ರಾಹುಲ್ ಗಾಂಧಿ ' ಅನ್ ಫಿಟ್ ಲೀಡರ್: ಇಂಡಿಯಾ ಒಕ್ಕೂಟ ಶೀಘ್ರದಲ್ಲೇ ಪತನ- ಬಿಜೆಪಿ

ಚುನಾವಣೆಯಲ್ಲಿ "ಮತ ಕಳ್ಳತನ' ಆರೋಪ ಮಾಡಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ವಾಗ್ದಾಳಿ ನಡೆಸಿದರು. ಸ್ವತಃ ಕಳ್ಳರಾಗಿರುವವರು ಇತರರನ್ನು ಸಹ ಕಳ್ಳರೆಂದು ಪರಿಗಣಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
Rahul Gandhi
ರಾಹುಲ್ ಗಾಂಧಿ
Updated on

ನವದೆಹಲಿ: ಇಂಡಿಯಾ ಒಕ್ಕೂಟ ಮುನ್ನಡೆಸುವಲ್ಲಿ ರಾಹುಲ್ ಗಾಂಧಿ ಅನ್ ಫಿಟ್ ಲೀಡರ್ ಎಂದು ಬಿಜೆಪಿ ಬುಧವಾರ ಕರೆದಿದ್ದು, ಅವರ ನಾಯಕತ್ವದಿಂದಲೇ ವಿರೋಧ ಪಕ್ಷಗಳ ಒಕ್ಕೂಟ ಶೀಘ್ರದಲ್ಲೇ ಪತನವಾಗಲಿದ ಎಂದು ಹೇಳಿದೆ.

ಚುನಾವಣೆಯಲ್ಲಿ "ಮತ ಕಳ್ಳತನ' ಆರೋಪ ಮಾಡಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ವಾಗ್ದಾಳಿ ನಡೆಸಿದರು. ಸ್ವತಃ ಕಳ್ಳರಾಗಿರುವವರು ಇತರರನ್ನು ಸಹ ಕಳ್ಳರೆಂದು ಪರಿಗಣಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿನ 240 ಬಿಜೆಪಿ ಸಂಸದರಲ್ಲಿ ಸರಿಸುಮಾರು ಪ್ರತಿ ಆರನೇ ಸಂಸದರು "ಮತ ಕಳ್ಳತನ"ದ ಮೂಲಕ ಗೆದ್ದಿದ್ದಾರೆ. ಅವರನ್ನು ಗುರುತಿಸುವುದು ಕಷ್ಟವೇನಲ್ಲ. ಬಿಜೆಪಿಯ ಸ್ವಂತ ಭಾಷೆಯಲ್ಲಿ ನಾವು ಅವರನ್ನು 'ಒಳನುಸುಳುವವರು' ಎಂದು ಕರೆಯಬೇಕೆ? ಹರಿಯಾಣದಲ್ಲಿ ಇಡೀ ಸರ್ಕಾರ 'ಒಳನುಸುಳುಕೋರರು ಆಗಿದ್ದಾರೆ ಎಂದು ಎಕ್ಸ್ ನಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದರು.

ಮತ ಕಳ್ಳತನದ ಮೂಲಕವೇ ಗೆದ್ದವರನ್ನು ಗುರುತಿಸುವುದು ಕಷ್ಟವೇನಲ್ಲ. ಬಿಜೆಪಿಯ ಪರಿಭಾಷೆಯಲ್ಲಿ ಹೇಳುವುದಾದರೆ ಅಂತಹವರನ್ನು ‘ನುಸುಳುಕೋರರು’ ಎಂದು ಕರೆಯಬೇಕೇ?, ಇನ್ನು ಹರಿಯಾಣದ ಕಥೆಯೇನು? ಅಲ್ಲಿರುವ ಇಡೀ ಸರ್ಕಾರ ನುಸುಳುಕೋರರು ಇದ್ದಂತೆ. ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಯನ್ನು ತಿರುಚಲು ಬಿಜೆಪಿ, ಚುನಾವಣಾ ಆಯೋಗವನ್ನು ರಿಮೋಟ್ ಕಂಟ್ರೋಲ್ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಂಬೀತ್ ಪಾತ್ರ, ಹರಿಯಾಣದ ಜನರು ಬಿಜೆಪಿ ಸರ್ಕಾರಕ್ಕೆ ನೀಡಿದ ಜನಾದೇಶವನ್ನು ರಾಹುಲ್ ಗಾಂಧಿ ಅವಮಾನಿಸಿದ್ದಾರೆ ಎಂದು ಹೇಳಿದರು.

Rahul Gandhi
'ಮತ ಕಳ್ಳತನದಿಂದ ಗೆದ್ದಿರುವ ಬಿಜೆಪಿ ಸಂಸದರು ನುಸುಳುಕೋರರು: ನ್ಯಾಯಸಮ್ಮತ ಚುನಾವಣೆ ನಡೆದರೆ ಲೋಕಸಭೆಯಲ್ಲಿ 140 ಸ್ಥಾನ ಗೆಲ್ಲುತ್ತಿರಲಿಲ್ಲ'

"ಮತಗಳನ್ನು ಮಾತ್ರವಲ್ಲದೇ ಸೀಟುಗಳನ್ನು ಕದಿಯಲಾಗುತ್ತಿದೆ. ಆದರೆ ಈಗ ಇಡೀ ಸರ್ಕಾರವನ್ನು ಕದಿಯಲಾಗಿದೆ ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ. ಇದು ಒಂದು ಸರ್ಕಾರವೇ ಅಥವಾ ನಿಮ್ಮ ಸೋದರ ಮಾವನ ಜಮೀನಿನಲ್ಲಿ ಕದಿಯಬಹುದೇ? ಕಳ್ಳನು ಎಲ್ಲರನ್ನೂ ಕಳ್ಳರಂತೆ ನೋಡುತ್ತಾನೆ" ಎಂದು ಸಂಬೀತ್ ಪಾತ್ರ ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com