ಶಾಲಾ ಆವರಣ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಸ್ಟ್ರಾಂಗ್ ರೂಮ್‌ಗೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಗುರುವಾರ ರಾತ್ರಿ ಸಖಾವತ್ ಸ್ಮಾರಕ ಬಾಲಕಿಯರ ಶಾಲೆಯ ಅದೇ ಎಣಿಕೆ ಕೇಂದ್ರದ ಮುಂದೆ ಬ್ಯಾನರ್ಜಿ ನಾಲ್ಕು ಗಂಟೆಗಳ ಕಾಲ ಧರಣಿ ನಡೆಸಿದ್ದರು. ಇದಾದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಮತದಾನ ಮುಗಿದ ನಂತರ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕಾಗಿ ಟಿಎಂಸಿ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಭದ್ರ ಮಾಡಿರುವ ಸ್ಟ್ರಾಂಗ್ ರೂಮ್‌ಗಳ ಭದ್ರತೆಯ ಮೇಲೆ ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ನಾಯಕರು ಗಮನ ಕೇಂದ್ರೀಕರಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೆಲುವಿನ" ವಿಶ್ವಾಸವನ್ನು ವ್ಯಕ್ತಪಡಿಸಿದ್ದರೂ, ಮತ ಎಣಿಕೆಗೂ ಮುನ್ನಾ ಎಣಿಕೆ ದುಷ್ಕೃತ್ಯ ಮತ್ತು ಇವಿಎಂ ತಿರುಚುವಿಕೆಯ" ಬಗ್ಗೆ ಪದೇ ಪದೇ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ.

ಭಾನುವಾರ ಬೆಳಿಗ್ಗೆ, ಎಣಿಕೆ ಕೇಂದ್ರದಿಂದ 100 ಮೀಟರ್ ದೂರದಲ್ಲಿ ಬೀಡುಬಿಟ್ಟಿದ್ದ ಟಿಎಂಸಿ ಕಾರ್ಯಕರ್ತರು, ಬಿಜೆಪಿ ಧ್ವಜಗಳನ್ನು ಹೊಂದಿರುವ ಎರಡು ಕಾರುಗಳು ಆವರಣ ಪ್ರವೇಶಿಸಿ ಸ್ಟ್ರಾಂಗ್ ರೂಂ ಬಳಿ ಹೋಗಿವೆ ಎಂದು ಆರೋಪಿಸಿದರು.

ಸ್ಥಳದಲ್ಲಿರುವ ಸಿಎಪಿಎಫ್ ಸಿಬ್ಬಂದಿ ಅಧಿಕೃತ ಗುರುತಿನ ಚೀಟಿ ಇಲ್ಲದ ಯಾವುದೇ ವಾಹನ ಅಥವಾ ವ್ಯಕ್ತಿಯನ್ನುಎಣಿಕೆ ಕೇಂದ್ರದ ಆವರಣ ಪ್ರವೇಶಿಸಲು ಬಿಡುತ್ತಿಲ್ಲ. ಹಾಗಾದರೆ ಕಳೆದ ಕೆಲವು ದಿನಗಳಿಂದ ನಾವು ನೋಡದ ಈ ಕಾರು ಹೋಗಲು ಹೇಗೆ ಅವಕಾಶ ನೀಡಲಾಯಿತು? ನಾವು ಪ್ರತಿಭಟನೆ ನಡೆಸಿದ ನಂತರ ಕೇಂದ್ರ ಪಡೆಗಳು ನಮ್ಮನ್ನು 100 ಮೀಟರ್ ದೂರ ಸರಿಯುವಂತೆ ಕೇಳಿಕೊಂಡವು ಎಂದು ಟಿಎಂಸಿ ಕಾರ್ಯಕರ್ತರೊಬ್ಬರು ಹೇಳಿದರು.

Ruckus outside counting centre
ಪಶ್ಚಿಮ ಬಂಗಾಳ: ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮೇ 21 ರಂದು ಮರು ಮತದಾನ; ಚುನಾವಣಾ ಆಯೋಗ ಆದೇಶ

ಕಾರಿನಲ್ಲಿ ಆಕ್ಷೇಪಾರ್ಹವಾದದ್ದು ಏನೂ ಕಂಡುಬಂದಿಲ್ಲವಾದ್ದರಿಂದ ಅದನ್ನು ಬಿಡಲು ಅನುಮತಿಸಲಾಯಿತು ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖುದಿರಾಮ್ ಅನುಶೀಲನ್ ಕೇಂದ್ರದಲ್ಲಿರುವ ಇವಿಎಂ ಸ್ಟ್ರಾಂಗ್ ರೂಂನಲ್ಲಿ ಅಂಚೆ ಮತಪತ್ರಗಳ ಕವರ್‌ಗಳನ್ನು ಅನಧಿಕೃತವಾಗಿ ವಿಂಗಡಿಸಲಾಗಿದೆ ಎಂದು ಆರೋಪಿಸಿ TMC ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com