ಪಂಚರಾಜ್ಯ ಚುನಾವಣೆ ಫಲಿತಾಂಶ 2026: ಬಂಗಾಳದಲ್ಲಿ BJP ಮುನ್ನಡೆ, ಕೇಸರಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಆಲೂ ಪೂರಿ, ರಸಗುಲ್ಲ ಸಿದ್ಧತೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಹಂಚಲು ಸಾಂಪ್ರದಾಯಿಕ ' ಆಲೂ ಪೂರ್ರಿ' ಮತ್ತು ರಸಗುಲ್ಲಾ ಸಿಹಿತಿಂಡಿಗಳನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ.
From Alu-puri to Rasgulla food prep in full swing at BJP HQ
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಿಹಿ ತಿನಿಸುಗಳ ಸಿದ್ಧತೆ
Updated on

ಕೋಲ್ಕತಾ: ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಆರಂಭಿಕ ಹಂತದಲ್ಲಿ ಬಂಗಾಳದಲ್ಲಿ ಬಿಜೆಪಿ ಭಾರಿ ಮುನ್ನಡೆಯೊಂದಿಗೆ ದಾಪುಗಾಲಿರಿಸಿದೆ.

ಹೌದು.. ಪಂಚ ರಾಜ್ಯಗಳಾದ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಸೋಮವಾರ ಬೆಳಿಗ್ಗೆ ಆರಂಭವಾಗಿದ್ದು, ಬಂಗಾಳದಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ.

ಇದರ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಹಂಚಲು ಸಾಂಪ್ರದಾಯಿಕ ' ಆಲೂ ಪೂರ್ರಿ' ಮತ್ತು ರಸಗುಲ್ಲಾ ಸಿಹಿತಿಂಡಿಗಳನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ.

ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಬಾಣಸಿಗ, 'ವ್ಯಾಪಕವಾದ ಪಾಕಶಾಲೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತಿದೆ' ಎಂಬ ವಿವರಗಳನ್ನು ಹಂಚಿಕೊಂಡರು.

From Alu-puri to Rasgulla food prep in full swing at BJP HQ
Karnataka By-poll & Assembly elections 2026 LIVE updates (KL, TN, AS, WB): ಮತ ಎಣಿಕೆ: ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ನಿಕಟ ಸ್ಪರ್ಧೆ, ಕೇರಳದಲ್ಲಿ ಕಾಂಗ್ರೆಸ್ ಮೈತ್ರಿಕೂಟ, ತ.ನಾಡಿನಲ್ಲಿ ಟಿವಿಕೆ ಮುನ್ನಡೆ

"ನಾವು ಬೆಳಿಗ್ಗೆ 4 ಗಂಟೆಯಿಂದ ಅಡುಗೆ ತಯಾರಿಸುತ್ತಿದ್ದೇವೆ. ಸರಿಸುಮಾರು 400 ರಿಂದ 500 ಜನರಿಗೆ ಆಹಾರವನ್ನು ತಯಾರಿಸಲಾಗುತ್ತಿದೆ. ಉಪಾಹಾರ ಮೆನುವಿನಲ್ಲಿ ಸ್ಯಾಂಡ್‌ವಿಚ್‌ಗಳು, ಆಲೂ ಪೂರಿ, ಪೋಹಾ ಮತ್ತು ಜಿಲೇಬಿ ಸೇರಿದಂತೆ ವಿವಿಧ ರೀತಿಯ ಆಹಾರಗಳಿವೆ. ಊಟಕ್ಕೆ ಪೂರಕವಾಗಿ, ತಾಜಾ ಹಣ್ಣುಗಳು, ಲಸ್ಸಿ, ರಬ್ರಿ ಮತ್ತು ಸಾಂಪ್ರದಾಯಿಕ ಮಿಶ್ತಿ ದೋಯಿಗಳನ್ನು ಸಹ ತಯಾರಿಸಲಾಗಿದೆ" ಎಂದು ಅವರು ಹೇಳಿದರು.

ಅಂತೆಯೇ "ಊಟಕ್ಕೆ, ನಾವು ದಾಲ್ ತಡ್ಕಾ, ಕಧಿ ಪಕೋಡ, ಪರ್ವಾಲ್ ಆಲೂ, ಅನ್ನ ಮತ್ತು ಪಾಪಡ್ ಅನ್ನು ಹೊಂದಿದ್ದೇವೆ" ಎಂದು ತಯಾರಿಸುತ್ತಿದ್ದೇವೆ ಎಂದರು.

ಈ ಸಂದರ್ಭವನ್ನು ಇನ್ನಷ್ಟು ಮಧುರಗೊಳಿಸಲು, ಸಿಹಿತಿಂಡಿ ಮೆನುವಿನಲ್ಲಿ ನಿರ್ದಿಷ್ಟವಾಗಿ ಬಂಗಾಳಿ ರಸಗುಲ್ಲಾ ಮತ್ತು ಜಲೇಬಿಗಳನ್ನು ಸೇರಿಸಲಾಗಿದ್ದು, ದಿನವಿಡೀ ಸುಮಾರು 400-500 ಜನರು ಸೇರುವ ನಿರೀಕ್ಷೆಯಿದ್ದು, ಅವುಗಳನ್ನು ಪೂರೈಸಲು ಸಿದ್ಧಪಡಿಸಲಾಗುತ್ತಿದೆ.

ಬಿಜೆಪಿ-ಟಿಎಸಿ ತೀವ್ರ ಪೈಪೋಟಿ

ಇನ್ನು ಮತಎಣಿಕೆಯ ಆರಂಭಿಕ ಹಂತದಲ್ಲಿ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇತ್ತೀಚಿನ ವರದಿಗಳ ಪ್ರಕಾರ ಒಟ್ಟು 294 ಕ್ಷೇತ್ರಗಳ ಪೈಕಿ ಬಿಜೆಪಿ 71 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಟಿಎಂಸಿ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com