

ನವದೆಹಲಿ: ಪಶ್ಚಿಮ ಬಂಗಾಳದ ಭವಾನಿಪುರ ಮತ್ತು ನಂದಿಗ್ರಾಮದಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸೋಮವಾರ, ಪಕ್ಷದ ಮುಂದಿನ ಗಮನ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳ ಮೇಲೆ ಎಂದು ಹೇಳಿದರು.
'ಮಮತಾ ಬ್ಯಾನರ್ಜಿ, ತೇಜಸ್ವಿ ಯಾದವ್, ರಾಹುಲ್ ಗಾಂಧಿ ಕಥೆ ಮುಗಿದಿದೆ, ಮುಂದಿನ ಟಾರ್ಗೆಟ್ ಅಖಿಲೇಶ್ ಯಾದವ್' ಎಂದು ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥರನ್ನು ಉಲ್ಲೇಖಿಸಿ ಹೇಳಿದರು. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಬಿಜೆಪಿಗೆ ಪ್ರಮುಖ ಸವಾಲಾಗಿರುತ್ತಾರೆ.
ಪಶ್ಚಿಮ ಬಂಗಾಳದಲ್ಲಿ ಹಲವಾರು ಹಿಂಸಾಚಾರ ಘಟನೆಗಳಲ್ಲಿ ಸಾವಿಗೀಡಾದ ಬಿಜೆಪಿ ಕಾರ್ಯಕರ್ತರಿಗೆ ಗೌರವ ಸಲ್ಲಿಸುತ್ತಾ, ನಿರ್ಗಮಿತ ಮುಖ್ಯಮಂತ್ರಿ ಬ್ಯಾನರ್ಜಿ ಅವರ ರಾಜಕೀಯ ವನವಾಸ ಆರಂಭವಾಗಿದೆ. ಅವರು 2021ರಲ್ಲಿ ನಂದಿಗ್ರಾಮವನ್ನು ಕಳೆದುಕೊಂಡರು ಮತ್ತು ಈ ಬಾರಿ ಭವಾನಿಪುರವನ್ನು 15,000ಕ್ಕೂ ಹೆಚ್ಚು ಮತಗಳಿಂದ ಕಳೆದುಕೊಂಡಿದ್ದಾರೆ' ಎಂದು ಹೇಳಿದರು.
ತೃಣಮೂಲ ಕಾಂಗ್ರೆಸ್ ಅನ್ನು ಆಮ್ ಆದ್ಮಿ ಪಕ್ಷಕ್ಕೆ ಹೋಲಿಸಿದ ಅವರು, ಟಿಎಂಸಿ ಅಂತ್ಯವಾಗಲಿದೆ. ಬ್ಯಾನರ್ಜಿ ನೇತೃತ್ವದ ಪಕ್ಷವು ಭ್ರಷ್ಟ, ಕುಟುಂಬ ಆಧಾರಿತ ಮತ್ತು ಯಾವುದೇ ಸಿದ್ಧಾಂತವಿಲ್ಲದ ಪಕ್ಷವಾಗಿದೆ. ನಂದಿಗ್ರಾಮದ ಹಿಂದೂ ಜನರು ನನ್ನನ್ನು ಮತ್ತೆ ಗೆಲ್ಲಿಸಿದರು. ಅಲ್ಲಿ, ಇಡೀ ಮುಸ್ಲಿಂ ಮತಗಳು ಟಿಎಂಸಿಗೆ ಹೋದವು. ಹಿಂದೂ, ಸಿಖ್, ಬೌದ್ಧ ಮತ್ತು ಜೈನರು ನನಗೆ ಮತ ಹಾಕಿದರು. ಇದು ಹಿಂದುತ್ವ, ಬಂಗಾಳ ಮತ್ತು ಪ್ರಧಾನಿ ಮೋದಿಯವರ ಗೆಲುವು' ಎಂದು ಅವರು ಹೇಳಿದರು.
ಹಲವಾರು ಸಿಪಿಎಂ ಬೆಂಬಲಿಗರು ತಮಗೆ ಮತ ಹಾಕಿದ್ದಾರೆ. ಹಲವಾರು ಟಿಎಂಸಿ ಸಂಸದರು ಮತ್ತು ಕಾರ್ಯಕರ್ತರು ತಮ್ಮೊಂದಿಗೆ ಸೇರಲಿದ್ದಾರೆ ಎಂದು ಬಿಜೆಪಿ ಮುಖಂಡ ಹೇಳಿದರು.
ಚುನಾವಣಾ ಆಯೋಗದ ಪ್ರಕಾರ, ಮತ ಎಣಿಕೆಯ ಎಲ್ಲ 20 ಸುತ್ತುಗಳ ನಂತರ ಸುವೇಂದು ಅಧಿಕಾರಿ ಭಬಾನಿಪುರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು 15,105 ಮತಗಳಿಂದ ಸೋಲಿಸಿದರು. ಈ ಫಲಿತಾಂಶವು 2021ರ ನಂದಿಗ್ರಾಮ ಚುನಾವಣೆಯ ಪುನರಾವರ್ತನೆಯಾಗಿತ್ತು. ಅಲ್ಲಿ ಬಂಗಾಳದ ರಾಜಕೀಯ ನಿರೂಪಣೆಯನ್ನು ಸುವೇಂದು ಅಧಿಕಾರಿ ಪುನರ್ ರೂಪಿಸಿದ್ದರು.
ಒಂದು ಕಾಲದಲ್ಲಿ ಬ್ಯಾನರ್ಜಿಯವರ ಆಪ್ತ ಸಹಾಯಕ ಮತ್ತು ಪೂರ್ವ ಮಿಡ್ನಾಪುರದಂತಹ ಜಿಲ್ಲೆಗಳಲ್ಲಿ ಟಿಎಂಸಿ ಉದಯದ ಪ್ರಮುಖ ಶಿಲ್ಪಿಯಾಗಿದ್ದ ಅಧಿಕಾರಿ, ಈಗ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕೆಂಬ ಚರ್ಚೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ನಂದಿಗ್ರಾಮದಲ್ಲಿ ಟಿಎಂಸಿಯ ಪಾಬಿತ್ರ ಕರ್ ಅವರನ್ನು ಸೋಲಿಸಿದರು.
Advertisement